ಪಟ್ಟನಾಯಕನಹಳ್ಳಿ ಮಹಿಳಾ ಎಸ್‌ಐಗೆ ಬೀಳ್ಗೋಡುಗೆ ಸಮಾರಂಭ

ಶಿರಾ(ತುಮಕೂರು):ಪೊಲೀಸರು ಒತ್ತಡದ ನಡುವೆಯೂ ಸಾರ್ವಜನಿಕರ ರಕ್ಷಣೆಗೆ ಕಟಿ ಬದ್ಧರಾಗಿರುತ್ತಾರೆ ಎಂದು ಸಬ್ ಇನ್ಸ್ಪೆಕ್ಟರ್ ವಿ.ನಿರ್ಮಲ ಹೇಳಿದ್ದಾರೆ
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪದೋನ್ನತಿ ಹೊಂದಿದ ಸಲುವಾಗಿ ತಮಗೆ ಏರ್ಪಡಿಸಿದ್ದ ಬೀಳ್ಗೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ತ್ರೀ ಎಂದ ತಕ್ಷಣ ಅಡುಗೆ ಮನೆಗೆ ಸೀಮಿತ ಎನ್ನುವುದು ಈಗ ಹಳೆಯದಾಗಿದೆ.
ಅಲ್ಲದೆ,ಕ್ಲಿಷ್ಟಕರ ಸನ್ನಿವೇಶದಲ್ಲಿ ಕೂಡ ಯಾರಿಗೂ ಅನ್ಯಾಯವಾಗಬಾರದೆಂದು ಕಾನೂನಿನ್ವಯ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಎ.ಎಸ್.ಐ ಭೀಮೇಶಯ್ಯ, ಸಿಬ್ಬಂದಿಗಳಾದ ಶ್ರೀನಿವಾಸಲು, ನಯೀಂ ಉಲ್ಲಾ ಖಾನ್, ಹನುಮಂತಚಾರ್, ಯತೀಶ್ , ಜಾನಕಿ, ಜ್ಯೋತಿ, ಸಂಜು ಕುಮಾರ್, ಸಿದ್ರಾಮ, ರೇವಣಸಿದ್ದ, ನಾಗರಾಜ್ ಮುಖಂಡರಾದ ನಾದೂರು ಮಂಜು, ತ್ರಿಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment