ಇಂಡಿ ತಾಲೂಕಿನಲ್ಲಿ ಎಲ್ಲರ ಮೆಚ್ಚುಗೆ ಪಡೆದ ಗ್ರಾ.ಪಂ.ಸದಸ್ಯ..

ಇAಡಿ(ವಿಜಯಪುರ):ಕೊರೊನಾ ಹರಡುವುದನ್ನು ತಡೆಯೋಕೆ ಸ್ವಯಂ ಪ್ರೇರಣೆಯಿಂದ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ತಾವೇ ಸ್ವತಃ ಬೆನ್ನಿಗೆ ಪಂಪ್ ಕಟ್ಟಿಕೊಂಡು ತಮ್ಮ ಗ್ರಾಮದ ಪ್ರತಿ ಪ್ರದೇಶದಲ್ಲೂ ಸ್ಯಾನಿಟೈಸರ್ ಸಿಂಪಡಣೆ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಹೌದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬುಯ್ಯಾರ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಹುಚ್ಚಪ್ಪ ತಳವಾರ ಈ ರೀತಿ ಮೆಚ್ಚುಗೆ ಪಡೆದವರಾಗಿದ್ದಾರೆ.
ಸದ್ಯ ಇವರ ಈ ಕೆಲಸಕ್ಕೆ ಬುಯ್ಯಾರ ಪಂಚಾಯಿತಿಯ ಸದಸ್ಯರು, ಪಿಡಿಓ, ಉಳಿದ ಸಿಬ್ಬಂದಿ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ.
ತಾವೇ ಸ್ವಯಂ ಪ್ರೇರಣೆಯಿಂದ ಗ್ರಾಮದ ಜನರು ಹೊರಗಡೆ ಬರದಂತೆ,ಜನಜAಗುಳಿ ಸೇರದಂತೆ ಜಾಗೃತಿ ವಹಿಸಿದ್ದಾರೆ.
ಇನ್ನು ಇಡೀ ಗ್ರಾಮವನ್ನೇ ಲಾಕ್ ಡೌನ್ ಮಾಡಿದ್ದು,ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ.ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ನೋಡಿಕೊಂಡಿದ್ದಾರೆ.ಇನ್ನು ಗ್ರಾಮಕ್ಕೆ ಬರುವವರನ್ನ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿದ ಬಳಿಕ ಹೋಂ ಕ್ವಾರಂಟೈನ್‌ನಲ್ಲಿ ಇಡುವ ವ್ಯವಸ್ಥೆ ಮಾಡಿದ್ದಾರೆ.ಈ ಕಾರ್ಯಕ್ಕೆ ಆಶಾ ಕಾರ್ಯಕರ್ತೆಯರು ಸಾಥ್ ನೀಡಿದ್ದಾರೆ.
ಈ ರೀತಿಯಲ್ಲಿ ಸ್ವಯಂಪ್ರೇರಿತವಾಗಿ ಗ್ರಾಮ ಪಂಚಾಯತಿ ಸಿಬ್ಬಂದಿ ಮಾಡಿರುವ ವ್ಯವಸ್ಥೆಗೆ ಗ್ರಾಮದ ಜನರು ಕೂಡ ಜೈ ಅಂದಿದ್ದಾರೆ.
ಈ ಮೂಲಕ ಲಾಕ್‌ಡೌನ್‌ನ್ನು ಸಂಪೂರ್ಣವಾಗಿ ಅನುಸರಿಸುವ ಮೂಲಕ ಬುಯ್ಯಾರ ಗ್ರಾಮ ಮಾದರಿ ಗ್ರಾಮ ಪಂಚಾಯತಿಯಾಗಿ ಗುರುತಿಸಿಕೊಳ್ತಿದೆ.

ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Please follow and like us:

Related posts

Leave a Comment