ಬೆಂಗಳೂರಿನಲ್ಲಿ ಸರಳ ಬಸವ ಜಯಂತಿ ಆಚರಣೆ

ಬೆಂಗಳೂರು: ಬಸವ ಸಮಿತಿಯ ವತಿಯಿಂದ ಬೆಂಗಳೂರಿನ ಬಸವ ಭವನದಲ್ಲಿಂದು ಕಾಯಕಯೋಗಿ ಬಸವಣ್ಣನವರ ೮೮೭ ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಡಿಸಿಎಂ ಗೋವಿಂದ ಎಂ.ಕಾರಜೋಳ,ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬಿಬಿಎಂಪಿ ಮಹಾಪೌರ ಗೌತಮ್ ಕುಮಾರ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಭಾಗವಹಿಸಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿಎಸ್‌ವೈ,ವಿಶ್ವಗುರು ಬಸವಣ್ಣನವರು ಮಹಾ ಮಾನವತಾವಾದಿತಾಗಿದ್ದರು. ಕಾಯಕದ ಮಹತ್ವವನ್ನು ಮೊಟ್ಟ ಮೊದಲ ಬಾರಿಗೆ ಜಗತ್ತಿಗೇ ಮನದಟ್ಟು ಮಾಡಿದರು ಎಂದು ಬಣ್ಣಿಸಿದರು.
ಇದಕ್ಕೂ ಮುನ್ನ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಸ್ಕರಿಸಿದರು.ಬಳಿಕ ಇಲ್ಲಿನ ಚಾಲುಕ್ಯ ಸರ್ಕಲ್ ನಲ್ಲಿರೋ ಅಶ್ವಾರೂಢ ಬಸವೇಶ್ವರರ ಭವ್ಯ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment