ಕರ್ನಾಟಕದಲ್ಲಿ 56 ಮಕ್ಕಳಿಗೆ ಕೊರೊನಾ ಸೋಂಕು..

ಬೆ0ಗಳೂರು:ರಾಜ್ಯದಲ್ಲಿ ಆರ್ಭಟಿಸುತ್ತಿರುವ ಕೊರೊನಾ ಸೋಂಕು ಮಕ್ಕಳಿಗೆ ಹೆಚ್ಚಾಗಿ ತಗುಲುತ್ತಿರುವುದು ಬೆಳಕಿಗೆ ಬಂದಿದೆ.
ಸದ್ಯ ಸುಮಾರು ೫೦ಕ್ಕಿಂತ ಹೆಚ್ಚು ಮಕ್ಕಳಿಗೆ ಕೊರೊನಾ ವಕ್ಕರಿಸಿದ್ದು, ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ.
ಅಂದ ಹಾಗೇ ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಹೆಚ್ಚಾಗಿ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು,ಇಲ್ಲಿ ತಲಾ ೧೧ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ.
ಉಳಿದಂತೆ ವಿಜಯಪುರ-೭,ಬೆಳಗಾವಿ-೬,ಬಾಗಲಕೋಟೆ-೫,ದಾವಣಗೆರೆ-೫,ಮಂಡ್ಯ-೩,ಬಳ್ಳಾರಿ-೨,ಮೈಸೂರು,ದಕ್ಷಿಣ ಕನ್ನಡ,ಬೆಂಗಳೂರು ಗ್ರಾಮಾಂತರ,ತುಮಕೂರು,ಧಾರವಾಡ ತಲಾ ಒಂದೊAದು ಮಕ್ಕಳಲ್ಲಿ ಸೋಂಕು ಧೃಡಪಟ್ಟಿದ್ದು,ಒಟ್ಟಾರೆ ರಾಜ್ಯದಲ್ಲಿ ೧೫ ವರ್ಷದೊಳಗಿನ ೫೬ ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.
ಇದೇ ವೇಳೆ ಕಳೆದ ೧೦ ದಿನಗಳಲ್ಲಿ ೨೩ ಮಕ್ಕಳಿಗೆ ಸೋಂಕು ತಗುಲಿದ್ದು, ಸಾಮಾನ್ಯವಾಗಿ ತಂದೆ ತಾಯಿ ಮುಖಾಂತರವೇ ಹರಡಿರೋದು ಗೊತ್ತಾಗಿದ್ದು, ಸೋಂಕಿತ ಮಕ್ಕಳ ವಿಚಾರದಲ್ಲಿ ಬೆಂಗಳೂರು, ಕಲಬುರಗಿ ಮೊದಲ ಸ್ಥಾನ ಹಾಗೂ ವಿಜಯಪುರ ಮೂರನೇ ಸ್ಥಾನ ಪಡೆದಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment