ರಿಜಿಸ್ರ್ಟಾರ್ ಆರ್. ಶ್ರೀಧರ್ ಹಾಗೂ ಸಂಬಂಧಿಕರ ಮನೆ ಮೇಲೆ ಎಸಿಬಿ ದಾಳಿ

ಸಹಕಾರ ಸಂಘಗಳ ಅಡಿಷಿನಲ್ ರಿಜಿಸ್ಟ್ರಾರ್ ಆರ್. ಶ್ರೀಧರ್ ಹಾಗೂ ಸಂಬಂಧಿಕರ ಮನೆ ಮೇಲೆ ಎಸಿಬಿ ದಾಳಿ ::

ಬೆಂಗಳೂರು, ಚಿಂತಾಮಣಿ, ಮೈಸೂರು, ಹುಣಸೂರು, ಉಡುಪಿ, ದಾವಣಗೆರೆ, ಚಿಕ್ಕಮಗಳೂರು, ಮಂಗಳೂರು ಮತ್ತು ಕಾರವಾರಗಳಲ್ಲಿ ಒಟ್ಟು 17 ಕಡೆ ದಾಳಿ ಐವರು ಅಧಿಕಾರಿಗಳ ನಿವಾಸ, ಕಛೇರಿ ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆದಿದೆ.

ಚಿಂತಾಮಣಿ, ಡಿ.28: ಐವರು ಸರ್ಕಾರಿ ಅಧಿಕಾರಿಗಳ ಮೇಲಿನ ಅಕ್ರಮ ಆಸ್ತಿ ಗಳಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಇಂದು ಮುಂಜಾನೆ ಭ್ರಷ್ಟಾಚಾರ ನಿಗ್ರದ ದಳ(ಎಸಿಬಿ) ಅಧಿಕಾರಿಗಳು ಏಕಕಾಲದಲ್ಲಿ ರಾಜ್ಯದ 17 ಕಡೆ ದಾಳಿ ನಡೆಸಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

ಬೆಂಗಳೂರು ಸಹಕಾರ ಸಂಘಗಳ ಅಡಿಷನಲ್ ರಿಜಿಸ್ಟ್ರಾರ್ ಆರ್.ಶ್ರೀಧರ್ ಅವರ ಬೆಂಗಳೂರು ನಿವಾಸದ ಜೊತೆಗೆ ಸ್ವಗ್ರಾಮವಾದ ಚಿಂತಾಮಣಿ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದೆ. ಚಿಂತಾಮಣಿಯ ಮನೆಯಲ್ಲಿ ದಾಳಿ ವೇಳೆ ಯಾರೂ ಇರದ ಕಾರಣ ಬೀಗ ಒಡೆದು ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.

ಚಿಂತಾಮಣಿಯಲ್ಲಿರುವ ಶ್ರೀಧರ್ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆದಿದ್ದು, ಅವರ ನಿವಾಸ ಹಾಗೂ ಅವರು ಕಾರ್ಯನಿರ್ವಹಿಸುತ್ತಿರುವ ಅಲಿ ಅಸ್ಗರ್ ರಸ್ತೆಯಲ್ಲಿರುವ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಛೇರಿ ಮೇಲೆ ದಾಳಿ ನಡೆದಿದೆ. ಅವರ ಬಾವ ನಿವೃತ್ತ ಪ್ರಾಂಶುಪಾಲರಾದ ರಾಮಚಂದ್ರಪ್ಪ ನಿವಾಸದ ಮೇಲೆಯೂ ದಾಳಿ ನಡೆಸಿರುವ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಲಭಿಸಿದ್ದು ಪರಿಶೀಲಿಸುತ್ತಿದ್ದಾರೆ.

ದೇವರಾಜ್. ಎನ್. ಆರ್ ಚಿಕ್ಕಬಳ್ಳಾಪುರ

Please follow and like us:

Related posts

Leave a Comment