ಸುಳ್ಳು ಹೇಳಿ ಮಹಿಳೆಯರಿಗೆ ಮೋಸ ಮಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತೊದಲಬಾಗಿ ನ್ಯೂಜ್:

ಮುಗ್ದ ಕೂಲಿ ಕಾರ್ಮಿಕರಿಗೆ ಹಾಗೂ 
ಮಹಿಳೆಯರಿಗೆ ನಿಮ್ಮ ಹೆಸರಿನಲ್ಲಿ ಪಂಚಾಯತಿಯ ಖುಲ್ಲಾ 
ಜಾಗವನ್ನು ಠರಾವು ಮಾಡಿ ಕೊಡುತ್ತೇವೆ ಮತ್ತು ಉತಾರ 
ಮಾಡಿಕೊಡುತ್ತೇವೆಂದು ತೊದಲಬಾಗಿ ಗ್ರಾಮ 
ಪಂಚಾಯತ ಅಧ್ಯಕ್ಷೇ ಲಕ್ಕವ್ವ ಚೌರಿ ಅವರ ಪತಿ 
ಡೊಂಕಪ್ಪ ಚೌರಿ ಮಹಿಳೆಯರಿಂದ 30.000 ರೂ. ಹಣ ಪಡೆದು 
ಯಾಮಾರಿಸಿದ್ದಾರೆ ಎಂದು ವಿಮಲಾಕ್ಷೀ ಬಡಿಗೇರ, ಶಾಂತಾ ಹರಿಜನ, 
ಲಕ್ಕವ್ವ ಗುರಾಣಿ ಮಾಧ್ಯಮದ ಮುಂದೆ ಅಳಲನ್ನು 
ತೊಡಿಕೊಂಡಿದ್ದಾರೆ.
ಪಂಚಾಯತಿ ಯಾವುದೇ ದಾಖಲಾತಿಯಲ್ಲಿ ನಮೂದಿಸದೆ 
ಕೊಟ್ಟಿಯಾದ ದಾಖಲೆಗಳನ್ನು ತಯಾರಿಸಿ ಹಿಂದಿನ ಪಿ.ಡಿ.ಓ 
ರವರು ಸಹಿಯನ್ನು ನಕಲು ಮಾಡಿಕೊಂಡು ಪಂಚಾಯತಿ 
ಆಸ್ತಿಯನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಊರಿನಲ್ಲಿ ಸೋಮವಾರದಂದು ನಡೆಯುವ ಸಂತೆಗೆ ಪ್ರತಿ 
ವರ್ಷ ನಿಲಾವು ಮಾಡುತ್ತಿದ್ದು, 26 ಮಾರ್ಚ 2018 ರಿಂದ 
ಇಲ್ಲಿಯವರೆಗೂ ಹರಾಜನ್ನು ಮಾಡದೆ ವಸೂಲಿ 
ಮಾಡುತ್ತಿದ್ದಾರೆ, ವಸೂಲಿ ಮಾಡಿದ ಹಣವನ್ನು ದುರ್ಭಳಕೆ 
ಮಾಡಿಕೊಂಡು ಸ್ವಂತಕ್ಕೆ ಉಪಯೋಗಿಸುತ್ತಿದ್ದಾರೆ
ಪಂಚಾಯತಿಯ ಸಿಬ್ಬಂದಿಯ ವೇತನವನ್ನು ಸತತ 11 
ತಿಂಗಳಿಂದ ಇಲ್ಲಿಯವರೆಗೂ ಕೊಡದೆ ವರ್ಗ-1 ರಲ್ಲಿ 
ಖರ್ಚು ಹಾಕದೆ ವರ್ಗ-1 ರ ಹಣವನ್ನು ಸಹ ದುರ್ಬಳಕೆ 
ಮಾಡಿಕೊಂಡು ಸ್ವ-ಹಿತಾಸಕ್ತಿಗೆ ಬಳಕೆ 
ಮಾಡುತ್ತಿರುವುದು ಕಂಡು ಬಂದಿದೆ.
ಪಂಚಾಯತಿಯ ಕುಡಿಯುವ ನೀರಿಗಾಗಿ ಇರುವ ವಿದ್ಯುತ 
ಮೊಟರ, ಪೈಪ ಮತ್ತು ಇನ್ನಿತರ ಸಲಕರಣೆಗಳನ್ನು 
ತನ್ನ ಸ್ವ-ಹಿತಾಸಕ್ತಿಗಾಗಿ ಡೊಂಕಪ್ಪ ಚೌರಿ ಇವರು ಪಿ.ಡಿ.ಓ ಇವರಿಗೆ 
ಬೆದರಿಕೆ ಹಾಕಿ ತನ್ನ ಮನೆಗೆ ತೆಗೆದುಕೊಂಡು ಹೊಗಿದ್ದುಇದೆ. ಇದಕ್ಕೆ ಸಂಬಂಧಪಟ್ಟಂತೆ ಪಿಡಿಓ ರವರು ಲೇಟರ್ 
ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಅಂದಾಜು ಸುಮಾರು 50 ರಿಂದ 100 ಜನರಿಗೆ ಹೀಗೆ ಕೊಟ್ಟಿ 
ದಾಖಲಾತಿಗಳನ್ನು ಕೊಟ್ಟು ಪ್ರತಿಯೊಬ್ಬರಿಂದ ಸುಮಾರು 
30,000 ರೂ. 50,000 ರೂ. ಗಳನ್ನು ಪಡೆದುಕೊಂಡು 
ದಾಖಲಾತಿಗಳನ್ನು ಪೂರೈಸಿದ್ದು ಕಂಡು ಬಂದಿದೆ.
ದೂರು: ತೊದಲಬಾಗಿ ಗ್ರಾಮ ಪಂಚಾಯತ ಅಧ್ಯಕ್ಷೆ 
ಲಕ್ಕವ್ವ ಚೌರಿಯ ಗಂಡನೆ ಸರ್ವಾಧಿಕಾರಿಂತೆ ಡೊಂಕಪ್ಪ ಚೌರಿ 
ವರ್ತಿಸುತಿದ್ದಾರೆ, ಇದರಲ್ಲಿ ಪಿಡಿಓ ಸೋಮಶೇಖರ ಹೊಸೂರ 
ಮೂವರ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸುವ 
ಕುರಿತು ಶಿದರಾಯ ತಮ್ಮಣ್ಣ ಸಾಯಗೊಂಡ ಒತ್ತಾಯಿಸಿ ಲಿಖಿತ 
ಅರ್ಜಿಯನ್ನು 6-12-2018 ರಂದು ಜಿ.ಪಂ ಬಾಗಲಕೊಟ ವರಿಗೆ 
ಸಲ್ಲಿಸಿದ್ದಾರೆ.

Please follow and like us:

Related posts

Leave a Comment