ಒಳಗೆ ಸೇರಿತು ಗುಂಡು..ಮಹಿಳೆ ರಸ್ತೆ ತುಂಬಾ ಉರುಳಾಡಿದ್ಲು..!

ಹುಬ್ಬಳ್ಳಿ: ಕೊರೊನಾ ರಣಕೇಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.ಆದರೆ ಮದ್ಯವೆಸನಿಗಳಿಗೆ ಮಾತ್ರ ಲಾಕ್‌ಡೌನ್ ದೇವಲೋಕವಾಗಿ ಬಿಟ್ಟಿದೆ..ಸದ್ಯ ಭಿಕ್ಷುಕಿ ಒಬ್ಬಳು ಮದ್ಯವನ್ನು ಕುಡಿದ ಅಮಲಿನಲ್ಲಿ ರಸ್ತೆಯ ಪಕ್ಕದಲ್ಲಿ ಪ್ರಜ್ಞೆ ಇಲ್ಲದೇ ಒದ್ದಾಡುತ್ತಿರುವ ಪ್ರಸಂಗ ಕಂಡು ಬಂದಿದೆ.
ಹೌದು, ಹುಬ್ಬಳ್ಳಿ ನಗರದ ವಿರಾಪೂರ ಓಣಿಯಲ್ಲಿ ಈ ದೃಶ್ಯ ಬೆಳಕಿಗೆ ಬಂದಿದೆ. ಇಂದು ಜಿಲ್ಲೆಯಲ್ಲಿ ೯ ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಜನರು ಭಯಭೀತರಾಗಿದ್ದಾರೆ. ಮನೆಯಿಂದ ಹೊರ ಬಂದರೆ ಎಲ್ಲಿ ಮಹಾಮಾರಿ ನಮ್ಮನು ಆಕ್ರಮಿಸುತ್ತದೆಯೋ ಎಂಬ ಚಿಂತೆಯಲ್ಲಿ ಜನರು ಜೀವನ ಸಾಗಿಸುತ್ತಿದ್ದಾರೆ.
ಆದರೆ ಇದ್ಯಾವುದರ ಪರಿವಿಲ್ಲದ ಭಿಕ್ಷುಕಿ ಒಬ್ಬಳು ಮುಂಜಾನೆಯಿAದ ಸಂಜೆಯವರೆಗೂ ಭಿಕ್ಷೆ ಬೇಡಿ ರಾತ್ರಿಯಾದ ತಕ್ಷಣ ಗುಂಡೇರಿಸಿಕೊAಡು ರಸ್ತೆಯ ಪಕ್ಕದಲ್ಲಿ ತೇಲಾಡುತ್ತಿದ್ದಾರೆ.ಹೀಗಾಗಿ ಈ ದೃಶ್ಯವನ್ನು ನೋಡಿದ ಸ್ಥಳೀಯರು ಆತಂಕದಲ್ಲಿ ಇದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment