ಯಲಹಂಕ ಉಪ ನಗರದ 4 ನೇ ವಾರ್ಡಿನ LIG 3ನೇ ಹಂತಕ್ಕೆ ಯಲಹಂಕ ವಿಧಾನಸಭಾ ಜೆಡಿಎಸ್ ಅಧ್ಯಕ್ಷರಾದ ಶ್ರೀಮತಿ ಕವಿತಾ ರೆಡ್ಡಿರವರು ಭೇಟಿ

ಡಿಸೆಂಬರ್:೨೪- ಯಲಹಂಕ ಉಪ ನಗರದ 4 ನೇ ವಾರ್ಡಿನ LIG  3ನೇ ಹಂತಕ್ಕೆ ಯಲಹಂಕ ವಿಧಾನಸಭಾ ಜೆಡಿಎಸ್ ಅಧ್ಯಕ್ಷರಾದ ಶ್ರೀಮತಿ ಕವಿತಾ ರೆಡ್ಡಿರವರು ಭೇಟಿನೀಡಿದರು.

ಅಲ್ಲಿಯ ಸ್ಥಳಿಯ ನಿವಾಸಿಗಳು ತಮ್ಮ ಸಮಸ್ಯೆಗಳಾದ ರಾಜಕಾಲುವೆ ಕಾಮಗಾರಿ ಅಪೂರ್ಣ ಗೊಂಡಿದ್ದು ಒಳ ಚರಂಡಿ ಕೊಳಚೆ ನೀರು ದೊಡ್ಡ ಮೋರಿಯಲ್ಲಿ ಹರಿಯುತ್ತಿದ್ದಿದನ್ನ ಸ್ಥಳಿಯರು ಸಾಕಷ್ಟು ಬಾರಿ  BWSSB ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಯಾವ ಅಧಿಕಾರಿಯೂ ಇತ್ತಕಡೆ ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿದ್ದ ಬಗ್ಗೆ ತಿಳಿಸಿದ ನಂತರ  ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಕವಿತಾ ರೆಡ್ಡಿಯವರು ಕೂಲಂಕುಷವಾಗಿ ಪರಿಶೀಲಿಸಿ ತಕ್ಷಣವೇ  BWSSB ಅಧಿಕಾರಿಗಳಿಗೆ ಕರೆ ಮಾಡಿ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಇಲ್ಲಿಯ ಸಮಸ್ಯೆಯನ್ನ 3, 4 ದಿನದೊಳಗೆ ಸರಿಪಡಿಸುತ್ತೇವೆ ಎಂದು ಮಾತು ಕೊಟ್ಟರು.

ಶೀಘ್ರವೇ ಸಮಸ್ಯೆ ಬಗೆಹರಿಸದಿದ್ದರೆ  ಉಗ್ರಪ್ರತಿಭಟನೆ ಮಾಡಲಾಗುವುದು ಎಂದು ಅವರು  ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಹಿಳಾ  ಘಟಕದ ಅಧ್ಯಕ್ಷರಾದ ರೇವತಿರವರು, ಕಲೆ ಮತ್ತು ಸಂಸ್ಕೃತಿ ಅಧ್ಯಕ್ಷರಾದ ಸುಮಿತ್ರಾ ಶೆಟ್ಟಿ ರವರು, ಅನಿತಾ ಶ್ರೀಧರ್ಉಪಾಧ್ಯಕ್ಷರು, ಮಹಿಳಾ ಘಟಕ ಬೆಂಗಳೂರು ಮಹಾನಗರ ಜನತಾದಳ ( ಜಾ ) ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

ಶ್ರೀ

Please follow and like us:

Related posts

Leave a Comment