ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ನಾಲ್ವರ ದುರ್ಮರಣ

ನವದೆಹಲಿ(ಜ.24):ನಾಲ್ಕು ಅಂತಸ್ತಿನ ಕಟ್ಟಡ ಕುಸಿತದಿಂದಾಗಿ ನಾಲ್ವರು
ಕಾರ್ಮಿಕರು ಮೃತಪಟ್ಟಿರುವ ಘಟನೆ ಹರ್ಯಾಣದ ಉಲ್ವಾಸ್ ಪ್ರದೇಶದಲ್ಲಿ
ನಡೆದಿದೆ. ಇನ್ನು ನಾಲ್ವರು ಕಟ್ಟದ ಅವಶೇಷದಡಿ ಸಿಲುಕಿದ್ದಾರೆ. ಎಂಬ ಮಾಹಿತಿ ಇದೆ. ಇಂದು
ಬೆಳಿಗ್ಗೆಯೇ ಕುಸಿದ ಕಟ್ಟಡ ಕುಸಿದಿದೆ. ಈ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ
ರಾಷ್ಟ್ರೀಯ ವಿಪತ್ತು ನಿರ್ವಹಣ ದಳದವರ ಮೂರು ತಂಡಗಳ ರಕ್ಷಣಾ
ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಅಂತಸ್ತು ಗುರುಗ್ರಾಮ ಸಮೀಪದ ಉಲ್ಲಾವಾಸ್‌ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟದ ನಿರ್ಮಾಣ ಹಂತದಲ್ಲಿತ್ತು. ಇಂದು ಬೆಳಗ್ಗೆ 5 ಗಂಟೆಗೆ ದಿಢೀರನೇ ಕಟ್ಟಡ
ಕುಸಿದಿದೆ. ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ ಎನ್ನಲಾಗಿದೆ. ಇನ್ನೂ ಕಬ್ಬಿಣದ ಗ್ರಿಲ್ಸ್‌ ಹೆಚ್ಚಿರುವ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ತಿಳಿದು ಬಂದಿದೆ.

Please follow and like us:

Related posts

Leave a Comment