ಬೆಂಗಳೂರು : ನಿಮ್ಮ ಶಾಸಕರ ಬಾಯಿ ಮುಚ್ಚಿಸಲು ಆಗಲ್ಲವೇ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಡಿಸಿಎಂ ಪರಮೇಶ್ವರ ಮೇಲೆ ಗರಂ ಆಗಿದ್ದಾರೆ.. ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಗರಂ ಆಗಿ ರಾಜೀನಾಮೆ ನೀಡಲು ಸಿದ್ದ ಎಂದು ಕೈ ನಾಯಕರಿಗೆ ವಾರ್ನಿಂಗ್ ನೀಡಿದ್ದರು. ಈ ಹೇಳಿಕೆ ನೀಡಿದ ಬಳಿಕ ಬಜೆಟ್ ಸಭೆಯಲ್ಲಿ ಭಾಗವಹಿಸುವ ಮುನ್ನ ಡಿಸಿಎಂ ಪರಮೇಶ್ವರ್ ಮೇಲೆ ಕಿಡಿಕಾರಿದ್ದಾರೆ. ಕೈ ಶಾಸಕರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಒಬ್ಬರು ಅಭಿವೃದ್ಧಿ ಕಾರ್ಯ ಆಗ್ತಿಲ್ಲ ಅಂತಾರೆ, ಕೆಲವರು ಸಿದ್ದರಾಮಯ್ಯನವರೇ ಸಿಎಂ ಅಂತಾರೆ ಎಂದು ಹೆಚ್ ಡಿಕೆ ಡಿಸಿಎಂ ಪರಮೇಶ್ವರ್ಗೆ ಸಿಟ್ಟಿನಲ್ಲೇ ಮಾತನಾಡಿದ್ದಾರೆ. ಇನ್ನೂ ಸಮ್ಮಿಶ್ರ ಸರ್ಕಾರ ಬಂದು ಏಳು ತಿಂಗಳಾಗ್ತಿದೆ. ಏನ್ಲೆಲ್ಲಾ ಕಾರ್ಯಕ್ರಮಗಳು ಆಗುತ್ತಿವೆ ಎಂಬುದು ನಿಮಗೂ ಗೊತ್ತು. ನಿಮಗೆ ನಿಮ್ಮ ಪಕ್ಷದ ಶಾಸಕರ ಬಾಯಿ ಮುಚ್ಚಿಸಲು ಆಗಲ್ಲವೇ ಎಂದು ಡಿಸಿಎಂ ವಿರುದ್ದ ಕಿಡಿಕಾರಿದ್ದಾರೆ. ನಿಮ್ಮ ಹೈಕಮಾಂಡ್ ಜೊತೆಗೆ ಚರ್ಚಿಸ್ತೀನಿ. ಅವರಿಗೆ ಏನು ಮಾಡಬೇಕೆಂಬುದು ಗೊತ್ತಿದೆ. ಈಗಲೇ ರಾಜೀನಾಮೆ ಕೊಟ್ಟು ಹೋಗ್ತೀನಿ ಎಂದು ಬೇಸರದಿಂದಲೇ ಮಾತನಾಡಿದರು.ಈ ವೇಳೆ ಡಿಸಿಎಂ ಪರಮೇಶ್ವರ್ ಸಿಎಂ ಕುಮಾರಸ್ವಾಮಿ ಅವರನ್ನು ಸಮಾಧಾನ ಪಡಿಸಿ, ಇನ್ಮುಂದೆ ಯಾರೂ ಈ ತರ ಮಾತನಾಡಲ್ಲ. ನಾನು ಸೋಮಶೇಖರ್ ಜೊತೆ ಮಾತನಾಡುತ್ತೇನೆ ಎಂದು ಸಮಾಧಾನ ಹೇಳಿದರು.
ನಿಮ್ಮ ಶಾಸಕರ ಬಾಯಿ ಮುಚ್ಚಿಸಲು ಆಗಲ್ಲವೇ..? ಡಿಸಿಎಂ ವಿರುದ್ಧ HDK ಗರಂ

Please follow and like us: