ರಾಕಿಂಗ್ ಸ್ಟಾರ್ `ಕೆಜಿಎಫ್’ ಫಸ್ಟ್ ಡೇ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಸಿನಿಮಾಡೆಸ್ಕ್ : ದೇಶಾದ್ಯಂತ ನಿನ್ನೆ ತೆರೆಕಂಡ ಬಹುನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 52 ಕೋಟಿ ರೂ. ಬಾಚಿಕೊಂಡಿದೆ ಎನ್ನಲಾಗುತ್ತಿದೆ.

ಭಾರತ ದೇಶಾದ್ಯಂತ ಕೆಜಿಎಫ್ ಚಿತ್ರವು 2 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲಗ್ಗೆ ಇಟ್ಟಿರುವ ಕೆಜಿಎಫ್ ಗಳಿಕೆಯಲ್ಲಿ ಹಿಂದಿಯ ಜೀರೋ ಚಿತ್ರವನ್ನು ಹಿಂದಿಕ್ಕಿದೆ ಎನ್ನಲಾಗುತ್ತಿದೆ

ಮೂಲಗಳ ಪ್ರಕಾರ ಕೆಜಿಎಫ್ ಮೊದಲ ದಿನವೇ 52 ಕೋಟಿ ರೂ. ಗಳಿಸಿದೆಯಂತೆ, ಇದರಲ್ಲಿ ಕರ್ನಾಟಕದಿಂದಲೇ 28 ಕೋಟಿ ರೂ. ಹರಿದು ಬಂದಿದೆಯಂತೆ, ಇನ್ನು ಶಾರೂಕ್ ನಟನೆಯ ಜೀರೋ ಚಿತ್ರ ಆರ್ ಓವರ್ ಇಂಡಿಯಾ ಟೋಟಲ್ 30 ಕೋಟಿ ಗಳಿಸುವಲ್ಲಿ ಶಕ್ತವಾಗಿದೆ ಎಂದು ಹೇಳಲಾಗುತ್ತಿದೆ.

Please follow and like us:

Related posts

Leave a Comment