1500 ಬಡವರಿಗೆ ಚಿಕನ್ ಬಿರಿಯಾನಿ ವಿತರಣೆ..

ಕೆಆರ್ ಪುರ(ಬೆಂ.ನಗರ):ದಾನಿಗಳು, ಸಂಘಸ0ಸ್ಥೆಗಳು, ಸ್ವಯಂಸೇವಕ ಸಂಸ್ಥೆಗಳು ಲಾಕ್ ಡೌನ್ ಸಂದರ್ಭದಲ್ಲಿ ದಿನಸಿ ಕಿಟ್ ವಿತರಣೆ ಹಾಗೂ ನಿತ್ಯ ದಾಸೋಹ ಕಾರ್ಯಕ್ರಮ ಮಾಡುವ ಮೂಲಕ ಬಡವರ ನೆರವಿಗೆ ನಿಂತಿವೆ ಬೆಂಗಳೂರು ಪೂರ್ವ ತಾಲ್ಲೂಕು ಅಧ್ಯಕ್ಷೆ ಭಾಗ್ಯಮ್ಮ ಕೆ.ವಿ ಸತೀಶ್ ತಿಳಿಸಿದರು.
ಮಹದೇವಪುರ ಕ್ಷೇತ್ರದ ಕಿತ್ತಗನೂರು ಪಂಚಾಯತಿ ವ್ಯಾಪ್ತಿಯ ಸುಮಾರು ೧೫೦೦ ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ, ಸ್ಥಳೀಯರಿಗೆ ಬಿರಿಯಾನಿ ಊಟ ವಿತರಿಸಿ ಮಾತನಾಡಿದರು.
ಲಾಕ್ ಡೌನ್ ವೇಳೆ ಬಡವರ ಹಾಗೂ ಕೂಲಿಕಾರ್ಮಿಕರ ನೆರವಿಗೆ ನಮ್ಮೊಂದಿಗೆ ನಿಂತಿರುವ ಸಂಘ ಸಂಸ್ಥೆಗಳ ಗಣನೀಯವಾದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಕ್ಷೇತ್ರದಲ್ಲಿ ಆಹಾರ ಸಾಮಾಗ್ರಿಗಳ ಕೊರತೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ.ಎಲ್ಲರಿಗೂ ಆಹಾರ ದೊರೆಯುವಂತೆ ಮಾಡಲಾಗುದು.ಅಲ್ಲದೆ, ಶಾಸಕ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ ಮೋಹನ್ ಹಾಗೂ ಕ್ಷೇತ್ರ ಗ್ರಾಮಾಂತರಾಧ್ಯಕ್ಷ ನಟರಾಜ್ ನೇತೃತ್ವದಲ್ಲಿ ಕ್ಷೇತ್ರಾಧ್ಯಾಂತ ಬಡವರಿಗೆ, ಕೂಲಿ ಕಾರ್ಮಿಕರಿಗೆ ಸಹಾಯ ಮಾಡಲಾಗುತ್ತಿದೆ ಎಂದರು.
ಮುಖಂಡ ಕೆ.ವಿ ಸತೀಶ್ ಮಾತನಾಡಿ,ಸ್ನೇಹಿತರ ಸಹಯೋಗದೊಂದಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಹಸಿದವರಿಗೆ ಬಿರಿಯಾನಿ ಊಟ ಮಾಡಿಸುವ ಕಾರ್ಯಮಾಡಿದ್ದು,ಪಂಚಾಯತಿ ಸುತ್ತಮುತ್ತಲಿನ ಸುಮಾರು ೧೫೦೦ ಸಾವಿರಕ್ಕೂ ಹೆಚ್ಚು ಮಂದಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಪಾಪಣ್ಣ, ಕೆಂಪೇಗೌಡ, ಕಿತ್ತಗನೂರು ಮುಖಂಡರಾದ ರಾಘವೇಂದ್ರ ಬಾಡಿಗರ್, ಎಸ್.ಎಂ.ಬಿ.ಮAಜುನಾಥ್, ವೆಂಕಟೇಶ್ ಮೂರ್ತಿ, ನರೇಶ್, ಪ್ರಮೋದ್, ಪ್ರಸಾದ್, ಚಾರ್ಲ್ಸ್, ಬಾಬು ಲಾಲ್ ಶರ್ಮಾ ಮುಂತಾದವರು ಹಾಜರಿದ್ದರು.
ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆಆರ್‌ಪುರ(ಬೆಂ.ನಗರ)

Please follow and like us:

Related posts

Leave a Comment