ಬಡವರಿಗೆ,ಆಟೋ ಚಾಲಕರಿಗೆ ಆಹಾರದ ಕಿಟ್ ವಿತರಣೆ

ಮೊಳಕಾಲ್ಮುರು(ಚಿತ್ರದುರ್ಗ): ಜಿಲ್ಲೆಯ ಮೊಳಕಾಲ್ಮುರು ತಾಲೂಕು ಆಸ್ಪತ್ರೆ ಎದುರಿನ ತಿಲಕ್ ನಗರ ಬಡಾವಣೆಯ ಯುವಕರ ಗೆಳೆಯರ ಬಳಗ ಲಾಕ್‌ಡೌನ್ ಆದಗಿನಿಂದಲೂ ನಿರ್ಗತಿಕರಿಗೆ ಆಹಾರದ ಕಿಟ್ ಜೊತೆಗೆ ಪ್ರತಿದಿನ ಅಶಕ್ತರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಇದಲ್ಲದೆ, ಆಟೋ ಡ್ರೈವರ್‌ಗಳಿಗೆ ಆಹಾರದ ಕಿಟ್ ಕೂಡ ವಿತರಿಸಿದ್ದಾರೆ.
ಸದ್ಯ ದಿನಸಿ ಅಂಗಡಿಗೆ ಮುಂಗಡವಾಗಿ ೧ ಲಕ್ಷ ಹಣ ಪಾವತಿಸಿ ಟೋಕನ್ ವ್ಯವಸ್ಥೆ ಮಾಡಿ ಆ ಟೋಕನ್‌ಗಳನ್ನು ಬಡವರಿಗೆ ವಿತರಿಸಿ ೩೦೦ ರೂಪಾಯಿಗಳ ದಿನಸಿ ಖರೀದಿಗೂ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ.
ಇದರ ಹಿನ್ನೆಲೆಯಲ್ಲಿ ತಿಲಕ್ ನಗರ ಗೆಳೆಯರ ಬಳಗದ ಪ್ರಮುಖರಾದ ಕೆ.ರಘು,ಮಾರುತಿ ಮಂಚಿ,ಮಹೇಶ್,ಗಗನ್,ಮನು, ಪ್ರಶಾಂತ್ ಅಜಯ್,ಹೇಮಂತ್ ಅವರ ಈ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಂದೀಶ ನಾಯಕ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು(ಚಿತ್ರದುರ್ಗ)

Please follow and like us:

Related posts

Leave a Comment