ದೇವದುರ್ಗದಲ್ಲಿ ಅಧ್ಯಕ್ಷ,ಸದ್ಯಸರಿರೋ ವಾರ್ಡ್ ನಲ್ಲೇ ನೀರಿಗೆ ಬರ..

ದೇವದುರ್ಗ : ಕೊರೊನಾ ವೈರಸ್ ಹರಡುವಿಕೆ ಹಾಗೂ ಲಾಕ್‌ಡೌನ್ ನಡುವೆಯೇ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಆರಂಭಗೊAಡಿದೆ.
ಸದ್ಯ ಬರದ ಜಿಲ್ಲೆಗಳಲ್ಲಿ ನೀರಿಗಾಗಿ ಜನರು ಪರಿತಪಿಸುತ್ತಿದ್ದು, ದೇವದುರ್ಗ ತಾಲೂಕಿನಲ್ಲೂ ನೀರಿನ ಸಮಸ್ಯೆ ತಲೆ ದೋರಿದೆ.
ಅಂದ ಹಾಗೇ ಇಲ್ಲಿನ ಜಾಲಹಳ್ಳಿಯ ವಾರ್ಡ್ ನಂಬರ್ ೯ರಲ್ಲಿನ ಶೆಟ್ಟಿ ವೀರಭದ್ರಪ್ಪ ಆಯಿಲ್ ಮಿಲ್‌ನಿಂದ ರಂಗಪ್ಪ ಕಡೆಮನೆವರೆಗೆ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.
ಸದ್ಯ ಈ ವಾರ್ಡ್ನಲ್ಲಿ ಗ್ರಾಮ ಪಂಚಾಯತಿ ಹಾಲಿ ಹಾಗೂ ಮಾಜಿ ಅಧ್ಯಕ್ಷರು,ಜೊತೆಗೆ ನಾಲ್ವರು ಸದಸ್ಯರಿದ್ದು ಇಲ್ಲಿನ ಜನರಿಗೆ ಸರಿಯಾಗಿ ನೀರು ಸಿಗದಂತಾಗಿದೆ. ಅಲ್ಲದೆ, ಗ್ರಾಮದ ಬೇರೆ ಎಲ್ಲಾ ವಾರ್ಡ್ಗಳಲ್ಲಿ ದಿನ ನಿತ್ಯ ನೀರು ಬಿಡಲಾಗುತ್ತಿದ್ದು ಈ ವಾರ್ಡ್ನಲ್ಲಿ ಮಾತ್ರ ೨ ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ.
ವಿಶೇಷವಾಗಿ ಇಲ್ಲಿನ ಜನರು ದುಡಿಯುವ ವರ್ಗದವರಾಗಿರುವುದರಿಂದ ಬೆಳಗಿನ ಜಾವ ೫ ಗಂಟೆ ಸುಮಾರಿಗೆ ನೀರು ಬಿಟ್ಟು ಕೈ ತೊಳೆದುಕೊಳ್ಳಲಾಗುತ್ತಿದೆ. ಅದು ಕೇವಲ ೧ ತಾಸು ಮಾತ್ರ ಕೊನೆಯ ಭಾಗದಲ್ಲಿ ಇರುವ ನಳಗಳಿಗೆ ನೀರು ತಲುಪುವ ಮುಂಚೆ ನೀರು ತೆಗೆಯಲಾಗುತ್ತದೆ.ಇದರಿಂದ ಜನ ನೀರಿನ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ.

ಸುರೇಶ ಭವಾನಿ ಎಕ್ಸ್ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment