ಗದಗದಲ್ಲಿ ಡಿಎಪಿ ರಸಗೊಬ್ಬರಕ್ಕಾಗಿ ರೈತರ ಪರದಾಟ…

ಗದಗ: ಗದಗ ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರಕ್ಕಾಗಿ ರೈತರು ಪರದಾಟ ಆರಂಭಿಸಿದ್ದಾರೆ. ಸದ್ಯ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಿತ್ತನೆ ಮಾಡಲು ಡಿಎಪಿ ರಸಗೊಬ್ಬರ ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಈ ಗೊಬ್ಬರಕ್ಕಾಗಿ ರೈತರು ಪರದಾಟ ನಡೆಸುತ್ತಿದ್ದಾರೆ. ಇನ್ನು ಡಿಎಪಿ ರಸಗೊಬ್ಬರ ಇದ್ದರು ಅದನ್ನು ಕೊಡುವುದಕ್ಕೆ ಅಂಗಡಿ ಮಾಲೀಕರು ನಿರಾಕರಿಸುತ್ತಿದ್ದಾರೆ. ಅಲ್ಲದೆ, ೧೦ ಗಂಟೆ ನಂತರ ಬನ್ನಿ ಗೊಬ್ಬರ ನೀಡುತ್ತೇವೆ ಎಂಬ ಸಬೂಬು ಹೇಳುತ್ತಿದ್ದಾರೆ ಅಂತ ಗದಗ ತಾಲೂಕಿನ ಹರ್ತಿ ಗ್ರಾಮದ ರೈತರು ಆಕ್ರೋಶ ವ್ತಕ್ತಪಡಿಸಿದ್ದಾರೆ. ಇದರ ಜೊತೆಗೆ ತಾಂತ್ರಿಕ ಕಾರಣದಿಂದ ಬಯೋಮೆಟ್ರಿಕ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಗೊಬ್ಬರ ಖರೀದಿಗೆ ಬಂದ ರೈತರು ಖಾಲಿ ಕೈಯಲ್ಲಿ ವಾಪಸ್ ತೆರಳುವಂತಾಗಿದೆ. ರಾಕೇಶ್ ಎಕ್ಸ್ ಪ್ರೆಸ್ ಟಿವಿ ಗದಗ

Read More

ಮಕ್ಕಳ ವಿದ್ಯಾಭ್ಯಾಸಕ್ಕೆಂದು ತಾಳಿ ಅಡವಿಟ್ಟ ತಾಯಿ.. ಮಾಜಿ ಸಚಿವ ಜಮೀರ್ ಅಹಮ್ಮದ್ ನೆರವು..!

ಗದಗ: ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ತನ್ನ ತಾಳಿ ಅಡವಿಟ್ಟು ಮನೆಗೆ ಟಿವಿ ತಂದಿದ್ದ ಮಹಿಳೆಗೆ ಇದೀಗ ಮಾಜಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಬಂದಿದ್ದಾರೆ. ಗದಗ ಜಿಲ್ಲೆ ನಾಗೂರು ಗ್ರಾಮದ ಕಸ್ತೂರಿ ಎಂಬ ಮಹಿಳೆ ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿ ಅಡವಿಟ್ಟು ಮನೆಗೆ ಟಿವಿ ತಂದಿದ್ದರು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಮಾಜಿ ಸಚಿವ ಜಮೀರ್ ಅಹಮದ್ 50 ಸಾವಿರ ರೂಪಾಯಿ ಧನ ಸಹಾಯ ಮಾಡುವುದಾಗಿ ಟ್ವಿಟರ್ನಲ್ಲಿ ತಿಳಿಸಿದ್ದರು. ಅದರಂತೆ ಇಂದು ಜಮೀರ್ ಆಪ್ತ ಸಹಾಯಕನ ಬಳಿ 50 ಸಾವಿರ ರೂಪಾಯಿ ಹಣ ಕಳುಹಿಸಿದ್ದಾರೆ. ಅಡವಿಟ್ಟ ತಾಳಿ ಬಿಡಿಸಲು 15 ಸಾವಿರ ಹಾಗು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 35 ಸಾವಿರ ನೀಡಿ ಮಾನವೀಯತೆ ಮೆರೆದಿದ್ದಾರೆ. ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ದೇಶಕ್ಕೆ ಕೊರೊನಾ ಚಿಂತೆ..ಗದಗದಲ್ಲಿ ಮಾತ್ರ ಕೆಲವರಿಗೆ ಇಸ್ಪೀಟ್ ಆಟ ಬೇಕಂತೆ..

ಗದಗ: ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ.ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಕೆಲ ಯುವಕರಿಗೆ ಬುದ್ದಿ ಬಂದಿಲ್ಲ ಅನ್ನಿಸುತ್ತೆ..ಯಾಕಂದ್ರೆ ಲಾಕ್‌ಡೌನ್ ಇದ್ದರೂ ಮನೆಯಲ್ಲಿ ಇರದೇ ಪುಂಡಾಟ ಮೆರೆಯುತ್ತಿರುವ ಈ ಯುವಕರು ಬೆಟ್ಟದಂತಹ ಪ್ರದೇಶದಲ್ಲಿ ಗುಂಪು ಸೇರಿ ಜೂಜಾಟ ಶುರುವಿಟ್ಟುಕೊಂಡಿದ್ದಾರೆ. ಅ0ದ ಹಾಗೇ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಈ ಯುವಕರು ಜೂಜಾಟ ಆಡಲು ಬೆಟ್ಟದ ಬಳಿ ತೆರಳುತ್ತಿದ್ದು, ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆ ಭಾಗದಲ್ಲಿ ಯುವಕರ ದಂಡು ಜೂಜಾಟ ಆಡುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜೂಜಾಟದಲ್ಲಿ ತೊಡಗಿಕೊಂಡಿದ್ದಾರೆ. ಗಜೇಂಡ್ರಗಡ ನಗರದ ಸುತ್ತಮುತ್ತ ಅನೇಕ ಕಡೆಗಳಲ್ಲಿ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಈ ಕುರಿತು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ ಭಾಗದ ಮಂಟಪ, ದ್ವಾರಬಾಗಿಲು, ಸಿಂಹಹೊ0ಡ, ಮದ್ದಿನ ಕೋಣೆ, ಸರಸ್ವತಿ ಕೊಳ್ಳ ಸೇರಿದಂತೆ ಅನೇಕ ಕಡೆಗಳಲ್ಲಿ ಜೂಜಾಟವಾಡುತ್ತಿದ್ದಾರೆ. ಇನ್ನು ಯಾರಾದರೂ ಬಂದರೆ…

Read More

ಲಾಕ್‌ಡೌನ್ ನಡುವೆ ರೈತನಿಗೆ ಬರೆ ಎಳೆದ ಮಳೆ..

ಮುಂಡರಗಿ(ಗದಗ): ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ರೈತರು ಬೆಳದ ಫಸಲನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಕಂಗೆಟ್ಟು ಹೋಗಿದ್ದಾರೆ. ಆದರೆ ಇದರ ನಡುವೆಯೇ ಗದಗ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ. ಸದ್ಯ ಈ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ ಗ್ರಾಮದ ರೈತ ರಮೇಶ ಕಳಕರೆಡ್ಡಿ ಅವರ ಮಾವು ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಬಿರುಗಾಳಿ ರಭಸಕ್ಕೆ ಸುಮಾರು ೨ ಟನ್ ನಷ್ಟು ಮಾವು ಹಾಳಾಗಿದೆ.ಸಾಲ ಮಾಡಿ ೮ ಎಕರೆ ಮಾವಿನ ಬೆಳೆದಿದ್ದ ರಮೇಶ್, ಈ ಬಾರಿ ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಎಲ್ಲವೂ ಕೊಚ್ಚಿಕೊಂಡು ಹೋಗಿದೆ.ಒಂದೆಡೆ ಕೊರೊನಾ ಸಂಕಟ, ಇತ್ತ ಪ್ರಕೃತಿ ಹೊಡೆತದಿಂದ ಸಂಕಷ್ಟದಲ್ಲಿರುವ ರೈತರತ್ತ ಇನ್ನಾದರೂ ಸರ್ಕಾರ ಗಮನ ಹರಿಸಬೇಕಾಗಿದೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Read More

ಗದಗದಲ್ಲಿ ಬಿಎಸ್‌ಎಫ್ ಯೋಧ ಸಾವು..

ಗದಗ: ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಸಾವು ಕಂಡಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ. ವೀರಪ್ಪ ತಹಶೀಲ್ದಾರ (೩೪) ಮೃತ ಯೋಧರಾಗಿದ್ದು,ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಂದ ಹಾಗೇ ವೀರಪ್ಪ ಬಿಎಸ್‌ಎಫ್ ಪಶ್ಚಿಮ ಬಂಗಾಳದ ೧೫೮ನೇ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ೨೦೦೬ರಿಂದ ದೇಶ ಸೇವೆಯಲ್ಲಿ ತೊಡಗಿದ್ದರು. ವೀರಪ್ಪ ರಜೆಗಾಗಿ ಶ್ಯಾಗೋಟಿ ಗ್ರಾಮಕ್ಕೆ ಬಂದಿದ್ದು, ಏಪ್ರಿಲ್ ೧೫ಕ್ಕೆ ರಜೆ ಮುಗಿದಿತ್ತು. ಆದರೆ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ವಾಪಸ್ ಹೋಗಲು ಸಾಧ್ಯವಾಗದೆ ಗ್ರಾಮದಲ್ಲೇ ಉಳಿದುಕೊಂಡಿದ್ದರು.ಈ ವೇಳೆ ಇವರು ನಿಮೋನಿಯಾ ಹಾಗೂ ಉಸಿರಾಟದ ತೊಂದರೆಯಿAದ ಬಳಲುತ್ತಿದ್ದರು. ಹೀಗಾಗಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಸೇರಿದ ಯೋಧ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸಾವನ್ನಪ್ಪಿದ್ದರು. ಬಳಿಕ ಕೊರೊನಾ ವೈರಸ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದಾದ ನಂತರ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಇಂದು ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ಅನುಮತಿ…

Read More

ಗದಗದ ನಾನ್‌ವೆಜ್ ಮಾರ್ಕೆಟ್‌ನಲ್ಲಿ ಜನವೋ ಜನ..!

ಗದಗ : ನಗರದಲ್ಲಿ ನಾನ್‌ವೆಜ್ ಪ್ರೀಯರು ಮಾರ್ಕೆಟ್ ಓಪನ್ ಆಗುತ್ತಿದ್ದಂತೆ ನಾ ಮುಂದೆ, ತಾ ಮುಂದೆ ಅಂತ ಜಮಾವಣೆಗೊಂಡು ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಲು ಮುಂದಾದರು. ಇಂದು ಭಾನುವಾರದ ಬಾಡೂಟಕ್ಕಾಗಿ ೩ ಗಂಟೆ ಮಾತ್ರ ಮಾಂಸ ಮಾರಾಟ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಜಿಲ್ಲಾಡಳಿತ ಈ ಆದೇಶದನ್ವಯ ನಗರದ ಜವಳಗಲ್ಲಿ ನಾನ್‌ವೆಜ್ ಮಾರ್ಕೆಟ್‌ನಲ್ಲಿ ಜನಸ್ತೋಮ ನಿರ್ಮಾಣವಾಗಿತ್ತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಮಾಂಸ ಪ್ರೀಯರನ್ನ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮೂರು ಸರದಿ ಸಾಲಿನಲ್ಲಿ ನಿಲ್ಲಿಸಿ ಮಾಂಸ ಖರೀದಿಗೆ ಅವಕಾಶ ಕಲ್ಪಿಸಿದರು. ಇನ್ನು ಪೊಲೀಸರ ಸರ್ಪಗಾವಲಿನಲ್ಲಿ ಜನ ಸರದಿ ಸಾಲಿನಲ್ಲಿ ಮಟನ್, ಚಿಕನ್, ಫಿಶ್ ಖರೀದಿ ಮಾಡಿದರು. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Read More

ತುತ್ತು ಅನ್ನಕ್ಕಾಗಿ ಮಕ್ಕಳ ಜೊತೆ ಕಣ್ಣೀರಿಟ್ಟ ತಾಯಿ..

ಗದಗ: ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನಲೆಯಲ್ಲಿ ಆಹಾರ ಸಿಗದೆ ಮಹಿಳೆ, ಮಕ್ಕಳು ಪರದಾಟ ನಡೆಸುತ್ತಿರೋದು ಗದಗದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಆಹಾರ ಸಿಗದ ತಾಯಿ ಎರಡು ಮಕ್ಕಳ ಜೊತೆಗೆ ಕುಳಿತು ಕಣ್ಣೀರಿಡುತ್ತಿರೋ ದೃಶ್ಯ ಕಂಡು ಬಂದಿದೆ. ಇನ್ನು ಈಕೆ ಗದಗನ ನರಸಾಪೂರ ಗ್ರಾಮದ ರತ್ನವ ಕೊಪ್ಪಳ ಎಂಬುದಾಗಿ ತಿಳಿದು ಬಂದಿದ್ದು, ಎರಡು ಮಕ್ಕಳ ಜೊತೆ ಗದಗ ನಗರದ ತುಂಬಾ ಅನ್ನಕ್ಕಾಗಿ ಪರದಾಡಿದ್ದಾಳೆ. ಕೊನೆಗೆ ಅಲ್ಲಿದ್ದ ಸಾರ್ವಜನಿಕರು ಹಾಗೂ ಅಧಿಕಾರಿಗಳು ಮಹಿಳೆಗೆ ಉಪಹಾರ ನೀಡಿದ್ದಾರೆ. ಈ ಮೂಲಕ ಇವತ್ತಿನ ಆ ತಾಯಿ-ಮಕ್ಕಳ ಊಟಕ್ಕೆ ದಾರಿಯಾಗಿದೆ.ಆದರೆ ನಾಳೆಯೂ ಯಾರಾದರೂ ಈಕೆಗೆ ಸಹಾಯ ಮಾಡಿದರೇ ಸರಿ,ಇಲ್ಲವಾದರೇ ಗದಗದಲ್ಲಿ ಮತ್ತದೇ ತಾಯಿ ಮಕ್ಕಳ ಕರುಣಾಜನಕ ಕಥೆ ಮುಂದುವರೆಯಲಿದೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Read More

ಬಿಸಿಲಿನಿಂದ ಬೆಂದ ಗದಗಕ್ಕೆ ತಂಪೆರದ ಮಳೆರಾಯ..

ಗದಗ: ಒಂದೆಡೆ ಕೊರೊನಾ ಭಯ,ಇನ್ನೊಂದೆಡೆ ಬಿಸಿಲಿನಿಂದ ಹೈರಾಣಾಗಿದ್ದ ಗದಗಕ್ಕೆ ವರುಣ ಕೆಲ ಕಾಲ ತಂಪೆರದಿದ್ದಾನೆ. ಸದ್ಯ ಗದಗ ಜಿಲ್ಲೆಯ ಹಲವಡೆ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದ್ದು,ಕೆಲವು ಕಡೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿವೆ.ಇನ್ನು ಒಂದು ಗಂಟೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡರೇ ವಿದ್ಯುತ್ ಸಂಪರ್ಕ ಕಟ್ ಆಗಿದೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Read More

ಕರ್ನಾಟಕದಲ್ಲಿ ಆನೆಗೂ ಕೊರೊನಾ ವೈರಸ್ ಭೀತಿ

ಗದಗ : ದೈತ್ಯ ಆನೆಗೆ ಇರುವೆಯೊಂದು ಕಾಟ ಕೊಡುವ ಕಥೆ ಕೇಳಿದ್ದೇವು.ಈಗ ಕಣ್ಣಿಗೇ ಕಾಣದ ಕೊರೊನಾ ವೈರಸ್ ಆನೆಗಳಲ್ಲೂ ಅದರ ಭೀತಿ ಹುಟ್ಟಿಸಿದೆ. ಇದರ ಪರಿಣಾಮವಾಗಿ ಗದಗ ಜಿಲ್ಲೆಯ ಶಿರಹಟ್ಟಿಯ ಫಕೀರೇಶ್ವರ ಮಠದ ಆನೆ ಹಾಗೂ ಲಕ್ಷ್ಮೇಶ್ವರ ಸಮೀಪದ ಮುಕ್ತಿ ಮಂದಿರದ ಆನೆಗಳನ್ನು ಸಹ ಐಸೊಲೇಷನ್‌ನಲ್ಲಿ ಇಡಲಾಗಿದೆ. ಸದ್ಯ ಪ್ರತಿದಿನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದ್ಯರು ಬಂದು ಎರಡೂ ಆನೆಗಳ ಆರೋಗ್ಯವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಈ ಮೊದಲು ೨ ಆನೆಗಳನ್ನು ಪ್ರತಿದಿನ ನಾಲ್ಕಾರು ಕಿಲೋಮೀಟರ್ ವಾಕಿಂಗ್ ಹಾಗೂ ಆಹಾರಕ್ಕಾಗಿ ಕರೆದುಕೊಂಡು ಹೋಗಲಾಗುತಿತ್ತು. ಆದರೆ ಸರ್ಕಾರದ ಲಾಕ್‌ಡೌನ್ ಆದೇಶದ ನಂತರ ಎರಡು ಆನೆಗಳನ್ನು ಮಠದಲ್ಲೇ ಆರೈಕೆ ಮಾಡಲಾಗುತ್ತಿದೆ. ಇನ್ನು ಅರಣ್ಯ ಇಲಾಖೆಯವರು ಎರಡು ಆನೆಗಳ ಆರೋಗ್ಯದ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಪ್ರತಿದಿನ ಮಠಗಳಿಗೆ ಭೇಟಿ ನೀಡಿ ಎರಡು ಆನೆಗಳ ಆರೋಗ್ಯದ ಬಗ್ಗೆ ನಿಗಾ…

Read More

ಶೌಚಕ್ಕೂ ಜನ್ರನ್ನ ಬಿಡದ ಗದಗ ಪೊಲೀಸ್ರು..

ಗದಗ : ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಅನ್ನ, ನೀರು ಇಲ್ಲದೇ ನಿಷೇಧಿತ ಪ್ರದೇಶದ ಮಕ್ಕಳು, ವೃದ್ಧರು, ಮಹಿಳೆಯರ ಗೋಳಾಟ ಹೇಳ ತೀರದಾಗಿದೆ. ಸದ್ಯ ಗದಗ ನಗರದ ರಂಗನವಾಡಿಗಲ್ಲಿ ಕಂಟೈನ್ಮೆAಟ್ ಪ್ರದೇಶ ಅಂತ ಘೋಷಣೆ ಮಾಡಲಾಗಿದ್ದು, ಶೌಚಕ್ಕೂ ಕೂಡ ಜನರನ್ನು ಪೊಲೀಸರು ಹೊರ ಬಿಡುತ್ತಿಲ್ಲ.. ಪರಿಣಾಮ ಐದು ದಿನಗಳಿಂದ ಏನೂ ಇಲ್ಲದೇ ಪರದಾಡುತ್ತಿರೋ ಜನ್ರು ಅದರಲ್ಲೂ ಮಹಿಳೆಯರು ಇಂದು ರೊಚ್ಚಿಗೆದಿದ್ದಾರೆ. ಅಲ್ಲದೆ, ಏರಿಯಾದಲ್ಲಿ ಸುಲಭ ಶೌಚಾಲಯ ಇಲ್ಲದಕ್ಕೆ ಚೆಂಬೂ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಜನರು ನಿಷೇಧಿತ ಪ್ರದೇಶದಿಂದ ಹೊರ ಬಿಡುವಂತೆ ಆಗ್ರಹಿಸಿದರಲ್ಲದೆ,ಜಿಲ್ಲಾಡಳಿತ ವಿರುದ್ಧ ನಿಷೇಧಿತ ಪ್ರದೇಶದ ಈ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್, ಡಿಸಿ ಎಂ.ಜಿ ಹಿರೇಮಠ ಉಚಿತ ದಿನಸಿ, ಹಾಲು, ತರಕಾರಿ ನೀಡುವ ಭರವಸೆ ನೀಡಿದ್ದಾರೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Read More