ಬಡ ಜನರಿಗೆ ಫುಡ್ ಕಿಟ್‌ಗಳ ವಿತರಣೆ

ಕೆ.ಆರ್.ಪುರಂ(ಬೆ0ಗಳೂರು):ಕಳೆದೊ0ದು ತಿಂಗಳಿನಿ0ದ ಲಾಕ್ ಡೌನ್ ಸಂಕಷ್ಟಕ್ಕೆ ನೆರವಾಗುತ್ತ ಬಂದಿರುವ ಮಹದೇವಪುರ ಕ್ಷೇತ್ರ ಕಾಡುಗುಡಿಯ ಎಸ್.ಆರ್.ಬಿ ಟ್ರಸ್ಟ್ ಅಧ್ಯಕ್ಷ ಕುಂಬೇನ ಅಗ್ರಹಾರ ರಾಮಾಂಜನೇಯ ೩ ಸಾವಿರ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಫುಟ್ ಕಿಟ್‌ಗಳನ್ನು ವಿತರಿಸಿದರು.
ಸದ್ಯ ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಂಟಿಬಿ ನಾಗರಾಜ್, ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ಮೂರು ಹಂತಗಳಲ್ಲಿ ಕಾಡುಗುಡಿ ಪ್ರಾಥಮಿಕ ಶಾಲೆ ಆವರಣ, ದಿನ್ನೂರು ಗ್ರಾಮದಲ್ಲಿ ಬಡಜನರಿಗೆ ಕಿಟ್ ಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ,ಬಡಜನರಿಗೆ ನೆರವಾಗುವ ನಿಟ್ಟಿನಲ್ಲಿ ಎಲ್ಲರು ಸಹಕರಿಸುತ್ತಿದ್ದು ಎಸ್.ಆರ್.ಬಿ ಟ್ರಸ್ಟ್ನವರು ಲಾಕ್‌ಡೌನ್ ಸಂಕಷ್ಟಕ್ಕೆ ನೆರವಾಗುತ್ತಿರುವುದಕ್ಕೆ ಸಂಸತ ವ್ಯಕ್ತಪಡಿಸಿದರು.
ಅಲ್ಲದೆ, ಪ್ರಾರಂಭದಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಕೋವಿಡ್ ಪ್ರಕರಣ ಕಂಡುಬ0ದು ಗುಣಮುಖರಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಒಂದು ಹೊಸ ಪ್ರಕರಣ ಕಂಡುಬ0ದಿದ್ದು,ಕೊವಿಡ್ ೧೯ ನಿಯಂತ್ರಿಸಲು ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು ಹತೋಟಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದರು.

ಕೆ.ಮ0ಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆ0ಗಳೂರು)

Please follow and like us:

Related posts

Leave a Comment