ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕಾರಿಣಿ ಸಭೆ- ನೆ.ಲ ನರೇಂದ್ರ ಬಾಬು..!

ಕೋಲಾರ: ಹಿಂದುಳಿದಿರುವ ಸಮುದಾಯಗಳನ್ನು ಪಕ್ಷದ ಚೌಕಟ್ಟಿನಲ್ಲಿ ಸಂಘಟಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾದ್ಯಂತ ಕಾರ್ಯಕಾರಣಿ ಸಭೆ ನಡೆಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ನೆ.ಲ ನರೇಂದ್ರ ಬಾಬು ಹೇಳಿದ್ರು. ಕೋಲಾರ ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ರು. ಕಾರ್ಯಕಾರಣಿ ಸಭೆಯನ್ನು ಸಂಸದ ಎಸ್ ಮುನಿಸ್ವಾಮಿ ಉದ್ಘಾಟಿಸಿದರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಅನೇಕ ಯೋಜನೆ ತಂದಿದೆ, ಈ ಯೋಜನೆಗಳನ್ನು ಹಿಂದುಳಿದ ಸಮುದಾಯದ ವರ್ಗಗಳಿಗೆ ತಲುಪಿಸಲು ಬಿಜೆಪಿ ಕಾರ್ಯಕರ್ತರು ಶ್ರಮವಹಿಸಬೇಕೆಂದರು. ಇನ್ನೂ ರಾಜ್ಯದಲ್ಲಿ ಮುಖ್ಯವಾಹಿನಿಗೆ ಬಾರದೇ ಉಳಿದುಕೊಂಡಿರುವ ಸಮುದಾಯಗಳನ್ನು ಗುರ್ತಿಸಲು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಆ ಸಮುದಾಯಗಳನ್ನು ಗುರ್ತಿಸಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಶೈಕ್ಷಣಿಕ ಹಾಗೂ ಆರ್ಥಿಕವಾಗಿ…

Read More

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾಗಿಯಾದ ಸಚಿವ ನಾಗೇಶ್..!

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನೆರವೇರಿದ್ದು, ಮುಳಬಾಗಿಲು ಪಟ್ಟಣದ ಡಿವಿ ಗುಂಡಪ್ಪ ಭವನದಲ್ಲಿ ಆಯೋಜಿಸಿದ್ದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಸ್ತುವಾರಿ ಸಚಿವ ಎಚ್ ನಾಗೇಶ್ ಚಾಲನೆ ನೀಡಿದರು, ಸಮ್ಮೇಳನಾ ಅಧ್ಯಕ್ಷ್ಯ ಚಾಂದ್ ಪಾಷಾ ರವರನ್ನ ಮೆರವಣಿಗೆ ಮೂಲಕ ಕರೆತರುವಾಗ ಎಲ್ಲಾರು ಒಗ್ಗೂಡಿ ಸಂಭ್ರಮದಿಂದ ತಮಟೆ,ವಾದ್ಯಕ್ಕೆ ಕುಣಿದರು, ಇನ್ನೂ ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷ್ಯ ಚಾಂದ್ ಪಾಷಾ ದಂಪತಿಗಳು, ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ್ಯ ನಾಗಾನಂದ ಕೆಂಪರಾಜ್, ತಹಶಿಲ್ದಾರ್ ರಾಜಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ಚರಿ ದೇವಿ, ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಜೆಡಿಎಸ್ ಹಿರಿಯ ಮುಖಂಡ ಆಲಂಗೂರು ಶಿವಣ್ಣ ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಮುಖಂಡರು, ಅಧಿಕಾರಿಗಳು, ಕನ್ನಡ ಪ್ರೇಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು, ಇನ್ನೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಎಚ್ ನಾಗೇಶ್ ರವರು, ಮುಳಬಾಗಿಲು ತಾಲೂಕಿನ ವಿವಿಧ…

Read More

ಕುರುಬ ಸಮುದಾಯ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆ..!

ಕೋಲಾರ: ಎಸ್.ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಕರ್ನಾಟಕ ರಾಜ್ಯದಲ್ಲಿರುವ ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಫೆಬ್ರವರಿ 7 ರಂದು ಬೃಹತ್ ಹೋರಾಟ ಸಭೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುರುಬರ ಎಸ್.ಟಿ ಮೀಸಲಾತಿ ಹೋರಾಟ ಸಮಿತಿ ಮುಖಂಡ ದೇವರಾಜ್ ಹೇಳಿದ್ದಾರೆ. ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್.ಟಿ ಹೋರಾಟ ಸಮಿತಿ ಮುಖಂಡರು ಬೆಂಗಳೂರಿನ ಬೃಹತ್ ಹೋರಾಟ ಸಭೆ ಅಂಗವಾಗಿ ಕೋಲಾರದಲ್ಲಿ ಜ.12 ರಂದು ಕೆ.ಇ.ಬಿ ಸಮುದಾಯ ಭವನದಲ್ಲಿ ಪೂರ್ವ ಭಾವಿ ಸಭೆಯನ್ನು ಹಮ್ಮಿಕೊಂಡಿದ್ದು, ಈ ಸಭೆಗೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧಿಪತಿಗಳು, ಸ್ವಾಮೀಜಿಗಳು,ಸಚಿವರಾದ ಕೆ.ಎಸ್ ಈಶ್ವರಪ್ಪ,ವಿಧಾನಪರಿಷತ್ ಸದಸ್ಯರಾದ ಎಂಟಿ ನಾಗರಾಜ್ ಸೇರಿದಂತೆ ರಾಜ್ಯ ಮಟ್ಟದ ಸಮುದಾಯದ ಮುಖಂಡರು ಭಾಗಿಯಾಗಿ ಎಸ್.ಟಿ ಮೀಸಲಾತಿ ಹೋರಾಟದ ಬಗ್ಗೆ ಮಾರ್ಗದರ್ಶನ ನೀಡಲ್ಲಿದ್ದಾರೆ. ಎಸ್.ಟಿ ಮೀಸಲಾತಿಯಿಂದ ಶೈಕ್ಷಣಿಕವಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ…

Read More

ಸಚಿವರ ಮುಂದೆಯೇ ಶಾಸಕರು ಹಾಗೂ ಸಂಸದರ ಜಟಾಪಟಿ..!

ಕೋಲಾರ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸಚಿವರ ಮುಂದೆ ಶಾಸಕ ಹಾಗೂ ಸಂಸದರ ನಡುವೆ ವಾಗ್ವಾದ ನಡೆದಿದ್ದು, ಕೋಲಾರ ಸಂಸದ ಮುನಿಸ್ವಾಮಿ ಮತ್ತು ಮಾಲೂರಿನ ಶಾಸಕ ನಂಜೇಗೌಡ ಸಚಿವರಾದ ಸಿಸಿ ಪಾಟಿಲ್ ಎದುರಲ್ಲೆ ಜಟಾಪಟಿ ನಡೆಸಿದ್ದಾರೆ. ಮಾಲೂರಿನ ಕೊಮ್ಮನಹಳ್ಳಿ ಗ್ರಾಮದ ಬಳಿ ಇರುವ ನಂಜೇಗೌಡ ಮಾಲಿಕತ್ವದ ಕ್ರಷರ್ ಗೆ ಇಂದು ಸಚಿವರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಗುಂಡು ತೋಪಿನಲ್ಲಿ ಕ್ರಷರ್ ಮಾಡಿದ್ದಾರೆ ಎಂದು ಸಂಸದರು ಆರೋಪಿಸಿದ್ದಾರೆ. ಇನ್ನೂ ಗಣಿ ಹಾಗೂ ಭೂ ವಿಜ್ಞಾನಿ ಸಚಿವರಾಗಿರುವ ಸಿಸಿ ಪಾಟೀಲ್ ಕ್ರಷರ್ ಭೇಟಿ ಸಂದರ್ಭದಲ್ಲಿ,ಗುಂಡು ತೋಪಿನಲ್ಲಿ ಶಾಸಕರು ಕ್ರಷರ್ ಮಾಡುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಸಚಿವರ ಮುಂದೆಯೇ ಬಹಿರಂಗವಾಗಿ ಹೇಳಿದ್ದನ್ನು ವಿರೋಧಿಸಿದ ಶಾಸಕರು, ಇದೆಲ್ಲಾ ಬಿಡಪ್ಪ ಪರ್ಸನಲ್ ಆಗಿ ತಗೋಬೇಡ ಎಂದು ಕೆರಳಿದ್ದಾರೆ.ಈ ವೇಳೆ ಸಂಸದ ಮುನಿಸ್ವಾಮಿ ನೀವು ಇದೆಲ್ಲಾ ಬಿಡಿ ನನಗೂ ಎಲ್ಲಾ ಗೊತ್ತಿದೆ ಎಂದು…

Read More

ವೈದ್ಯರ ನಿರ್ಲಕ್ಷಕ್ಕೆ ವ್ಯಕ್ತಿ ಸಾವು- ಸಂಬಂಧಿಕರಿಂದ ಆಸ್ಪತ್ರೆ ಗಾಜು ಪುಡಿ..!

ಕೋಲಾರ : ವೈದ್ಯರ ನಿರ್ಲಕ್ಷದಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಆಸ್ಪತ್ರೆಯ ಗಾಜುಗಳು ಪುಡಿ ಪುಡಿ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಕೋಲಾರ ನಗರದ ಶ್ರೇಯ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕದಿರಪ್ಪ ಅವರನ್ನು, ಕೋಲಾರದ ಶ್ರೇಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಇಂಜೆಕ್ಷನ್ ನೀಡುತ್ತಿದ್ದಂತೆ ಕದಿರಪ್ಪ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.ಇನ್ನು ರೋಗಿ ಕದಿರಪ್ಪ ಮೃತಪಟ್ಟ ಹಿನ್ನೆಲೆ ಸಂಬಂಧಿಕರು ಹಾಗು ವಿವಿಧ ಸಂಘಟನೆಗಳು ಆಸ್ಪತ್ರೆ ಬಳಿ ಜಮಾವಣೆಗೊಂಡು ಆಸ್ಪತ್ರೆ ವೈದ್ಯರನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆಯ ಗಾಜು ಪುಡಿಪುಡಿ ಮಾಡಿದ್ದಾರೆ. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ..!

ಕೋಲಾರ: ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಡಿವಿಜೆ ವೃತ್ತದಲ್ಲಿ ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮುಳಬಾಗಿಲು ತಾಲೂಕಿನ ಒಕ್ಕಲಿಗರ ಮುಖಂಡರು ಗುದ್ದಲಿ ಪೂಜೆಯನ್ನು ನೆರವೇರಿಸಿದ್ರು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಳಬಾಗಿಲು ಶಾಸಕ ಹೆಚ.ನಾಗೇಶ್ ಸ್ಥಳ ಪರಿಶೀಲನೆ ನಡೆಸಿದ್ರು. ಇನ್ನೂ ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಣಕ್ಕೆ ಕೆಂಪೇಗೌಡರ ರಥ ಮಾಡಿ ತಾಲೂಕಿನಾದ್ಯಾಂತ ರಥ ಸಂಚರಿಸಿ ದೇಣಿಗೆ ಸಂಗ್ರಹಿಸಿದ್ದು, ನಾಡ ಪ್ರಭು ಕೆಂಪೇಗೌಡ ಕೇವಲ ಒಂದು ಜಾತಿಗೆ ಸೀಮಿತವಲ್ಲ ಅವರು ಜಾತ್ಯಾತೀತ ನಾಯಕರು ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಕೆಂಪೇಗೌಡರ ರಥ ಸಂಚರಿಸಿ ಎಲ್ಲಾ ಜನರಿಂದ ದೇಣಿಗೆ ಸಂಗ್ರಹಿಸಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಒಕ್ಕಲಿಗ ಮುಖಂಡರು ತಿಳಿಸಿದ್ರು. ಇನ್ನು ಕೆಂಪೇಗೌಡರ ಮುಂದಿನ ಹುಟ್ಟು ಹಬ್ಬಕ್ಕೆ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ತಳಿಸಿದ್ರು. ಅಲ್ಲದೇ ಯಾವ ರೀತಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಎಂಬುದರ…

Read More

ಭಾರೀ ಮಳೆಗೆ ತತ್ತರಿಸಿದ ಹಕ್ಕಿಗಳು-ಮನೆ ಛಾವಣಿ ಮೇಲೆ ಆಶ್ರಯ ಪಡೆದ ಪಕ್ಷಿಗಳು..!

ಕೋಲಾರ: ನಿವಾರ್ ಸೈಕ್ಲೋನ್ ಪರಿಣಾಮ ಕೋಲಾರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಲೆ ಇದೆ. ಆದರೆ ಮಳೆ ಬಂದರೆ ಸಾಕು,ಮಳೆಯಲ್ಲಿ ಮಿಂದೆದ್ದು ಆಟವಾಡುವ, ಮಳೆ ಹಕ್ಕಿಗಳು ನೆಂದು,, ನೆಂದು ಸುಸ್ತಾಗಿ ಗೂಡು ಸೇರಿದೆ. ಅದರಲ್ಲೂ ಮುಳಬಾಗಿಲು ತಾಲೂಕಿನಲ್ಲಿ ಮಳೆ ಹಕ್ಕಿಗಳ ಸಂತತಿ ಹೆಚ್ಚಾಗಿವೆ. ಕಳೆದ ಎರಡು ದಿನದಿಂದ ಮಳೆ ನಿರಂತರವಾಗಿ ಸುರಿಯಿತ್ತಿರೋದರಿಂದ ಬೆದರಿದ ಹಕ್ಕಿಗಳು, ಜನರು ವಾಸಿಸುವ ಮನೆಗಳ ಚಾವಣಿಗೆ ಸೇರುತ್ತಿವೆ, ಜನರು ಸಹ ಹಕ್ಕಿಗಳಿಗೆ ಮನೆಯಲ್ಲಿ ವಾಸಿಸಲು ಅವಕಾಶ ನೀಡಿ ಮಾನವೀಯತೆ ಮೆರೆದಿದ್ದಾರೆ. ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಕೋಲಾರ

Read More

ಕೋಲಾರದಲ್ಲಿ ಮಳೆಯಿಂದ ಭಾರೀ ಹಾನಿ…!

ಕೋಲಾರ: ನಿವಾರ್ ಚಂಡ ಮಾರುತದ ಪರಿಣಾಮದಿಂದ ರಾಜ್ಯದ ಗಡಿ ಜಿಲ್ಲೆ ಕೋಲಾರ ದಲ್ಲಿಯೂ ಭಾರೀ ಮಳೆಯಾಗಿದೆ. ಕಳೆದ ರಾತ್ರಿಯಿಂದ ಜಿಲ್ಲೆಯಾದ್ಯಂತ ಮಳೆ ಯಾಗಿದೆ. ಒಟ್ಟು ಐದು ದಿನಗಳ ಕಾಲ ಮಳೆಯಾಗಲಿದ್ದು ಇಂದು ಭಾರೀ ಮಳೆಯ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಜಿಲ್ಲೆಯ ತಾಲೂಕುವಾರು ಮಳೆಯ ಪ್ರಮಾಣ ವನ್ನು ಈಗ ನೋಡೋದಾದ್ರೆ, ಮುಳಬಾಗಿಲಿನಲ್ಲಿ ಅತೀ ಹೆಚ್ಚು ಅಂದ್ರೆ 137.2 . ಮಿಲಿ ಮೀಟರ್ ಮಳೆಯಾಗಲಿದೆ. ಬಂಗಾರಪೇಟೆ ತಾಲೂಕಿನಲ್ಲಿ 133.4 ಮಿಲಿ ಮೀಟರ್ ಮೀಟರ್ ಮಳೆಯಾಗಲಿದೆ. ಕೋಲಾರ ತಾಲೂಕಿನಲ್ಲಿ 123.1 ಮಿಲಿ ಮೀಟರ್, ಶ್ರೀನಿವಾಸಪುರ 119.8 ಮಿ.ಮಿ, ಮಾಲೂರಿನಲ್ಲಿ 95 ಮಿಲಿ ಮೀಟರ್ ಮಳೆಯಾಗಲಿದೆ. ಅಲ್ಲದೇ ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ಪೇರಕನಹಳ್ಳಿ, ಸಿದ್ದನಹಳ್ಳಿ, ತೊಂಡ್ಡಪಲ್ಲಿ, ಕಾಡೇನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಮಾಡಿದ್ದು, ಅಪಾರ ಪ್ರಮಾಣದ ಬೆಳೆ, ಮನೆಗಳು ಹಾನಿಯಾಗಿದೆ. ಇನ್ನೂ…

Read More

ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿದ ಗ್ರಾಮ ಪಂಚಾಯತ್ ಅಧಿಕಾರಿಗಳು..!

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪುಲಗೂರ ಕೋಟೆ ಗ್ರಾಮ ಪಂಚಾಯತ್ ಯಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ನಡೆದಿದೆ. ಸರ್ಕಾರಿ ರಜಾ ದಿನಗಳು ಹೊರೆತು ಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಗ್ರಾಮ ಪಂಚಾಯಿತಿಗಳ ಕಚೇರಿಗಳ ಮೇಲೆ ರಾಷ್ಟ್ರ ದ್ವಜವನ್ನು ಹಾರಿಸಲು ಸರ್ಕಾರದ ಆದೇಶ ಇದ್ದರು ಪುಲಗೂರ್ ಕೋಟೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟ್ರ ದ್ವಜವನ್ನು ಹಾರಿಸುವದನ್ನು ಮರೆತು ಗ್ರಾಮ ಪಂಚಾಯತ್ ಅಧಿಕಾರಿಗಳು ಬೇಜವಾಬ್ದಾರಿ ತನವನ್ನು ತೋರಿದ್ದು, ಪ್ರಶ್ನಿಸಿದರೆ ಮಳೆಯಿಂದಾ ಧ್ವಜ ತೆಗೆದಿದ್ದೆವೆಂದು ಸಾಬೂಬು ನೀಡುತ್ತಿದ್ದಾರೆ. ವರದಿ- ರಾಮ್ ಚರಣ್ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ

Read More

ಆಕ್ರಮವಾಗಿ ಸಾಗಿಸುತ್ತಿದ್ದ ಸ್ಪಿರಿಟ್ ವಶ-ಕೋಲಾರ

ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ ಸುಮಾರು 1.39 ಕೋಟಿ ಮೌಲ್ಯದ 1,20,000 ಲೀಟರ್ ಸ್ಪಿರಿಟ್ ನ್ನು ಜಪ್ತಿ ಮಾಡಿದ್ದಾರೆ, ನಾಲ್ಕು ಟ್ರಕ್ ಗಳಲ್ಲಿ ಸ್ಪಿರಿಟ್ ENA ಅಂಧ್ರದಿಂದ ಕೇರಳ ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.ಅಕ್ರಮವಾಗಿ ಕರ್ನಾಟಕ ಗಡಿ ಪ್ರವೇಶಿಸಿ ಕೆಜಿಎಫ್ ತಾಲೂಕಿನ ಪಂತನಹಳ್ಳಿ ಗ್ರಾಮದ ಎಸ್ಸಾರ್ ಪೆಟ್ರೋಲ್ ಬಂಕ್ ಬಳಿ ಸ್ಪಿರಿಟ್ ತುಂಬಿದ ಟ್ಯಾಂಕರ್ ಗಳನ್ನು ನಿಲ್ಲಿಸಲಾಗಿತ್ತು.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಆಧಿಕಾರಿಗಳು ಸ್ಪಿರಿಟ್ ತುಂಬಿದ ಲಾರಿಗಳನ್ನು ವಶಪಡಿಸಿಕೊಂಡ ನಾಲ್ಕು ಜನ ಚಾಲಕರನ್ನು ಬಂಧಿಸಲಾಗಿದೆ. ವರದಿ- ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Read More