ಸುಳ್ ಸುದ್ದಿಯಿಂದ ಬ್ಯಾಂಕ್ ಎದುರು ಜನಜಾತ್ರೆ..!

ಹುಬ್ಬಳ್ಳಿ: ಲಾಕ್‌ಡೌನ್ ಮಧ್ಯೆಯೂ ಜನರು ಬ್ಯಾಂಕ್‌ಗಳಿಗೆ ಮುಗುಬಿದ್ದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.
ಜನಧನ್ ಖಾತೆಗೆ ಪ್ರಧಾನಿ ನರೇಂದ್ರ ಮೋದಿ ೫೦೦ ಹಾಕಿದ್ದು,ಅದನ್ನು ಈ ವಾರದಲ್ಲಿ ತೆಗೆದುಕೊಳ್ಳದಿದ್ರೆ ಹಣ ಮರಳಿ ಹೋಗುತ್ತದೆ ಎಂದು ಜನರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಹೀಗಾಗಿ ದೇಶಪಾಂಡೆ ನಗರದ ಎಸ್‌ಬಿಐ ಶಾಖೆ ಸೇರಿದಂತೆ ನಗರದ ಹಲವು ಬ್ಯಾಂಕ್‌ಗಳ ಮುಂದೆ ಜನರು ಜಮಾಯಿಸಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂತು.
ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಬ್ಯಾಂಕ್‌ಗಳ ಮುಂದೆ ಜಮಾಯಿಸಿದ್ದು, ಬ್ಯಾಂಕ್ ಸಿಬ್ಬಂದಿ ಅಂತರ ಕಾಯ್ದುಕೊಳ್ಳುವಂತೆ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment