ಆಹಾರದ ಕಿಟ್,ತರಕಾರಿ ವಿತರಿಸಿದ ಸಚಿವ ಬೈರತಿ ಬಸವರಾಜು

ಕೆ.ಆರ್.ಪುರಂ(ಬೆA.ನಗರ):ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಜಾರಿಯಲ್ಲಿರಿವ ಲಾಕ್‌ಡೌನ್ ನಿಂದ ಕೂಲಿ ಕೆಲಸಗಾರರು ಬಡವರು ಸಂಕಷ್ಟದಲ್ಲಿ ಸಿಲಿಕಿದ್ದಾರೆ.ಯಾರು ಸಹ ಹಸಿವಿನಿಂದ ಬಳಲಬಾರದೆಂದು ಅವರಿಗೆ ಬೇಕಾದ ಆಹಾರ ಕಿಟ್ ಹಾಗೂ ತರಕಾರಿಗಳನ್ನು ವಿತರಣೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದರು.
ಕೃಷ್ಣರಾಜಪುರ ಕ್ಷೇತ್ರದ ಸಾಯಿಬಾಬಾ ದೇವಾಲಯದ ಬಳಿ, ಕೆ.ನಾರಾಯಣಪುರ, ರಾಮಮೂರ್ತಿನಗರ ಮುಂತಾದ ಭಾಗದಲ್ಲಿ ಸಮಾಜಿಕ ಅಂತರ ಕಾಯ್ದುಕೊಂಡಿ ನೂರಾರು ಬಡವರಿಗೆ ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಅಡುಗೆ ಎಣ್ಣೆ ಇನ್ನಿತರ ಆಹಾರ ಪದಾರ್ಥಗಳ ಕಿಟ್ ಜೊತೆಗೆ ತರಕಾರಿಗಳನ್ನು ಸಹ ನೀಡಿದರು.
ಈ ಸಂಧರ್ಭದಲ್ಲಿ ಪಾಲಿಕೆ ನಾಮ ನಿರ್ದೇಶಿತ ಮಾಜಿ ಸದಸ್ಯ ಅಂತೋಣಿಸ್ವಾಮಿ,ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ದೇವಿ, ಮುಖಂಡ ರಾದ ವೀರಣ್ಣ, ಶಿವಪ್ಪ ಶಿವಪ್ರಾಸದ್, ಪಟಾಕಿ ರವಿ, ವೆಂಕಟೇಶ್ ಶೆಟ್ಡಿ, ಜೆಸಿಬಿ ಅಂತೋಣಿ ಮುಂತಾದವರು ಇದ್ದರು.

ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆ0.ನಗರ)

Please follow and like us:

Related posts

Leave a Comment