ಗಣರಾಜ್ಯೋತ್ಸವಕ್ಕೆಂದು ತೆರಳುತ್ತಿದ್ದ ಮಕ್ಕಳ ಮೇಲೆ ಹರಿದ ಕಾರ್..!

ಧಾರವಾಡ: ಗಣರಾಜ್ಯೋತ್ಸವಕ್ಕೆಂದು ತೆರಳುತ್ತಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಕಾರ್ ಹರಿದ ಘಟನೆ ಧಾರವಾಡದ ವಾಟರ್ ಬೋರ್ಡ್ ಬಳಿ ನಡೆದಿದೆ. ಶಿಕ್ಷಕರು ಹಾಗೂ ಮಕ್ಕಳು ಗಣರಾಜ್ಯೋತ್ಸವಕ್ಕೆಂದು ಮೈದಾನಕ್ಕೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಕಾರು ಚಾಲಕನೊಬ್ಬ ವೇಗವಾಗಿ ಬಂದು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಪ್ರೀನಿಪಾಲ್ ಸುನಿತಾ ಕಡಪಟ್ಟಿ, ವಿದ್ಯಾರ್ಥಿಗಳಾದ ಪೂಜಾ ನಿಡಗುಂದಿ, ಚೈತ್ರಾ ಕೊಪ್ಪದ, ಅನ್ನಪೂರ್ಣ ಚಲವಾದಿ ಗಾಯಗೊಂಡವರಾಗಿದ್ದಾರೆ. ಇನ್ನೂ ಘಟನೆಯಲ್ಲಿ ಒಟ್ಟು ಆರು ವಿದ್ಯಾರ್ಥಿಗಳ ಮೇಲೆ ಕಾರ್ ಹರಿದಿದ್ದು, ಇದರಲ್ಲಿ ನಾಲ್ವರಿಗೆ ಗಂಭಿರ ಗಾಯವಾಗಿದ್ದು, ಇಬ್ಬರಿಗೆ ಸಣ್ಣ ಪುಟ್ಟಗಾಯಗಳಾಗಿದೆ. ಗಾಯಗೊಂಡ ವಿದ್ಯಾರ್ಥಿಗಳೆಲ್ಲರೂ ಧಾರವಾಡದ ಕೆಇಬೊರ್ಡ್ ಕಾಲೇಜಿನವರು ಎಂದು ಹೇಳಲಾಗಿದೆ.

Please follow and like us:

Related posts

Leave a Comment