ಅಲ್ಪಮೊತ್ತಕ್ಕೆ ಉರುಳಿದ ಖ್ವಾಜಾ, ಹ್ಯಾಂಡ್ಸ್‌ಕಾಂಬ್

ಪರ್ತ್: ಆರಂಭಿಕರಿಬ್ಬರ ಶತಕದ ಜತೆಯಾಟದಿಂದ ಮುನ್ನುಗ್ಗುತ್ತಿದ್ದ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ತಿರುಗೇಟು ನೀಡಿದೆ.

ಮೊದಲ ವಿಕೆಟ್’ಗೆ 112 ರನ್’ಗಳ ಜತೆಯಾಟವಾಡಿದ್ದ ಆಸಿಸ್’ಗೆ ಬುಮ್ರಾ ಮೊದಲ ಆಘಾತ ನೀಡಿದರು. 50 ರನ್ ಬಾರಿಸಿದ್ದ ಫಿಂಚ್ ಅವರನ್ನು ಎಲ್’ಬಿ ಬಲೆಗೆ ಕೆಡುವಿದ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ನಂತರ ಉಸ್ಮಾನ್ ಖ್ವಾಜ್ ಅವರನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ವೇಗಿ ಉಮೇಶ್ ಯಾದವ್ ಯಶಸ್ವಿಯಾದರು.

ಹನುಮ ವಿಹಾರಿ ಉತ್ತಮವಾಗಿ ಆಡುತ್ತಿದ್ದ ಮಾರ್ಕಸ್ ಹ್ಯಾರಿಸ್[70] ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಬಲ ತುಂಬಿದರು. ಹ್ಯಾರಿಸ್ 141 ಎಸೆತಗಳಲ್ಲಿ 10 ಬೌಂಡರಿ ಸಹಿತ 70 ರನ್ ಬಾರಿಸಿ ರಹಾನೆಗೆ ಕ್ಯಾಚಿತ್ತು ಹೊರ ನಡೆದರು. ಬಳಿಕ ಶಾನ್ ಹ್ಯಾಂಡ್ಸ್‌ ಕಾಂಬ್, ಇಶಾಂತ್ ಬೌಲಿಂಗ್ ನಲ್ಲಿ ಕೊಹ್ಲಿ ಹಿಡಿದ ಕ್ಯಾಚ್ ಗೆ ಬಲಿಯಾದರು.

ಇದೀಗ, ಆಸ್ಟ್ರೇಲಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 180 ರನ್ ಬಾರಿಸಿದ್ದು, ಶಾನ್ ಮಾರ್ಷ್ 23 ಹಾಗೂ ಟ್ರಾವಿಸ್ ಹೆಡ್ 17 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

Please follow and like us:

Related posts

Leave a Comment