ವಿಶ್ವಕರ್ಮ ಸಮಾಜದವರಿಗೂ ಪರಿಹಾರ ಘೋಷಿಸಿ..

ಸಿರವಾರ(ರಾಯಚೂರು): ಸಿಎಂ ಯಡಿಯೂರಪ್ಪ ಅವರು, ನೇಕಾರರಿಗೆ, ಮಡಿವಾಳ ಸಮಾಜದವರಿಗೆ ಹಡಪದ ಸಮಾಜದವರಿಗೆ ಹಾಗೂ ಆಟೋ ಚಾಲಕರಿಗೆ ಪರಿಹಾರ ಧನ ಘೋಷಿಸಿದ್ದಾರೆ.ಹೀಗಾಗಿ ವಿಶ್ವಕರ್ಮ ಸಮಾಜದವರಿಗೂ ಪರಿಹಾರ ಘೋಷಣೆ ಮಾಡಲಿ ಎಂದು ರಾಯಚೂರು ಜಿಲ್ಲಾ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬ್ರಹ್ಮ ಗಣಪತಿ ಆಗ್ರಹಿಸಿದ್ದಾರೆ.
ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿಂದು ವಿಶ್ವಕರ್ಮ ಸಮಾಜದ ವತಿಯಿಂದ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ನಮ್ಮ ವಿಶ್ವಕರ್ಮ ಜನಾಂಗ ಕುಲ ಕಸುಬುಗಳನ್ನು ಮಾಡಿಕೊಂಡು ಬಂದಿದ್ದು,ಲಾಕ್‌ಡೌನ್ ನಿಂದಾಗಿ ನಮ್ಮ ಬದುಕು ತುಂಬಾ ಕಷ್ಟವಾಗಿದ್ದು, ದುಡಿಯುವ ವರ್ಗಗಳಿಗೆ ಕೊರೊನ ಕೈ ಕಟ್ಟಿ ಹಾಕಿದಂತಾಗಿದೆ.ಹೀಗಾಗಿ ನಮ್ಮ ಸಮಾಜದವರಿಗೆ ಪರಿಹಾರ ನೀಡಿ ಸಹಾಯ ಮಾಡಬೇಕು ಸಿಎಂಗೆ ಮನವಿ ಮಾಡಿದರು.

ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ(ರಾಯಚೂರು)

Please follow and like us:

Related posts

Leave a Comment