ಬೆಳಗಾವಿಯಲ್ಲಿ ಮತ್ತಿಬ್ಬರು ಕೊರೊನಾ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಬೆಳಗಾವಿ : ಜಿಲ್ಲೆಯಲ್ಲಿ ಈವರೆಗೆ 42 ಜನರಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆ ಪೈಕಿ ಇಬ್ಬರು ಇದೀಗ ಚೇತರಿಸಿಕೊಂಡಿದ್ದು, ಇಬ್ಬರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಹಿರೇಬಾಗೇವಾಡಿ P 128, ಹಾಗೂ ಕುಡಚಿಯ P 148 ಬಿಡುಗಡೆಯಾದವರು. ಈ ಪೈಕಿ P 128 ದೆಹಲಿಯಿಂದ ವಾಪಸ್ ಆಗಿದ್ದ. ಈತನಿಂದಲೇ ಗ್ರಾಮದ 15 ಜನರಿಗೆ ಸೋಂಕು ಹರಡಿತ್ತು.ಸದ್ಯ ಈ ವ್ಯಕ್ತಿ ಸಂಪೂರ್ಣ ಗುಣಮುಖನಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ.ನಿನ್ನೆ ಆಸ್ಪತ್ರೆಯಿಂದ ವ್ಯಕ್ತಿಯೊಬ್ಬರು ಬಿಡುಗಡೆ ಹೊಂದಿದ್ದು, ಕೊರೋನಾ ವಿರುದ್ಧ ಗೆದ್ದು ಮನೆಗೆ ಹೋಗಿದ್ದಾರೆ. ಮನೆಗೆ ತೆರಳಿದ್ದ ಎಲ್ಲರೂ 14 ದಿನ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.

ಇನ್ನುಸತತ ಎರಡು ಸಲ ಗಂಟಲು ದ್ರವ ಪರೀಕ್ಷೆಯ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಬೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ಮಾಹಿತಿ ನೀಡಿದ್ದಾರೆ.ಗುಣಮುಖರಾದ ಇಬ್ಬರಿಗೂ ಮನೆಗೆ ಹೋದ ಮೇಲೆ 14 ದಿನಗಳ ಹೋಂ ಕ್ವಾರಂಟೈನ್​ನಲ್ಲಿ ಇರುವಂತೆ ಹೇಳಿದ್ದೇವೆ. ಬಳಿಕ ಎಂದಿನಂತೆ ಅವರು ಓಡಾಡಬಹುದು ಎಂದು ಡಾ. ವಿನಯ್ ದಾಸ್ತಿಕೊಪ್ಪ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 42 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಓರ್ವ ವೃದ್ಧೆ ಸಾವನ್ನಪಿದ್ದಾರೆ. ಮೂವರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 38 ಕೊರೊನಾ ಪಾಸಿಟಿವ್ ಕೇಸ್‌ಗಳಿವೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಳಗಾವಿ

Please follow and like us:

Related posts

Leave a Comment