ಕಾರ್ಪೊರೇಟರ್ ಪತಿ-ಮಗನ ಮೇಲೆ ಸಗಣಿ ಎಸೆತ

ಬೆಂಗಳೂರು:ಕಲಾಸಿಪಾಳ್ಯದಲ್ಲಿನ ಅಕ್ರಮ ಅಂಗಡಿಗಳನ್ನ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳೊಂದಿಗೆ ತೆರಳಿದ್ದ ಕಲಾಸಿಪಾಳ್ಯ ವಾರ್ಡ್ ಕಾರ್ಪೊರೇಟರ್ ಪತಿ ಹಾಗೂ ಅವರ ಮಗನ ಮೇಲೆ ಮೇಲೆ ಕೆಲ ಕಿಡಿಗೇಡಿಗಳು ಸಗಣಿ ಎಸೆದಿರುವ ಘಟನೆ ನಡೆದಿದೆ.
ಅಂದ ಹಾಗೇ ಕಲಾಸಿಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿರುವ ಪ್ರತಿಭಾ ಅವರ ಪತಿ ಧನರಾಜ್ ಸಗಣಿ ಎಸತೆಕ್ಕೊಳಗಾದವರಾಗಿದ್ದಾರೆ.
ಇಂದು ಬೆಳಿಗ್ಗೆ ಧನರಾಜ್, ಕಲಾಸಿಪಾಳ್ಯದಲ್ಲಿನ ಅಕ್ರಮ ಅಂಗಡಿಗಳನ್ನ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳೊಂದಿಗೆ ತೆರಳಿದ್ರು. ಈ ವೇಳೆ ಕೆಲ ಕಿಡಿಗೇಡಿಗಳು ಕಾರ್ಪೊರೇಟರ್ ಪತಿ ಹಾಗೂ ಮಗನ ಮೇಲೆ ಸೆಗಣಿ ಎಸೆದಿದ್ದಾರೆ. ಕಿಡಿಗೇಡಿಗಳ ಕೃತ್ಯ ಖಂಡಿಸಿ,ಧನರಾಜ್ ಬೆಂಬಲಿಗರು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿ,ಮೊದಲೇ ಸೆಗಣಿ ಪ್ಯಾಕೇಟ್‌ಗಳನ್ನ ರೆಡಿ ಮಾಡಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕಲಾಸಿಪಾಳ್ಯ ಪೊಲೀಸರು,ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment