ತಪ್ಪಿತಸ್ಠರಿಗೆ ಘೋರ ಶಿಕ್ಷೆ ಆಗಬೇಕು: ಸಿದ್ದರಾಮಯ್ಯ, ಗುಂಡೂರಾವ್

ಮೈಸೂರು: ಸುಲ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ ದುರಂತ ಪ್ರಕರಣದಲ್ಲಿ ಮೈಸೂರಿನ ಕೆ.ಆರ‍್.ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿದರು.

ಬಳಿಕ ಮಾತನಾಡಿ, ತಪ್ಪಿತಸ್ಠರಿಗೆ ಘೋರ ಶಿಕ್ಷೆ ಆಗಬೇಕು. ಇದೇ ವೇಳೆ ಮೃತರ ಕುಟುಂಬಕ್ಕೆ ಕೆಪಿಸಿಸಿಯಿಂದ ತಲಾ ೧ ಲಕ್ಷ ರು.ನೆರವು ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಘೋಷಿಸಿದರು.  ಇದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಅಸ್ವಸ್ಥಗೊಂಡವರು ಭಯದಿಂದ ಇನ್ನೂ ಹೊರಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಕರಣದಿಂದ ಆಘಾತಕ್ಕೀಡಾದವರ ಸಂಬಂಧಿಕರ ಊರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಆಯಾ ಗ್ರಾಮಗಳಲ್ಲಿ ಪೊಲೀಸ್ ಭದ್ರತೆ ಹಾಕಲಾಗಿದೆ.

Please follow and like us:

Related posts

Leave a Comment