ನೀರಾವರಿ ಇಲಾಖೆ ಇಂಜಿನೀಯರ್ ಗೆ ಪರಸ್ತ್ರೀ ಜೊತೆ ಅನೈತಿಕ ಸಂಬಂಧ- ಪತ್ನಿಯಿಂದ ಇಂಜಿನಿಯರ್ ಗೆ ಬಿತ್ತು ಗೂಸಾ.!

ಕೊಪ್ಪಳ: ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪರಸ್ತ್ರೀ ಜೊತೆಗಿದ್ದಾಗಲೇ ಪತ್ನಿ ಹಾಗೂ ಮಕ್ಕಳ ಕೈಗೆ ಸಿಕ್ಕಿಬಿದ್ದು ಪರಾರಿಯಾದ ಘಟನೆ ಕೊಪ್ಪಳದ ಕುಷ್ಟಗಿ ಸರ್ಕಲ್ ಬಳಿ ನಡೆದಿದೆ. ಈ ವೇಳೆ ಇಂಜಿನಿಯರ್ ಪತ್ನಿ ಮತ್ತು ಆತನ ಮಕ್ಕಳು ಮಹಿಳೆಯನ್ನು ಥಳಿಸಿದ್ದಾರೆ. ಮದುವೆಯಾಗಿ ಪತ್ನಿ ಮಕ್ಕಳಿದ್ದರೂ ಅಕ್ರಮ ಸಂಬಂಧ ಬೆಳೆಸಿದ್ದ ಇಂಜಿನಿಯರ್ ಮಹಿಳೆಯ ಮನೆಯಲ್ಲಿ ತಂಗಿದ್ದ. ಈ ವಿಷಯ ತಿಳಿದ ಪತ್ನಿ ಮತ್ತು ಮಕ್ಕಳು ಮನೆ ಮೇಲೆ ದಾಳಿ ಮಾಡಿದ್ದಾರೆ. ಬೆಡ್ರೂಮ್ ನಲ್ಲಿ ಇಂಜಿನಿಯರ್ ಮಹಿಳೆಯೊಂದಿಗೆ ಇರುವುದನ್ನು ಗಮನಿಸಿದ ಪತ್ನಿ ಮತ್ತು ಮಕ್ಕಳು ಕೂಗಾಡಿದ್ದು, ಈ ವೇಳೆ ಇಂಜಿನಿಯರ್ ಪರಾರಿಯಾಗಿದ್ದು, ಮಹಿಳೆ ಮೇಲೆ ಆಕ್ರೋಶಗೊಂಡ ಪತ್ನಿ ಹಾಗೂ ಮಕ್ಕಳು ಹಲ್ಲೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲೇಡೆ ವೈರಲ್ ಆಗಿದೆ. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Read More

ಕಲ್ಯಾಣ ಕರ್ನಾಟಕ ಭಾಗದ ಜನ ಹಿಂದುಳಿದವರೆಂಬ ಕೀಳರಿಮೆಯಿಂದ ಹೊರಬರಲಿ:ಬಿ.ಸಿ.ಪಾಟೀಲ್..!

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗ ಹಿಂದಿಗಿಂತಲೂ ಈಗ ಹೆಚ್ಚು ಹಸಿರಾಗಿದ್ದು,ಫಲವತ್ತಾಗಿದೆ.ಈ ಭಾಗದ ಜನ ತಾವು ಹಿಂದುಳಿದವರೆಂಬ ಕೀಳರಿಮೆ ಬಿಡಬೇಕು ಎಂದು ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಎರಡುಬಾರಿ ಧ್ವಜಾರೋಹಣ ನೆರವೇರಿಸುತ್ತವೆ.ಆದರೆ ಈ ಭಾಗದಲ್ಲಿ ವರ್ಷಕ್ಕೆ ಮೂರು ಬಾರಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.ಕೋವಿಡ್ನಿಂದಾಗಿ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸಲಾಗದಿದ್ದರೂ ಆತ್ಮಾಭಿಮಾನದಿಂದ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುತ್ತಿದೆ ಎಂದರು.ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಗಬ್ಬಕ್ಕೆ ಕಾರ್ಯಕ್ರಮದಲ್ಲಿ ಶುಭಕೋರಿದ ಬಿ.ಸಿ.ಪಾಟೀಲ್,ಕೋವಿಡ್ ಸಂದರ್ಭದಲ್ಲಿ ಪ್ರಧಾನಿಗಳು 1 ಲಕ್ಷ ಕೋ.ರೂ.ಗಳನ್ನು ಕೃಷಿ ಮೂಲಭೂತ ಸೌಕರ್ತಗಳಿಗಾಗಿ ಮೀಸಲಿಟ್ಟಿದ್ದು, ಈ ಪೈಕಿ 10 ಸಾವಿರ ಕೋ.ರೂ.ಗಳನ್ ಆಹಾರ ಸಂಸ್ಕರಣಾ…

Read More

ಬಿಜೆಪಿ ಸರ್ಕಾರಕ್ಕೆ ಕೊಪ್ಪಳದಲ್ಲಿ ಟಾಂಗ್ ಕೊಟ್ಟ ಮಾಜಿ ಸಚಿವ…!

ಕೊಪ್ಪಳ: ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಶಿವರಾಜ್ ತಂಗಡಗಿ ಟಾಂಗ್ ಕೊಟ್ಟಿದ್ದಾರೆ. ದೇಶದ್ರೋಹಿ ಚಟುವಟಿಕೆ ಮಾಡುವ ಯಾವುದೇ ಸಂಘಟನೆ ಇದ್ದರು ಅದನ್ನು ಸರ್ಕಾರ ಕೂಡಲೇ ಬ್ಯಾನ್ ಮಾಡಬೇಕು, RSS ಸಂಘಟನೆ ಬಗ್ಗೆ ಯಾರಾದ್ರೂ ಮಾತಾನಾಡುದ್ರೆ ಅಂತಹವರಿಗೆ ಬಿಜೆಪಿ ಸರ್ಕಾರ ಸಚಿವ ಸ್ಥಾನ ಕೊಡ್ತಾರೆ ಇದು ಎಷ್ಟರ ಮಟ್ಟಿಗೆ ಸರಿ, ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ಆಗಬೇಕು .ಆರ್ ಎಸ್ಎಸ್, ಎಸ್ಟಿಪಿ ಎರಡು ಸಂಘಟನೆಗಳು ಒಂದೇ ಮುಖದ ಎರಡು ನಾಣ್ಯವಿದ್ದಂತೆ. ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು,ದೇಶದಲ್ಲಿ ಅಶಾಂತಿ ಉಂಟು ಮಾಡುವ ಯಾವುದೇ ಸಂಘಟನೆ ಇದ್ದರೂ ಕೂಡ ಅದು ದೇಶದ್ರೋಹ ಸಂಘಟನೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.

Read More

ಅಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ತುಂಬು ಗರ್ಭೀಣಿ…!

ಕೊಪ್ಪಳ: ಗರ್ಭೀಣಿಯನ್ನು ಆಸ್ಪತ್ರೆಗೆ ಕರೆದುಕೋಮಡು ಕೊಂಡು ಹೋಗುತ್ತಿದ್ದ ಅಂಬ್ಯುಲೆನ್ಸ್ ಮಾರ್ಗದ ಮಧ್ಯದಲ್ಲೇ ಕೆಸರಿನಲ್ಲಿ ಸಿಲುಕಿ, ಅಂಬ್ಯುಲೆನ್ಸ್ ನಲ್ಲೆ ಹೆರಿಗೆಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಅಂಬ್ಯುಲೆನ್ಸ್ ಕೆಸರಿನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದು ತಕ್ಷಣ ಆಂಬ್ಯುಲೆನ್ಸ್ ಚಾಲಕ ಹಾಗು ಸ್ಥಳೀಯರು ಆಂಬ್ಯುಲೆನ್ಸ್ ಹೊರ ತೆಗೆಯಲು ಹರಸಾಹಸ ಪಟ್ಟರು. ಈ ವೇಳೆ ಗರ್ಭಿಣಿಗೆ ಹೊಟ್ಟೆ ನೋವು ಕಾಣಿಸಿಕೊಂಡು, ವಾಹನದಲ್ಲೇ ಹೆರಿಗೆಯಾಗಿದೆ. ಸದ್ಯ ತಾಯಿ ಹಾಗು ಮಗು ಆರೋಗ್ಯವಾಗಿದ್ದು, ಹಿರೇಮನ್ನಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯ ಕಳಪೆ ಕಾಮಗಾರಿಯೇ ಆಂಬ್ಯುಲೆನ್ಸ್ ಸಿಲುಕಲು ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಒಂದು ವರ್ಷ ಪೂರೈಸಿದ ಯಡಿಯೂರಪ್ಪ ಸರ್ಕಾರ..!

ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಬಿ.ಎಸ್.ಯಡಿಯೂರಪ್ಪ ಅವರೇ ಮುಂದಿನ ದಿನಗಳಲ್ಲಿಯೂ ಕೂಡ ಮುಖ್ಯ ಮಂತ್ರಿಯಾಗಿ ಮುಂದುವರೆಯಲಿದ್ದು,ಅವರ ನಾಯಕತ್ವದಲ್ಲಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸುಭದ್ರವಾಗಿದೆ, ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ ಬರ ತಾಂಡವವಾಡುತ್ತಿತ್ತು, ಅಧಿಕಾರ ವಹಿಸಿಕೊಂಡ ಕೆಲ ದಿನದಲ್ಲೇ ಅತಿವೃಷ್ಠಿ ಉಂಟಾಯಿತು, ಸಿಎಂ ಒಬ್ಬರೇ ಮುಂದೆ ನಿಂತು ನೆರೆ ಹಾವಳಿ ಸಮಸ್ಯೆಯನ್ನು ಎದುರಿಸಿದರು ಕೋವಿಡ್19 ಸಂದರ್ಭದಲ್ಲೂ ಸಿಎಂ ಸಮಪರ್ಕವಾಗಿ ಕೆಲಸ ಮಾಡಿದ್ದಾರೆ, ಸಿಎಂ ಮುಳ್ಳಿನ ಹಾಸಿಗೆಯನ್ನು ಸೂಕ್ಷ್ಮವಾಗಿ ನಿರ್ವಹಣೆ ಮಾಡಿದ್ರು, ಸಿಎಂ ಸಮರ್ಥ ನಾಯಕತ್ವದಿಂದ ಕೆಲಸ ಮಾಡ್ತಿದ್ದಾರೆ. ಪೂರ್ಣ ಅವಧಿಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮುಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

Read More

ಕೊಪ್ಪಳದಲ್ಲಿ ಮತ್ತೊಂದು ಕೋವಿಡ್-೧೯ ಪಾಸಿಟಿವ್ ಕೇಸ್

ಕೊಪ್ಪಳ: ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್-೧೯ ಪಾಸಿಟಿವ್ ಕೇಸ್ ದೃಢಪಟ್ಟಿದೆ. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ವ್ಯಕ್ತಿಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ವಾಸವಾಗಿದ್ದು,ಶುಕ್ರವಾರ ಗ್ರಾಮಕ್ಕೆ ಬಂದಿದ್ದಾನೆ. ಈತನಿಗೆ ಮೊದಲು ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ಆತನ ಗಂಟಲು ದ್ರವ ಪಡೆದು ಲ್ಯಾಬ್ ಕಳಿಸಿದ್ದು ಸೋಂಕು ಇರುವುದು ಧೃಡಪಟ್ಟಿದೆ. ಇನ್ನು ಆತನ ಕುಟುಂಬಸ್ಥರು ಸೇರಿದಂತೆ ಆ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಹಾಗೂ ಸೆಕೆಂಡರಿ ಕಾಂಟೆಕ್ಟ್ ಇರುವ ಜನರ ಶೋಧ ಕಾರ್ಯ ನಡೆಸಲಾಗುತ್ತಿರುವ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಳ ಜಿಲ್ಲಾ ಅಧಿಕಾರ ಪಿ ಸುನೀಲ್ ಕುಮಾರ್,ಜಿಲ್ಲೆಯಲ್ಲಿ ಈಗಾಗಲೇ ಮೂರು ಕೋವಿಡ್ -೧೯ ಪ್ರಕರಣಗಳು ಪತ್ತೆಯಾಗಿದ್ದವು.ಇದೀಗ ಈ ಪ್ರಕರಣ ಸೇರಿಕೊಂಡು ಕೊಪ್ಪಳ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ೪ಕ್ಕೆ ಏರಿಕೆ ಎಂದು ಮಾಹಿತಿ ನೀಡಿದರು. ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Read More

ಆಂಧ್ರ ಪ್ರವೇಶಿಸುತ್ತಿದ್ದ ಕಾರ್ಮಿಕ ಸಾವು, ಇನ್ನಿಬ್ಬರ ಸ್ಥಿತಿ ಚಿಂತಾಜನಕ..

ಕೊಪ್ಪಳ:ಸ0ಚರಿಸುತ್ತಿದ್ದ ಲಾರಿಯಲ್ಲಿ ಸಾಗಿಸುತ್ತಿದ್ದ ಜೆಸಿಬಿ ಮುಂಬದಿಗೆ ಸರಿದ ಪರಿಣಾಮ ಅದರೊಳಗಿದ್ದ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವು ಕಂಡು ಆತನ ಪತ್ನಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡ ಘಟನೆ ಕೊಪ್ಪಳ ನಗರದದಲ್ಲಿ ನಡೆದಿದೆ. ರಾಮರೆಡ್ಡಿ(35) ಸಾವು ಕಂಡ ವ್ಯಕ್ತಿ.ಸದ್ಯ ಈತನ ಪತ್ನಿ ಹಾಗೂ ಮಗ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದ ಹಾಗೇ ಗದಗ ಬಳಿಯ ಲಕ್ಕುಂಡಿಯ ಬಳಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ಐದರಿಂದ ಆರು ಜನರು ಲಾರಿಯಲ್ಲಿ ಅಕ್ರಮವಾಗಿ ಆಂಧ್ರದ ಹೋಂಗಲ್ ಊರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಜೆಸಿಬಿಯೊಳಗೆ ಇವರೆಲ್ಲರು ಬಚ್ಚಿಟ್ಟುಕೊಂಡು ತಮ್ಮ ಊರಿಗೆ ಹೋಗುತ್ತಿದ್ದರು.ಆದರೆ ಲಾರಿಯಲ್ಲಿ ಸಾಗಿಸುತ್ತಿದ್ದ ಜೆಸಿಬಿ ಏಕಾಎಕಿ ಮುಂಬದಿಗೆ ಸರಿದಿದೆ.ಪರಿಣಾಮ ಅದರೊಳಗೆ ಅಡಗಿ ಕುಳಿತ್ತಿದ್ದ ರಾಮರೆಡ್ಡಿ ಸಾವು ಕಂಡ್ರೆ ಆತನ ಪತ್ನಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಲಾರಿ ಚಾಲಕ ಪರಾರಿಯಾಗಿದ್ದು,ಕೊಪ್ಪಳ ನಗರ…

Read More

ನಿಮಗೆ ಅರ್ಥ ಆಗಲ್ವಾ?..ಜನ ನೀರು ಬಿಟ್ಟು ಮೂತ್ರ ಕುಡಿಯಬೇಕಾ?..

ಕೊಪ್ಪಳ:ಕೊಪ್ಪಳ ಬರದ ನಾಡು, ಬಿಸಿಲ ನಾಡು ಅನ್ವರ್ಥವನ್ನು ಹೊಂದಿರುವುದು ಹೊಸದೇನಲ್ಲ. ಕೊರೊನಾದ ಈ ದಿನಗಳಲ್ಲಿ ಎಲ್ಲರ ಗಮನ ಮಹಾಮಾರಿ ವೈರಸ್ ನಿಯಂತ್ರಣ ಮಟ್ಟ ಹಾಕುವುದರ ಕಡೆಗಿದೆ. ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳ ಪ್ರತಿ ಬೇಸಿಗೆಯ ಬವಣೆ ಕುಡಿಯುವ ನೀರಿನ ಸಮಸ್ಯೆಯತ್ತ ಚಿತ್ತವನ್ನೇ ಹರಿಸಲಾಗಿಲ್ಲ. ಇದುವರೆಗೂ ಜನ ಮನೆ ಬಿಟ್ಟು ಹೊರಗಡೆ ಬಂದದ್ದು ಕಡಿಮೆ.ಕೆರೆ-ಕಟ್ಟೆ-ಬಾವಿಗಳಲ್ಲಿ ಅಳಿದುಳಿದ ನೀರಿನಲ್ಲಿ ಹೇಗೋ ಇದುವರೆಗೂ ದಿನಗಳನ್ನು ದೂಡಿದರು. ಈಗ ಅವುಗಳು ಸಹ ಬತ್ತಿ ಹೋಗಿವೆ. ಬೇಸಿಗೆಯ ಹೊಡೆತಕ್ಕೆ ಹಾಕಲಾಗಿದ್ದ ಬೋರ್‌ವೆಲ್‌ಗಳೂ ಚಾರ್ಜ್ ಆಗುತ್ತಿಲ್ಲ. ಹಾಗಾಗಿ ಸ್ಥಳೀಯ ಸಂಸ್ಥೆ ಪೂರೈಸುವ ನೀರಿನ ಹಾದಿ ಕಾಯುವುದು ಅನಿವಾರ್ಯವಾಗಿದೆ. ಸದ್ಯ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಗ್ರಾಮಸ್ಥರು ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಹಾಗೂ ಅಧಿಕಾರಿಗಳಿಗೆ ನೀರಿನ ಸಮಸ್ಯೆಯನ್ನು ಗಮನಕ್ಕೆ ತಂದು ಬಗೆಹರಿಸಲು ಮನವಿ ಮಾಡಿದ್ದರು. ಇನ್ನು ಎರಡು ದಿನ…

Read More

ಬಾಗಲಕೋಟೆಯ ಸೋಂಕಿತರಿ0ದ ಕೊಪ್ಪಳದಲ್ಲೀಗ ಕೊರೊನಾ ಭೀತಿ..

ಕೊಪ್ಪಳ:ಬಾಗಲಕೋಟೆ ಜಿಲ್ಲೆಯಲ್ಲಿ ೧೩ ಜನರಿಗೆ ಕೊರೊನಾ ಸೋಂಕು ದೃಢ ಹಿನ್ನೆಲೆಯಲ್ಲಿ ಇದೀಗ ಗ್ರೀನ್ ಜೋನ್ ಕೊಪ್ಪಳದಲ್ಲೂ ಕೊರೊನಾ ಭೀತಿ ಎದುರಾಗಿದೆ. ಸದ್ಯ ಈ ಸೋಂಕಿತರೊ0ದಿಗೆ ಕೊಪ್ಪಳ ಜಿಲ್ಲೆಯ ಸುಮಾರು ೨೦ ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದ್ದು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ನಿಲೋಗಲ್ ಗ್ರಾಮದ ೧೩ ಜನ ಕ್ವಾರೆಂಟೇನ್ ಮಾಡಲಾಗಿದೆ. ಇನ್ನು ಸೋಂಕು ದೃಢಪಟ್ಟಿರೋಬ್ಬರ ಮಗಳ ಮದುವೆಯಲ್ಲಿ ಕೊಪ್ಪಳ ಜನರು ಭಾಗವಹಿಸಿದ್ದು,ನಿಷೇಧದ ನಡುವೆ ನಡೆಯುತ್ತಿದ್ದ ಮದುವೆಯಲ್ಲಿ ಭಾಗವಹಿಸಿಲು ಈ ೧೩ ಮಂದಿ ಹೋಗಿದ್ದರು ಎನ್ನಲಾಗಿದೆ.ಅಲ್ಲದೆ,ಇವರೆನೆಲ್ಲಾ ಕ್ವಾರೆಂಟೇನ್‌ಗೆ ಕರೆದೊಯ್ಯುತ್ತಿದ್ದಂತೆಯೇ ಕೊಪ್ಪಳ ಜಿಲ್ಲಾದ್ಯಂತ ತೀವ್ರ ಚರ್ಚೆ ಆರಂಭಗೊ0ಡಿದೆ. ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Read More

ಕೊಪ್ಪಳ ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಕೊಪ್ಪಳ : ಭತ್ತದ ಬೆಳೆ ನಷ್ಟ ಹಾಗೂ ಸಾಲ ಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮದಲ್ಲಿ ನಡೆದಿದೆ. ಹೇಮಂತರಾಜ್ ದೇಸಾಯಿ (೪೦) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಬ್ಯಾಂಕ್ ಸೇರಿದಂತೆ ಇತರೆಡೆ ಈತ ಕೈ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಸದ್ಯ ಮಾಡಿದ ಸಾಲ ತೀರಿಸಲಾಗದೇ ಹಾಗೂ ಭತ್ತದ ಬೆಳೆ ನಷ್ಟವಾದ ಪರಿಣಾಮ ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾಗಿದ್ದಾನೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಕಾರಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Read More