ಅಂತ್ಯಸಂಸ್ಕಾರಕ್ಕೂ ಪರದಾಟ: ಹರಿಶ್ಚಂದ್ರಘಾಟ್ 2 ತಿಂಗಳು ಬಂದ್

ಬೆಂಗಳೂರು, ಡಿಸೆಂಬರ್ 18: ಮಲ್ಲೇಶ್ವರದ ಬಳಿ ಇರುವ ರಾಜಧಾನಿಯ ಪ್ರಮುಖ ಚಿತಾಗಾರವಾಗಿರುವ ಹರಿಶ್ಚಂದ್ರ ಘಾಟ್ ನ್ನು 60 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಚಿತಾಗಾರದಲ್ಲಿರುವ ಫರ್ನೇಸ್‌ಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ 60 ದಿನಗಳ ವರೆಗೆ ಚಿತಾಗಾರವನ್ನು ಬಂದ್ ಮಾಡಲಾಗುತ್ತಿದೆ. ಇಂದಿನಿಂದ ಫೆಬ್ರವರಿ 18ರವರೆಗೂ ಹರಿಶ್ಚಂದ್ರ ಘಾಟ್ ಸ್ಥಗಿತವಾಗಲಿದೆ. ಕಾಮಗಾರಿಗಳು ಪೂರ್ಣಗೊಂಡ ಬಳಿಕ ಶವಸಂಸ್ಕಾರಕ್ಕೆಂದು ಬರುವ ಜನರು ಗಂಟೆಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ.

ಬಿಎಂಆರ್‌ಸಿಎಲ್‌ಗೂ ತಟ್ಟಿದ ಫ್ಲೆಕ್ಸ್ ನಿಷೇಧ ಬಿಸಿ, ಆದಾಯ ಖೋತಾ

ಈ 60 ದಿನಗಳ ಕಾಲ ಹರಿಶ್ಚಂದ್ರಘಾಟ್‌ನಲ್ಲಿ ಶವಸಂಸ್ಕಾರ ಮಾಡಲು ಅವಕಾಶವಿಲ್ಲದ ಕಾರಣ ಇನ್ನೆಲ್ಲಿ ಹೆಣವನ್ನು ತೆಗೆದುಕೊಂಡು ಹೋಗುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ ಇದು ಎಲೆಕ್ಟ್ರಿಕ್ ಚಿತಾಗಾರವಾಗಿತ್ತು, ನಗರದ ಕೇಂದ್ರ ಭಾಗದಲ್ಲಿದೆ.

ಹಾಗಾಗಿ ಮಲ್ಲೇಶ್ವರ, ಸೆಂಟ್ರಲ್, ಭಾಷ್ಯಂ ವೃತ್ತ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಜನರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರಕ್ಕೂ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿಗೆ ಎನ್‌ಜಿಟಿ ದಂಡ, ಸುಪ್ರೀಂ ಮೊರೆ ಹೋಗಲಿದೆ ಪಾಲಿಕೆ

ಚಿತಾಗಾರವನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು ಸಂಬಂಧಿಕರನ್ನು ಕಳೆದುಕೊಂಡು ಬೇಸರದಲ್ಲಿರುವ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಲು ಒಂದೂವರೆಯಿಂದ ಎರಡು ತಾಸುಗಟ್ಟಲೆ ಹೆಣವನ್ನು ಇಟ್ಟುಕೊಂಡು ನೋವಿನಲ್ಲಿ ಅಲ್ಲಿಯೇ ಕಾಯಬೇಕಾಗಿತ್ತು. ಆದರೆ ಇನ್ನುಮುಂದೆ ಇಂತಹ ಪರಿಸ್ಥಿತಿ ಬಾರದಿರಲು ಚಿತಾಗಾರವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.

Please follow and like us:

Related posts

Leave a Comment