ಸಿಎಂ ಪರಿಹಾರ ನಿಧಿಗೆ ೫ ಸಾವಿರ ರೂ. ಹಣ ದೇಣಿಗೆ ನೀಡಿದ ಪುಟ್ಟ ಪೋರಿ..

ಹರಪನಹಳ್ಳಿ(ಬಳ್ಳಾರಿ): ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸದ್ಯ ಸರ್ಕಾರ ಕೋರಿದ ಕೊರೊನಾ ತಡೆಗಟ್ಟುವ ಹೋರಾಟಕ್ಕೆ ಆರ್ಥಿಕ ನೆರವಿಗೆ ಸ್ಪಂದಿಸಿದ್ದಾಳೆ ಈ ಪುಟ್ಟ ಬಾಲಕಿ..
ಅಲ್ಲದೆ, ತನ್ನದು ಸಣ್ಣ ಅಳಿಲು ಸೇವೆ ಇರಲಿ ಎಂದು ಈ ೪ ವರ್ಷದ ಪುಟ್ಟ ಪೋರಿ ತಾನೂ ಕೂಡಿಟ್ಟ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾವಣೆ ಮಾಡಿ ಇತರರಿಗೆ ಮಾದರಿಯಾಗಿದ್ದಾಳೆ.
ಹೌದು, ಹರಪನಹಳ್ಳಿ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿ ವಾಸಿಸುತ್ತಿರುವ ಹಡಗಲಿ ವಲಯ ಅರಣ್ಯಾಧಿಕಾರಿ ಕೆ.ಕಿರಣ್‌ಕುಮಾರ್ ಹಾಗೂ ಕವಿತಾ ದಂಪತಿಯ ಪುತ್ರಿ ಆದ್ಯಾ ದೇಣಿಗೆ ನೀಡಿದ ಬಾಲಕಿ.
ಆದ್ಯಾ ಪ್ರಸ್ತುತ ಎಲ್‌ಕೆಜಿಯನ್ನು ಪರಿವರ್ತನ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು,ಪ್ರತಿನಿತ್ಯ ತನ್ನ ತಂದೆ, ತಾಯಿ ಹಾಗೂ ಪೋಷಕರು ನೀಡಿದ ಹಣವನ್ನು ಉಳಿತಾಯದ ಪಿ.ಕೆ.ಜಿ.ಬಿ. ಬ್ಯಾಂಕ್ ನಲ್ಲಿ ಕೂಡಿಟ್ಟಿದ್ದಳು.
ಇನ್ನು ಟಿವಿಯಲ್ಲಿ ಬರುವ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕುರಿತಾದ ಜಾಹೀರಾತುಗಳನ್ನು ನೋಡಿದ ಆದ್ಯಾ,ನಾನು ಕೂಡ ನನ್ನ ಬ್ಯಾಂಕಿನ ಹಣವನ್ನು ಪರಿಹಾರ ನಿಧಿಗೆ ಕೊಡಬೇಕು ಎಂದು ತನ್ನ ತಂದೆಗೆ ತಿಳಿಸಿದ್ದಾಳೆ.ಇದರಿಂದ ತಂದೆ ಸಹ ಮಗಳ ಮಾನವೀಯತೆಯನ್ನು ಮೆಚ್ಚಿ ಈ ವಯಸ್ಸಿನಲ್ಲಿ ಇಂತಹ ದೊಡ್ಡ ಗುಣ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಕೂಡಿಟ್ಟ ಹಣ ಅಂದಾಜು ೫ಸಾವಿರ ರೂ.ಗಳನ್ನು ತಮ್ಮ ತಂದೆಯ ಮೊಬೈಲ್‌ನ ಪೋನ್ ಫೇನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರವಾನಿಸಿದ್ದು,ಬಾಲಕಿಯ ಕೂಡಿಟ್ಟ ಹಣವು ಅಳಿಲು ಸೇವೆಯಾಗಿದ್ದು ಇತರರಿಗೆ ಮಾದರಿಯಾಗಿದ್ದಾಳೆ.

ಮಹೇಬೂಬ್ ಸಾಬ್ ಎಕ್ಸ್ ಪ್ರೆಸ್ ಟಿವಿ ಹರಪನಹಳ್ಳಿ(ಬಳ್ಳಾರಿ)

Please follow and like us:

Related posts

Leave a Comment