ಧಾರಾಕಾರ ಮಳೆ, ದೊಡ್ಡನಾಗಮಂಗಲ ರಸ್ತೆಯಲ್ಲಿ ಚರಂಡಿ ನೀರು

ಆನೇಕಲ್(ಬೆಂ.ನಗರ): ಮಧ್ಯರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು ಹೊರವಲಯದ ದೊಡ್ಡನಾಗಮಂಗಲ ರಸ್ತೆಯಲ್ಲಿ ಚರಂಡಿ ನೀರು ತುಂಬಿಕೊ0ಡಿದ್ದು,ಇದು ರಾಜ ಕಾಲುವೆ ಒತ್ತುವರಿಯಿಂದ ಸೃಷ್ಟಿ ಯಾಗಿರುವ ಬಿಕ್ಕಟ್ಟು ಎನ್ನಲಾಗಿದೆ.
ಅಲ್ಲದೆ, ದೊಡ್ಡನಾಗಮಂಗಲದ ಅಂಬೇಡ್ಕರ್ ಕಾಲೋನಿ ೧೦೦ ರಿಂದ ೧೫೦ ಮನೆಗಳಿಗೆ ನೀರು ನುಗ್ಗಿದ್ದು,ರಾತ್ರಿಯಿಡೀ ಮಳೆಯಿಂದ ಸ್ಥಳೀಯರು ಕಂಗಾಲಾಗಿದ್ದಾರೆ.
ಇನ್ನು ಆನೇಕಲ್ ತಾಲ್ಲೂಕಿನ ಅನಂತ ನಗರ, ಹೆಬ್ಬಗೋಡಿ, ಚಂದಾಪುರ, ಅತ್ತಿಬೆಲೆ, ಸರ್ಜಾಪುರ ಸೇರಿದಂತೆ ಹಲವೆಡೆ ಬಾರಿ ಮಳೆಯಾಗಿದೆ. ಮಧ್ಯರಾತ್ರಿಯಿಂದ ಗುಡುಗು, ಸಿಡಿಲು ಸಹಿತ ಒಂದೇ ಸಮನೆ ಮಳೆಯಾಗುತ್ತಿದ್ದು ಮುಂಜಾನೆ ದಿನಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ಸಹ ಜನರು ಹೊರ ಹೋಗುವುದಕ್ಕೂ ವರುಣರಾಯ ಬಿಡುವು ಮಾಡಿಕೊಡಲಿಲ್ಲ.ಬಿರು ಬಿಸಿಲಿನ ಬೇಗೆಯಲ್ಲಿದ್ದ ಜನಕ್ಕೆ ಒಂದೆಡೆ ಮಳೆರಾಯನ ಆಗಮನದಿಂದ ತಂಪೇರೆದರೆ ಇನ್ನೊಂದೆಡೆ ಕೊರೋನಾ ಆತಂಕ ಕೂಡ ಹೆಚ್ಚಾಗಿದೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment