ಶಾಲೆಯಲ್ಲಿ ಮಕ್ಕಳು ಇನ್ನು ಮೇಲೆ ಂಯಸ್ ಸರ್ ಅಂತ ಹೇಳುವಂತಿಲ್ಲ, ಏನಿದ್ರೂ ಜೈ ಹಿಂದ್ ಎಂದು ಹೇಳಬೇಕು!

ಹಾಜರಿ ಹಾಕಲು ಮಕ್ಕಳ ಹೆಸರು ಕರೆಯುವ ವೇಳೆ ಮಕ್ಕಳು ಎಸ್‌ ಸರ್‌ ಎನ್ನುವ ಬದಲು ಜೈ ಹಿಂದ್‌ ಅಥವಾ ಜೈ ಭಾರತ್‌ ಎಂದು ಕೂಗುವುದು ಕಡ್ಡಾಯ ಎಂದು ಗುಜರಾತ್‌ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ದೇಶ ಪ್ರೇಮ ಬೆಳೆಸುವ ಉದ್ಧೇಶದಿಂದ ಈ ಹೊಸ ಕ್ರಮ ಅನುಸರಿಸಲು ಸೂಚಿಸಲಾಗಿದೆಯಂತೆ!

ಅಹಮದಾಬಾದ್: ಗುಜರಾತ್‌ ನ ಶಾಲೆಗಳಲ್ಲಿ ಇನ್ನು ಹಾಜರಾತಿಗೆ ಹೆಸರು ಕರೆಯುವ ವೇಳೆ ಯಸ್‌ ಸರ್‌ ಅನ್ನುವಂತಿಲ್ಲ. 
ಅದರ ಬದಲಾಗಿ ಜೈ ಹಿಂದ್‌ ಅಥವಾ ಜೈ ಭಾರತ್‌ ಎಂದು ಕೂಗಬೇಕಂತೆ! 

ಈ ಕುರಿತು ಗುಜರಾತ್‌ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಹಾಜರಿ ಹಾಕಲು ಮಕ್ಕಳ ಹೆಸರು ಕರೆಯುವ ವೇಳೆ ಮಕ್ಕಳು ಹೀಗೆಯೇ ಪ್ರತ್ಯುತ್ತರ ನೀಡುವುದು ಕಡ್ಡಾಯ ಎಂದು ತಿಳಿಸಿದೆ. 

ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ದೇಶಭಕ್ತಿ ಹಾಗೂ ದೇಶಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಈ ನೂತನ ಕ್ರಮ ಜಾರಿಗೊಳಿಸಲಾಗಿದೆ. ನಮ್ಮ ಬಾಲ್ಯದಲ್ಲಿ ಎಸ್‌ ಸರ್‌ ಎಲ್ಲ ಇರಲಿಲ್ಲ. ಜೈ ಹಿಂದ್‌ ಅಥವಾ ಜೈ ಭಾರತ್‌ ಎಂದೇ ಹೇಳುತ್ತಿದ್ದೆವು. ಕ್ರಮೇಣ ಈ ಪದ್ದತಿ ಬಿಟ್ಟು ಹೋಗಿದೆ. ನೂತನ ನಿಯಮ ಮಂಗಳವಾರದಿಂದಲೇ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವ ಭೂಪೇಂದ್ರ ಸಿಂಹ ಚೌದಾಸಮ ತಿಳಿಸಿದ್ದಾರೆ. 

ಶಾಲಾ ಅವಧಿಯಲ್ಲಿ ಪ್ರತಿ ದಿನ ಮಕ್ಕಳು ಎಸ್‌ ಸರ್ ಅಥವಾ ಎಸ್‌ ಮೇಡಮ್‌ ಎಂದು ಕನಿಷ್ಠ 10 ಸಾವಿರ ಬಾರಿ ಹೇಳುತ್ತಾರೆ. ಅದನ್ನೇ ಜೈ ಹಿಂದ್‌ಗೆ ಬದಲಾಯಿಸಿದರೆ, ದೇಶ ಪ್ರೇಮದ ಬೀಜ ಸಣ್ಣ ವಯಸ್ಸಿನಲ್ಲೇ ಮೊಳಕೆಯೊಡೆಯುತ್ತದೆ ಎಂದು ಅವರು ಹೇಳಿದ್ದಾರೆ. ಜಿಲ್ಲಾ ಶಿಕ್ಷಣ ಅಧಿಕಾರಿಗಳು ಎಲ್ಲ ಶಾಲೆಗಳಲ್ಲಿ ಆದೇಶ ಪಾಲನೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿಲಾಗಿದೆ. 

ಅಹಮದಾಬದಾದ್‌ನಲ್ಲಿ ನಡೆದ 64ನೇ ಅಖಿಲ ಭಾರತ ವಿದ್ಯಾರ್ಥಿ ಪರಿಷದ್‌ನ ರಾಷ್ಟ್ರೀಯ ಸಮಾವೇಶದಲ್ಲಿ ರಾಜಸ್ಥಾನದ ಶಾಲಾ ಶಿಕ್ಷಕ ಸಂದೀಪ್‌ ಜೋಶಿ ನಮ್ಮ ಶಾಲೆಗಳಲ್ಲಿ ಜೈ ಹಿಂದ್‌ ಹೇಳುವ ಅಭ್ಯಾಸ ಮಾಡಲಾಗಿತ್ತು ಎಂದು ಹೇಳಿದ್ದರು. ಭೂಪೇಂದ್ರ ಸಿಂಹ ಸಹ ಈ ಸಮಾವೇಶದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಂದೀಪ್‌ ಗುಜರಾತ್‌ನಲ್ಲೂ ಇಂತಹ ಅಭ್ಯಾಸ ಜಾರಿಗೊಳಿಸಲು ಅವಕಾಶ ಇದೆಯೇ ಎಂದು ಕೇಳಿದ್ದಕ್ಕೆ ಭೂಪೇಂದ್ರ ಸಿಂಹ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದರು. 


Please follow and like us:

Related posts

Leave a Comment