ಅಕ್ರಮ ಮರಳು ಮಾಫಿಯಾ ದಂಧೆ ಬಗ್ಗೆ ಎಕ್ಸ್ ಪ್ರೆಸ್ ಟಿವಿ ವರದಿ, ಎಚ್ಚೆತ್ತ ಪೊಲೀಸರಿಂದ ದಾಳಿ

ಸಿಂಧನೂರು(ರಾಯಚೂರು): ಜಿಲ್ಲೆಯ ಸಿಂಧನೂರಿನಲ್ಲಿ ಅಕ್ರಮ ಮರಳು ಮಾಫಿಯಾ ಹೆಚ್ಚಾಗಿತ್ತು.ಹೀಗಾಗಿ ಇದರ ಬಗ್ಗೆ
ಇತ್ತೀಚಿಗೆ ಎಕ್ಸ್ ಪ್ರೆಸ್ ಟಿವಿ ಸಿಂಧನೂರಿನಲ್ಲಿ ಕೊರೊನಾಗಿಂತ ಆರ್ಭಟಿಸುತ್ತಿದೆ ಅಕ್ರಮ ಮರಳು ಮಾಫಿಯಾ ಎಂಬ ತಲೆಬರಹದಡಿ ವಿಸ್ಕೃತ ವರದಿ ಪ್ರಕಟಿಸಿತ್ತು.
ಸದ್ಯ ಇದರ ವರದಿಯಿಂದ ಎಚ್ಚೆತ್ತುಕೊಂಡ ಸಿಂಧನೂರಿನ ಗ್ರಾಮೀಣ ಠಾಣೆಯ ಪೊಲೀಸರು ಅಕ್ರಮ ಮರಳು ಮಾಫಿಯಾದವರ ಹೆಡೆ ಮುರಿಕಟ್ಟಲು ಮುಂದಾಗಿದ್ದಾರೆ.
ಅAದ ಹಾಗೇ ಕೊರೊನಾ ತಡೆಗಟ್ಟುವ ಸಂಬAಧ ಸಿಂಧನೂರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕರ್ತವ್ಯ ನಿರ್ವಹಿಸುತ್ತಿದೆ.ಹೀಗಾಗಿ ಪೊಲೀಸರ ಗಮನ ಬೇರೆಡೆ ಇರುವುದನ್ನು ಗಮನಿಸಿದ್ದ ಅಕ್ರಮ ಮರಳು ಮಾಫಿಯಾದವರು ಮರಳು ದಂಧೆ ನಡೆಸುತ್ತಿದ್ದರು. ಆದರೀಗ ಸಿಂಧನೂರಿನ ಗ್ರಾಮೀಣ ಠಾಣೆಯ ಎಸ್‌ಐ ರಾಘವೇಂದ್ರ ನೇತೃತ್ವದ ಪೊಲೀಸರ ತಂಡ ಕೆಂಗಲ್ ಗ್ರಾಮಕ್ಕೆ ಹಠಾತ್ ದಾಳಿ ನಡೆಸಿ ಮರಳು ಮಾಫಿಯಾದ ಮಗಲು ಮುರಿದಿದ್ದಾರೆ. ಜೊತೆಗೆ ದಾಳಿ ವೇಳೆ ಟ್ರಾö್ಯಕ್ಟರ್ ಸಹಿತ ಮರಳನ್ನು ವಶಪಡಿಸಿಕೊಂಡಿದ್ದಾರೆ.ಆದರೆ ದಾಳಿ ವೇಳೆ ಚಾಲಕ ಹಾಗೂ ಮಾಲೀಕ ಟ್ರ‍್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.
ಈ ಸಂಬAಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment