ಅಬ್ಬಾ..ಕೊನೆಗೂ ಎಣ್ಣೆ ಸಿಕ್ತು ಎಂದ ಅಜ್ಜಿಯರು..

ಕೋಲಾರ : ಕೋಲಾರ ತಾಲ್ಲೂಕಿನಾದ್ಯಂತ ಮದ್ಯ ಮಾರಾಟವು ಭರದಿಂದ ನಡೆದಿದ್ದು, ಮದ್ಯ ಪ್ರಿಯರು ಬೆಳಗ್ಗೆಯಿಂದಲೇ ಎಣ್ಣೆಗಾಗಿ ಸರತಿ ಸಾಲಿನಲ್ಲಿ ಶಿಸ್ತಾಗಿ ನಿಂತಿದ್ದರು.
ಬೆಳಗ್ಗೆ ೫ ಗಂಟೆಯಿAದಲೇ ಮಳಿಗೆಗಳ ಮುಂದೆ ನಿಂತಿರುವ ಮಧ್ಯ ಪ್ರಿಯರು ೭ ಗಂಟೆಗೆ ಮದ್ಯ ಸಿಗುವುದೆಂದು ನಿಂತಿದ್ದು ಎಲ್ಲಾ ಕಡೆಗಳಲ್ಲಿಯೂ ೯ ಗಂಟೆಗೆ ಪ್ರಾರಂಭವಾಗಿತ್ತು.
ತಾಲ್ಲೂಕಿನಲ್ಲಿ ಸುಮಾರು ಸುಮಾರು ಮೂವತ್ತು ಮಳಿಗೆಗಳು ಮದ್ಯ ನೀಡಿದ್ದು,ಎಲ್ಲಾ ಕಡೆಯೂ ಕಿಕ್ಕಿರಿದು ಮದ್ಯಪ್ರಿಯರು ಜಮಾಯಿಸಿದ್ದರು.
ಈ ಮಧ್ಯೆ ಒಂದಷ್ಟು ಕಡೆ ಸದ್ಯದ ಪರಿಸ್ಧಿತಿಯಲ್ಲಿ ಮಧ್ಯ ಮಾರಾಟ ಬೇಡವೆಂದು ಪ್ರತಿಭಟನೆಗಳು ನಡೆದಿದ್ದು, ಸದ್ಯ ಎಣ್ಣೆ ಪ್ರಿಯರನ್ನು ಚದುರಿಸಲು ಪೊಲೀಸರಿಗೆ ತೆಲೆನೋವಾಗಿದೆ.
ಇನ್ನು ಎಣ್ಣೆ ಪ್ರಿಯರು ಕೆಲವರು ಮುಖಕ್ಕೆ ಮಾಸ್ಕ್ ಧರಿಸದೇ ಬಂದಿದ್ದರೆ ಕೆಲವರು ಗುರುತು ಸಿಗದಂತೆ ಮುಖದ ತುಂಬೆಲ್ಲಾ ಮಾಸ್ಕ್ ಹಾಕಿದ್ದಾರೆ.
ಮೊದಲನೇ ದಿನವೇ ಅತ್ಯಂತ ಕುತೂಹಲವೆಂದರೆ ನಗರದ ಬಸ್ ನಿಲ್ದಾಣದ ಬಾರ್ ವೊಂದಕ್ಕೆ ಬೆಳ್ಳಂಬೆಳಗ್ಗೆಯೇ ಹೆಣ್ಣು ಮಕ್ಕಳು ಎಣ್ಣೇ ಖರೀದಿಗೆ ಬಂದಿದ್ದು,ವಯಸ್ಸಾದ ಅಜ್ಜಿಯರಿಬ್ಬರು ಎಣ್ಣೆ ಖರೀದಿಗೆ ಕೂಡಿಟ್ಟ ಹಣ ನೀಡಿ ಪಡೆದಿದ್ದು ಅಲ್ಲಿದ್ದವರಿಗೆಲ್ಲಾ ಅಚ್ಚರಿಯನ್ನುಂಟು ಮಾಡಿತು.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕೋಲಾರ..

Please follow and like us:

Related posts

Leave a Comment