ಛೇ..ರಾಜ್ಯ ಸರ್ಕಾರವೇ ಇವ್ರ ಹಸಿವಿನ ಕೂಗು ಕೇಳಲಿಲ್ಲವೇ..!

ಲಿಂಗಸೂಗೂರು: ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ಸಲುವಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ.
ಸದ್ಯ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋನವಾಟ್ಲ ಗ್ರಾಮದಲ್ಲಿ ಕೂಲಿ ಕೆಲಸ ಸಿಗದೇ ಆಹಾರಕ್ಕಾಗಿ ಮಹಿಳೆಯರು ಪರದಾಡುತ್ತಿದ್ದಾರೆ.ಜೊತೆಗೆ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿರುವ ಗ್ರಾಮದ ಅನೇಕ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಕೈ ಚಾಚುವಂತಾಗಿದೆ. ಅಲ್ಲದೆ, ಮನೆಯಲ್ಲಿ ಮನೆಯಲ್ಲಿ ಅಕ್ಕಿ ಬೇಳೆ ಮುಗಿದು ಹೋಗಿದೆ.ಹೀಗಾಗಿ ದಿನಸಿ ವಸ್ತುಗಳು ಇಲ್ಲದೇ ಸಹಾಯಕ್ಕೆ ಮಹಿಳೆಯರು,ವೃದ್ದರು ಅಂಗಲಾಚುತ್ತಿದ್ದಾರೆ.
ಅದರಲ್ಲೂ ಗೋನವಾಟ್ಲ ಗ್ರಾಮದ ೨೦ ಕ್ಕೂ ಹೆಚ್ಚು ಕುಟುಂಬಗಳು ಆಹಾರ ಇಲ್ಲದೇ ಪರದಾಟ ನಡೆಸಿದ್ದು, ನಮಗೆ ರೇಷನ್ ಕೊಡಿ ಅಂತಾ ಪರಿಪರಿಯಾಗಿ ನಿವಾಸಿಗಳು ಬೇಡುತ್ತಿದ್ದಾರೆ.
ಇನ್ನೂ ರಾಜ್ಯ ಸರ್ಕಾರವಾಗಲಿ,ರಾಯಚೂರು ಜಿಲ್ಲಾಡಳಿತಕ್ಕಾಗಲಿ ಅದ್ಯಾಕೋ ಇವರ ಹಸಿವ ಕೂಗು ಕೇಳಿಲ್ಲ ಅನ್ನಿಸುತ್ತದೆ.ಹೀಗಾಗಿಯೇ ವೃದ್ಧ ಮಹಿಳೆಯರು ನಮಗೆ ಸಹಾಯ ಮಾಡಿ ಎಂದು ಅಂಗಲಾಚಿ ಹಸಿವಿನಲ್ಲೇ ಒದಾಟ ನಡೆಸಬೇಕಾಗಿ ಬಂದಿದೆ.

ವೀರೇಶ್ ಲಿಂಗಸೂಗೂರು ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು (ರಾಯಚೂರು)

Please follow and like us:

Related posts

Leave a Comment