ಶಹಾಪುರ :ಶ್ರಮಪಟ್ಟರೆ ಯಾರು ಬೇಕಾದರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂಬುದನ್ನು ಶಿವಶಾಂತವೀರ ದಿವಾಕರ್ ಸಾಬೀತುಪಡಿಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸಾಗಿ ಕೇಂದ್ರ ಸರ್ಕಾರದ(government of india national career service centre bangalore) ಉಪ ಪ್ರಾದೇಶಿಕ ಉದ್ಯೋಗ ಅಧಿಕಾರಿಯಾಗಿ ಇಂದು ಬೆಂಗಳೂರಿನಲ್ಲಿ (sub regional employment officer ) ಅಧಿಕಾರ ಸ್ವೀಕರಿಸಿದರು. 2017 ರಲ್ಲಿ ಭಾರತ ಯುಪಿಎಸ್ಸಿ ಪರೀಕ್ಷೆಗೆ ಒಟ್ಟು 8 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಆ 8 ಹುದ್ದೆಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಶಿವಶಾಂತವೀರ ದಿವಾಕರ್.ಈ ಹಿಂದೆ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸಿ ಇಂದು ಕರ್ನಾಟಕಕ್ಕೆ ವರ್ಗಾವಣೆಗೊಂಡು (ministry of labour and employment directorate general of employment Bangalore ) ಕಾರ್ಯನಿರ್ವಹಿಸುತ್ತಿದ್ದಾರೆ.ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಬಡ ಕುಟುಂಬದಲ್ಲಿ ಜನಿಸಿ ಕಠಿಣ ಪರಿಶ್ರಮದಿಂದ ವಿಧ್ಯಾಭ್ಯಾಸ ಮಾಡಿದ್ದರು. ಶಿವಶಾಂತವೀರ ದಿವಾಕರ್ ಅವರ 4 ನೇ ಹುದ್ದೆ ಇದಾಗಿದ್ದು, ತಂದೆಯ…
Read MoreCategory: ಗುಲಬರ್ಗಾ
ತಾಲೂಕು ಕೇಂದ್ರಗಳಲ್ಲೇ ಇನ್ನೂ ಮುಂದೆ ಡಿಸಿ,ಎಸ್ಪಿಗಳ ವಾಸ
ಬೆಂಗಳೂರು: ತಾಲ್ಲೂಕುಗಳನ್ನು ವಿಭಾಗಿಸಿಕೊಂಡು ಆ ತಾಲ್ಲೂಕು ಕೇಂದ್ರಗಳಲ್ಲಿಯೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ವಾಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ. ಅಂದ ಹಾಗೇ ಬೆಂಗಳೂರಿನಲ್ಲಿAದು ಕೋವಿಡ್ ೧೯ ನಿಯಂತ್ರಣಕ್ಕೆ ಸಂಬAಧ ವಿಜಯಪುರ, ಯಾದಗಿರಿ,ಉಡುಪಿ, ಕಲಬುರ್ಗಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಸಿಎಂ,ಕೋವಿಡ್ ೧೯ ಪರೀಕ್ಷಾ ಕಿಟ್‌ಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಬಾರದು. ಹೋಮ್ ಕ್ವಾರಂಟೈನ್ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು.ಪೋಲೀಸ್ ಇಲಾಖೆ ವತಿಯಿಂದ ಗೃಹ ಬಂಧನದಲ್ಲಿರುವವರ ಮನೆಯ ಬಳಿ ಪೇದೆಗಳನ್ನು ನಿಯೋಜಿಬೇಕಲ್ಲದೆ. ಗ್ರಾಮ ಪಂಚಾಯತಿಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಇವರ ಬಗ್ಗೆ ನಿಗಾ ವಹಿಸಬೇಕು. ಗ್ರಾಮ ಪಂಚಾಯತಿಗಳ ಸದಸ್ಯರಿಗೆ ಈ ಬಗ್ಗೆ ತರಬೇತಿಯನ್ನೂ ನೀಡಲಾಗಿದ್ದು, ಬೂತ್ ಮಟ್ಟದ ತಂಡಗಳೂ ಪ್ರತಿ…
Read Moreಕ್ವಾರೈಂಟೈನ್‌ನಲ್ಲಿರುವವರಿಗೆ ದಿನ ಬಳಕೆ ವಸ್ತು ವಿತರಣೆ
ಅಫಜಲಪುರ(ಕಲಬುರಗಿ): ಅಫಜಲಪುರ ಶಾಸಕರ ಅಭಿಮಾನಿಯಿಂದ ಕ್ವಾರೈಂಟೈನ್‌ನಲ್ಲಿರುವವರಿಗೆ ದಿನಬಳಕೆಯ ವಸ್ತುಗಳ ಜೊತೆಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು, ಅಂದ ಹಾಗೇ ಅಫಜಲಪುರ ತಾಲ್ಲೂಕಿನ ಶಾಸಕ ಎಂ.ವೈ.ಪಾಟೀಲ್ ಅವರ ಅಭಿಮಾನಿ ಉಡಚಾಣ ಹಟ್ಟಿ ಗ್ರಾಮದ ದತ್ತು ಬಂಡಗಾರ ಕ್ವಾರೈಂಟೈನ್‌ನಲ್ಲಿರುವ ಜನರಿಗೆ ದಿನಬಳಕೆಯ ಅಗತ್ಯ ವಸ್ತುಗಳು ಮತ್ತು ಊಟ ಹಾಗೂ ಉಪಹಾರದ ಸಾಮಗ್ರಿಗಳು ತರಕಾರಿ ಜೊತೆಗೆ ಮಕ್ಕಳಿಗೆ ಬಿಸ್ಕೇಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ವಿತರಣೆಯ ಸಮಯದಲ್ಲಿ ಶಾಸಕರ ಮಗನಾದ ಡಾ.ಸಂಜಯ ಕುಮಾರ ಪಾಟೀಲ್ ಮಾತನಾಡಿ, ಜನರು ಕೊರೊನಾಗೆ ಹೆದರುವ ಅವಶ್ಯಕತೆ ಇಲ್ಲ.ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಿಕೊಂಡು ಹೋಗಿ, ಊರಿನ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದತ್ತು ಬಂಡಗಾರ ಅವರ ನೇತೃತ್ವದಲ್ಲಿ ಸದಾ ಸನ್ನದ್ಧರಾಗಿದ್ದಾರೆ.ಅಲ್ಲದೆ,ತಾಲ್ಲೂಕಿನ ಅಭಿವೃದ್ಧಿಗೆ ಎಂ.ಯೈ.ಪಾಟೀಲ್ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಮಹಾದೇವಗೌಡ ಕರೂಟಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ ಜಮಾದಾರ್ ಉಪಸ್ಥಿತರಿದ್ದರು.…
Read Moreಹಾಲಿನ ಡೈರಿಗೆ ಬೆಂಕಿ..ಅಪಾರ ನಷ್ಟ..
ಅಫಜಲಪುರ(ಕಲಬುರಗಿ):ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಾಲಿನ ಡೈರಿ ಸುಟ್ಟು ಕರಕಲಾಗಿರುವ ಘಟನೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚನ್ನಪ್ಪ ಉಪ್ಪಿನ್ ಎಂಬುವರಿಗೆ ಸೇರಿದ ಹಾಲಿನ ಡೈರಿ ಬೆಂಕಿಯ ಕೆನ್ನಾಲಿಗೆಗೆ ಧಗ ಧಗನೆ ಹೊತ್ತಿ ಉರಿದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಅಷ್ಟೊತ್ತಿಗಾಗಲೇ ಒಳಗಿದ್ದ ೯೦ ಸಾವಿರ ರೂ.ನಗದು ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಇನ್ನು ಸ್ಥಳಕ್ಕಾಗಮಿಸಿದ ಸಮಾಜ ಸೇವಕ ಹಾಗೂ ಕೊರಬು ಫೌಂಡೇಶನ್ ಸಂಸ್ಥಾಪಕ ಜೆ.ಎಂ.ಕೊರಬು,ಚನ್ನಪ್ಪರಿಗೆ ಆತ್ಮಸ್ಥೈರ್ಯ ತುಂಬಿ ೧೦ ಸಾವಿರ ರೂ. ನೇರವು ನೀಡಿ ಮಾನವೀಯತೆ ಮೆರೆದರು.ಅಲ್ಲದೆ, ಅಂಗಡಿಯವರಿಗೆ ಕೂಡಲೇ ಪರಿಹಾರ ನೀಡುವಂತೆ ಸಮಾಜ ಸೇವಕರಾದ ಜೆ.ಎಂ.ಕೊರಬು ಸರಕಾರಕ್ಕೆ ಆಗ್ರಹಿಸಿದ್ದಾರೆ. ಈರಣ್ಷ ಎಂ.ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)
Read Moreಮಾಶಾಳದಲ್ಲಿ ಕ್ವಾರೈಂಟೈನ್‌ನಲ್ಲಿರುವವರಿಗೆ ಹೋಳಿಗೆ ಊಟ..
ಅಫಜಲಪುರ(ಕಲಬುರಗಿ):ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಜೆ.ಎಂ.ಕೊರಬು ಫೌಂಡೇಶನ್ ವತಿಯಿಂದ ಕ್ವಾರೈಂಟೈನ್‌ನಲ್ಲಿರುವವರಿಗೆ ಹೋಳಿಗೆ ತುಪ್ಪದ ಊಟ ನೀಡಲಾಯಿತು. ಅಂದ ಹಾಗೇ ಗಡಿ ಭಾಗದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಕ್ವಾರೈಂಟೈನ್‌ನಲ್ಲಿ ಇರುವ ಸುಮಾರು ೩೫೦ಕ್ಕೂ ಹೆಚ್ಚು ಮಂದಿಗೆ ಜೆ.ಎಂ.ಕೊರಬು ಫೌಂಡೇಶನ್ ಹೊಳಿಗೆ, ತುಪ್ಪದ ಊಟ ನೀಡಿದೆ. ಇದೇ ವೇಳೆ ಜೆ.ಎಂ.ಕೊರಬು ಫೌಂಡೇಶನ್‌ನ ಸಂಸ್ಥಾಪಕ ಜೆ.ಎಂ.ಕೊರಬು ಮಾತನಾಡಿ,ಬೇರೆ ಊರುಗಳಿಂದ ಬಂದಿರುವ ನಮ್ಮ ಜನರಿಗೆ ದೇವರ ದಯೆಯಿಂದ ಕೊರೊನಾ ಭಾದಿಸದಿರಲಿ,ಎಲ್ಲೆಡೆಯೂ ಜನರು ಸುರಕ್ಷಿತವಾಗಿರಲಿ.ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಿಳಿಸಿದರು. ಇದಲ್ಲದೆ, ಜೆ.ಎಂ.ಕೊರಬು ಫೌಂಡೇಷನ್ ಈಗಾಗಲೇ ಅಫಜಲಪುರ ತಾಲ್ಲೂಕಿನಲ್ಲಿ ಮಾಸ್ಕ್ ವಿತರಣೆ, ಆಹಾರದ ಧಾನ್ಯದ ಕಿಟ್‌ಗಳ ವಿತರಣೆಯ ಕೆಲಸ ಮಾಡುತ್ತಿದೆ.ಜೊತೆಗೆ ನೀರಿನ ಸಮಸ್ಯೆ ಇರುವ ಮಾಶಾಳ ಗ್ರಾಮದಲ್ಲಿ ಮಳೆ ಬರುವವರೆಗೆ ಟ್ಯಾಂಕರ್ ಮೂಲಕ ನೀರು ನೀಡುವುದಾಗಿ ತಿಳಿಸಿದ್ದಾರೆ. ಈರಣ್ಣ ಎಂ.ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)
Read Moreಮಾಶಾಳ ಕ್ವಾರೆಂಟೈನ್‌ಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಭೇಟಿ
ಅಫಜಲಪುರ(ಕಲಬುರಗಿ):ಅಫಜಲಪುರ ತಾಲೂಕಿನ ಗಡಿ ಗ್ರಾಮ ಮಾಶಾಳದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳಲ್ಲಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಭೇಟಿ ನೀಡಿ ಅಲ್ಲಿನ ಜನರ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಹಂತ ಹಂತವಾಗಿ ಎಲ್ಲರಿಗೂ ಈ ವಿಶೇಷ ಪ್ಯಾಕೇಜ್‌ನ ಸೌಲಭ್ಯ ಸಿಗುವುದು.ಹೀಗಾಗಿ ಯಾರೂ ಇನ್ನು ಮುಂದೆ ಆತಂಕ ಪಡದೇ ಉದ್ಯೋಗ ಖಾತ್ರಿಯಿಂದ ಸಿಗುವ ಕೆಲಸದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇನ್ನು ಮಾಜಿ ಸಚಿವ ಭೇಟಿ ವೇಲೆ ಬಿಜೆಪಿ ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯ ಹಾಗರಗಿ, ಮುಖಂಡ ವಿಶ್ವನಾಥ ರೇವೂರ ಹಾಜರಿದ್ದರು. ಈರಣ್ಣ ಎಂ.ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)
Read Moreಮಹಾರಾಷ್ಟ್ರ ಸರ್ಕಾರದ ದುರಂಹಕಾರ,ತುತ್ತು ಅನ್ನಕ್ಕಾಗಿ ಕನ್ನಡಿಗರ ಹಾಹಾಕಾರ..
* ಕೊರೊನಾ ಟೈಂನಲ್ಲೂ ಕನ್ನಡಿಗರ ಮೇಲೆ ಮರಾಠಿಗರ ಗದಪ್ರಹಾರ.. * ಕರ್ನಾಟಕದವರಿಗೆ ಊಟ ವಿತರಣೆ ಮಾಡಲು ಬಿಡದ ಮರಾಠಿಗರು.. ಅಫಜಲಪುರ(ಕಲಬುರಗಿ):ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಬೋರೋಟಿ ಗ್ರಾಮದ ಆಶ್ರಮ ಶಾಲೆಯೊಂದರಲ್ಲಿ ಪುಣೆ, ಮುಂಬೈಯಿAದ ಬಂದು ಕ್ವಾರೈಂಟೈನ್‌ನಲ್ಲಿ ಇಟ್ಟ ಕನ್ನಡಿಗರಿಗೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ.. ಸದ್ಯ ಮುಂಬಯಿ, ಪುಣೆಯಿಂದ ಬಂದ ಕನ್ನಡಿಗರಿಗೆ ಅಕ್ಕಲಕೋಟ ತಾಲ್ಲೂಕಿನ ಬೋರೋಟಿ ಗ್ರಾಮದ ಮಲ್ಲಿಕಾರ್ಜುನ ಆಶ್ರಮ ಶಾಲೆಯಲ್ಲಿ ಕ್ವಾರೈಂಟೈನ್ ಮಾಡಲಾಗಿದೆ. ಐದಾರು ದಿನಗಳಿಂದ ಕ್ವಾರೈಂಟೈನ್‌ನಲ್ಲಿ ಇರುವ ರಾಜ್ಯದ ಅಫಜಲಪುರ ತಾಲ್ಲೂಕಿನ ಗಡಿ ಗ್ರಾಮ ಮಾಶಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಾಜೀವನಗರ ತಾಂಡಾ ಮತ್ತು ಬಬಲಾದ ತಾಂಡಾದ ಸುಮಾರು ಚಿಕ್ಕ ಮಕ್ಕಳು ಸೇರಿದಂತೆ ೫೦ ಜನರ ಸ್ಥತಿ ಚಿಂತಾಜನಕವಾಗಿದೆ.ಅಲ್ಲದೆ,ಅತ್ತ ಮಹಾರಾಷ್ಟç ಸರಕಾರವಾಗಲಿ,ಇತ್ತ ಕರ್ನಾಟಕ ಸರ್ಕಾರವಾಗಲಿ ಕನಿಷ್ಟ ಮಾನವೀತೆ ದೃಷ್ಠಿಯಿಂದ ಇವರ ನೆರವಿಗೆ ಬರ್ತಾಯಿಲ್ಲ. ಜೊತೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರವಾಗಲಿ, ಸೋಲಾಪುರ ಜಿಲ್ಲಾಡಳಿತವಾಗಲಿ…
Read Moreಅಫಜಲಪುರ ತಾಲೂಕಿಗೆ ಕಾಲಿಟ್ಟ ಕಿಲ್ಲರ್ ಕೊರೊನಾ
ಅಫಜಲಪುರ(ಕಲಬುರಗಿ):ಉಸಿರಾಟದ ತೊಂದರೆಯಿAದ ಆಸ್ಪತ್ರೆ ಸೇರಿದ್ದ ೩೫ ವಯಸ್ಸಿನ ಪಿ-೮೦೫ ರೋಗಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ ಅಫಜಲಪುರ ತಾಲ್ಲೂಕಿನಲ್ಲಿ ಎಲ್ಲೆಡೆಯೂ ಜನರೇ ಸಿಲಡೌನ್ ಮಾಡಿ ಕೊಂಡಿಕೊAಡಿದ್ದು,ಇಲ್ಲಿನ ಓಣಿಯಿಂದ ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ಜನರೇ ಮುಳ್ಳು ಕಂಟಿಗಳನ್ನು ಹಾಕಿದ್ದಾರೆ. ಇನ್ನು ಅಫಜಲಪುರ ತಾಲ್ಲೂಕಿನಲ್ಲಿ ಎಲ್ಲೆಡೆಯೂ ಭಯದ ವಾತಾವರಣ ಇದೆ.ಯಾವ ರೋಗಿಯ ಸಂಪರ್ಕದಿAದ ಸೊಂಕು ತಗುಲಿದೆ ಎನ್ನುವುದರ ಬಗ್ಗೆ ಮಾಹಿತಿ ಇನ್ನೂ ಬರಬೇಕಿದೆ. ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)
Read Moreಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ..!?
ಅಫಜಲಪುರ(ಕಲಬುರಗಿ): ಜಿಲ್ಲೆಯಲ್ಲಿ ರೈತರು ಕಷ್ಟಪಟ್ಟು ಬೆಳೆಗಳನ್ನು ಬೆಳೆದಿದ್ದಾರೆ.ಆದರೆ ಇದೀಗ ಅದೇ ಬೆಳೆಯನ್ನು ಖರೀಸುವವರು ಇಲ್ಲದೇ ರೈತರು ಕಂಗಲಾಗಿದ್ದು,ಸದ್ಯ ಕುಂಬಳ ಕಾಯಿ ಬೆಳೆದ ರೈತನ ಪಾಡು ಕೂಡ ಇದೆ ಆಗಿದೆ. ಹೌದು, ಅಫಜಲಪುರ ತಾಲ್ಲೂಕಿನ ಶಿವೂರ ಗ್ರಾಮದ ರೈತರಾದ ವಿಠ್ಠಲ ತೇಲಿ ಮತ್ತು ಬಸವರಾಜ ಹುನ್ನಳ್ಳಿ ಕಷ್ಟಪಟ್ಟು ಆರು ಎಕರೆ ತೋಟದಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ.ಆದರೀಗ ಅದೇ ಬೆಳೆಯನ್ನು ಖರೀದಿಸುವವರು ಇಲ್ಲದೇ ಆ ರೈತರು ಕಂಗಾಲಾಗಿದ್ದಾರೆ. ಇನ್ನು ಮುಂಬೈನ ದಲ್ಲಾಳಿಗಳ ಮಾತು ಕೇಳಿ ಟೆಂಪೋ ವಾಹನಕ್ಕೆ ಕುಂಬಳಕಾಯಿಯನ್ನು ತುಂಬಿಸಿದ್ದರು.ಆದರೆ ಕೊನೆ ಕ್ಷಣದಲ್ಲಿ ದಲ್ಲಾಳಿಗಳ ನಿರಾಕರಣೆಯಿಂದ ಕುಂಬಳ ಕಾಯಿ ತುಂಬಿಕೊAಡ ವಾಹನಗಳು ನಿಂತಲೇ ನಿಂತಿವೆ. ವಿಪರ್ಯಾಸವೆ0ದರೆ ಅತ್ತ ವಾಹನದ ಬಾಡಿಗೆ ಕೊಡಲಾಗದೇ,ಇತ್ತ ಕುಂಬಳಕಾಯಿ ಮಾರುಕಟ್ಟೆಗೆ ಕಳುಹಿಸಲಾಗದೇ ರೈತರು ಚಿಂತಾಕ್ರಾ0ತರಾಗಿದ್ದಾರೆ. ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)
Read Moreಕರ್ನಾಟಕದಲ್ಲಿ 56 ಮಕ್ಕಳಿಗೆ ಕೊರೊನಾ ಸೋಂಕು..
ಬೆ0ಗಳೂರು:ರಾಜ್ಯದಲ್ಲಿ ಆರ್ಭಟಿಸುತ್ತಿರುವ ಕೊರೊನಾ ಸೋಂಕು ಮಕ್ಕಳಿಗೆ ಹೆಚ್ಚಾಗಿ ತಗುಲುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಸುಮಾರು ೫೦ಕ್ಕಿಂತ ಹೆಚ್ಚು ಮಕ್ಕಳಿಗೆ ಕೊರೊನಾ ವಕ್ಕರಿಸಿದ್ದು, ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಅಂದ ಹಾಗೇ ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಹೆಚ್ಚಾಗಿ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು,ಇಲ್ಲಿ ತಲಾ ೧೧ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಉಳಿದಂತೆ ವಿಜಯಪುರ-೭,ಬೆಳಗಾವಿ-೬,ಬಾಗಲಕೋಟೆ-೫,ದಾವಣಗೆರೆ-೫,ಮಂಡ್ಯ-೩,ಬಳ್ಳಾರಿ-೨,ಮೈಸೂರು,ದಕ್ಷಿಣ ಕನ್ನಡ,ಬೆಂಗಳೂರು ಗ್ರಾಮಾಂತರ,ತುಮಕೂರು,ಧಾರವಾಡ ತಲಾ ಒಂದೊAದು ಮಕ್ಕಳಲ್ಲಿ ಸೋಂಕು ಧೃಡಪಟ್ಟಿದ್ದು,ಒಟ್ಟಾರೆ ರಾಜ್ಯದಲ್ಲಿ ೧೫ ವರ್ಷದೊಳಗಿನ ೫೬ ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಇದೇ ವೇಳೆ ಕಳೆದ ೧೦ ದಿನಗಳಲ್ಲಿ ೨೩ ಮಕ್ಕಳಿಗೆ ಸೋಂಕು ತಗುಲಿದ್ದು, ಸಾಮಾನ್ಯವಾಗಿ ತಂದೆ ತಾಯಿ ಮುಖಾಂತರವೇ ಹರಡಿರೋದು ಗೊತ್ತಾಗಿದ್ದು, ಸೋಂಕಿತ ಮಕ್ಕಳ ವಿಚಾರದಲ್ಲಿ ಬೆಂಗಳೂರು, ಕಲಬುರಗಿ ಮೊದಲ ಸ್ಥಾನ ಹಾಗೂ ವಿಜಯಪುರ ಮೂರನೇ ಸ್ಥಾನ ಪಡೆದಿದೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read More