ಬೆಂಗಳೂರಿನಲ್ಲಿ ಬಡವರಿಗೆ ಚಿಕನ್ ಬಿರಿಯಾನಿ ವಿತರಣೆ

ಮಹದೇವಪುರ(ಬೆಂಗಳೂರು):ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಇದೇ ಗ್ರಾಮಸ್ಥರಿಂದ ಮಧ್ಯಾಹ್ನದ ಅನ್ನದಾನ ಮತ್ತು ರಾತ್ರಿಯ ಊಟ ಎಲ್ಲೆಡೆ ವಿತರಿಸುವುದು ನಡೆಯುತ್ತಿದೆ.
ಬಡವರು ಮತ್ತು ಅಶಕ್ತರ ಹೊಟ್ಟೆ ತಣಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಬೆಳ್ಳಂದೂರು ವಾರ್ಡಿನ ಕರಿಯಮ್ಮನ ಅಗ್ರಹಾರದ ಗ್ರಾಮಸ್ಥರಿಂದ ಹಲವು ಕಡೆಗಳಲ್ಲಿ ನಿರಂತರ ಅನ್ನದಾನ ಕಾರ್ಯ ನಡೀತಾ ಇದೆ. ಇಂದು ಬಡವರಿಗೆ ಮತ್ತು ಅಶಕ್ತರಿಗೆ ಬಿರಿಯಾನಿ ವಿತರಿಸಿದ್ದು ವಿಶೇಷವಾಗಿತ್ತು. ಇನ್ನು ಸುಮಾರು ಸಾವಿರಕ್ಕೂ ಅಧಿಕ ನಿರ್ಗತಿಕರು,ಅಶಕ್ತರು ಬಿರಿಯಾನಿ ಊಟದ ಪೊಟ್ಟಣ ಸ್ವೀಕರಿಸಿದರು.ಅಲ್ಲದೆ,ಬಿರಿಯಾನಿ ವಿತರಿಸಲಾಗುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಸಾಕಷ್ಟು ಬಡವರು ಆಗಮಿಸಿದ್ದರು.ಇದನ್ನು ಮೊದಲೇ ಊಹಿಸಿದ್ದ ಸಮಾಜ ಸೇವಕರು ಸಾಮಾಜಿಕ ಅಂತರ ಕಾಯ್ದುಕೊಂಡೇ ಬಂದವರಿಗೆ ಬಿರಿಯಾನಿ ನೀಡಿ ಕಳಿಸಿದ್ದಾರೆ.
ಇದೇ ವೇಳೆ ಮುಖಂಡರಾದ ವೆಂಕಟೇಶ್, ನಾಗರಾಜ್, ಗುರುಪ್ರಸಾದ್, ಮುನಿರಾಜು, ರಾಘವೇಂದ್ರ, ಶೇಖರ್, ಸಂತೋಷ್, ಮಹೇಶ್ ಕುಮಾರ್, ರಂಜಿತ್, ಸ್ಟೀಲ್ ಬಾಬು, ಮದನ್ ಕುಮಾರ್, ಯಶವಂತ್ ಮುಂತಾದವರು ಇದ್ದರು.

ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ (ಬೆಂಗಳೂರು)

Please follow and like us:

Related posts

Leave a Comment