ಹೊಗಸಂದ್ರ ಬೆಂಗಳೂರಿನ ನಂಜನಗೂಡು..?

ಆನೇಕಲ್(ಬೆA,ನಗರ):ಕೊರೊನಾ ಸೋಂಕು ಹೊಂದಿರೋ ಬಿಹಾರ ಮೂಲದ ಕಟ್ಟಡ ಕಾರ್ಮಿಕನೊಬ್ಬನಿಂದ ಹೊಂಗಸAದ್ರದ ೯ ಜನರಿಗೆ ಕೊರೊನಾ ಸೋಂಕು ತಗುಲಿರೋದು ಇಡೀ ಹೊಂಗಸAದ್ರದಲ್ಲಿನ ನಿವಾಸಿಗಳಿಗೆ ಆತಂಕ ಮನೆ ಮಾಡಿದೆ.
ಅಂದ ಹಾಗೇ ಬೊಮ್ಮನಹಳ್ಳಿಯ ಇಡೀ ಹೊಂಗಸAದ್ರವನ್ನೇ ಇದೀಗ ಸೀಲ್ ಡೌನ್ ಮಾಡಲಾಗುತ್ತಿದ್ದು,ರೆಡ್‌ಜೋನ್ ಎಂದು ಘೋಷಣೆ ಮಾಡಲಾಗುತ್ತಿದೆ.ಸದ್ಯ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿದ್ದು, ಹೊಂಗಸAದ್ರದ ಬಡಾವಣೆಗಳಲ್ಲಿ ಹೈಪೋಕ್ಲೋರೈಡ್ ಸಿಂಪಡಣೆ ಕಾರ್ಯ ನಡೆದಿದೆ.
ಇನ್ನು ಏಪ್ರಿಲ್ ೧೮ರಂದು ಹೊಂಗಸAದ್ರದ ವೇಣು ಹೆಲ್ತ್ಕೇರ್ ಸೆಂಟರ್‌ಗೆ ಬಂದಿದ್ದ ಬಿಹಾರ ಮೂಲದ ಕಾರ್ಮಿಕನಿಗೆ ಚಿಕಿತ್ಸೆ ನೀಡಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೊನಾ ಸೋಂಕಿತ ಬಂದಿದ್ದನೆAಬ ಮಾಹಿತಿಯನ್ನು ಮುಚ್ಚಿಟ್ಟಿದ್ದಕ್ಕಾಗಿ ವೇಣು ಹೆಲ್ತ್ ಕೇರ್ ಸೆಂಟರ್‌ನ ಪರವಾನಗಿಯನ್ನು ರದ್ದುಗೊಳಿಸಿದ್ದಾರೆ.
ಇದೇ ವೇಳೆ ಬಿಹಾರ ಮೂಲದ ಬೊಮ್ಮನಹಳ್ಳಿಯ ಕೂಲಿ ಕಾರ್ಮಿಕ ನಗರದ ಮೂರು ಆಸ್ಪತ್ರೆಗಳಿಗೆ ಒಂದೇ ಆಟೋದಲ್ಲಿ ಕಾರ್ಮಿಕ ತೆರಳಿದ್ದನು.ಆತ ಪ್ರಯಾಣಿಸಿದ ಕೆಎ ೦೩ ಎಜಿ ೫೨೪೮ ಆಟೋ ಚಾಲಕನನ್ನು ಕ್ವಾರಂಟೈನ್ ಮಾಡಲಾಗಿದ್ದು, ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ ಮಾರ್ಚ್ ೨೩ನೇ ತಾರೀಖು ಆಟೋದಲ್ಲಿ ಮನೆ ಮಾಲೀಕನಿಗೆ ತರಕಾರಿ ಪೂರೈಕೆ ಮಾಡಿದ್ದಾನೆ. ಏ.೧೮ ರಂದು ವೇಣು ಹೆಲ್ತ್ ಕೇರ್ ಗೆ ಆಟೋದಲ್ಲಿ ತೆರಳಿ ಪರೀಕ್ಷೆ ಮಾಡಿಸಿಕೊಂಡು ಮರುದಿನ ಏ. ೧೯ ನೇ ತಾರೀಖು ಜಯದೇವ ಆಸ್ಪತ್ರೆ ಏ.೨೦ರಂದು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾನೆ. ಏಪ್ರಿಲ್ ೨೦ರಂದು ಕಾರ್ಮಿಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಾಲ್ಕು ಬಾರಿಯೂ ಕಾರ್ಮಿಕ ಒಂದೇ ಆಟೋ ಬಳಕೆ ಮಾಡಿದ್ದನು. ಇದೀಗ ಆಟೋ ಡ್ರೈವರ್ ವೈದ್ಯಕೀಯ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇದಲ್ಲದೆ, ಕಾರ್ಮಿಕನಿಗೆ ಸೋಂಕು ತಗುಲಿರೋದು ದೃಢಪಡುತ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಆರೋಗ್ಯಧಿಕಾರಿಗಳ ತಂಡ ಈ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನ ಪತ್ತೆ ಹಚ್ಚಲು ತಡರಾತ್ರಿ ಕಾರ್ಯಚರಣೆ ನಡೆಸಿತ್ತು. ಕೊನೆಗೆ ಕಾರ್ಮಿಕನ ಜೊತೆ ಪ್ರೈಮರಿ,ಸೆಕೆಂಡರಿ ಸಂಪರ್ಕದಲ್ಲಿದ್ದ ೧೮೮ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲಾ ಆರೋಗ್ಯಧಿಕಾರಿ ಡಾ.ಗುಳೂರು ಶ್ರೀನಿವಾಸ್ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ,ನಗರ)

Please follow and like us:

Related posts

Leave a Comment