ಟೋಕಿಯೋ: ನ್ಯಾಷನಲ್ ಸ್ಟಾರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಐವತ್ತು ದಿನಗಳತ್ತ ದಾಪುಗಾಲಿಡುತ್ತಿದೆ. ಅಲ್ಲದೇ ಕೆಜಿಎಫ್ ಸಿನಿಮಾ ನೆರೆಯ ಪಾಕಿಸ್ತಾನದಲ್ಲೂ ಅಬ್ಬರಿಸಿದ್ದು ಈಗ ಹಳೆಯ ಸುದ್ದಿಯಾಗಿದೆ. ಇದೀಗ ಲೇಟೆಸ್ಟ್ ನ್ಯೂಸ್ ಏನಪ್ಪ ಅಂದರೆ ಕೆಜಿಎಫ್ ಸಿನಿಮಾ ಜಪಾನ್ನಲ್ಲೂ ಸಖತ್ ಸದ್ದು ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಜಪಾನ್ನ ಚಿತ್ರಮಂದಿರವೊಂದರಲ್ಲಿ ಕೆಜಿಎಫ್ ಚಿತ್ರದ ಪ್ರದರ್ಶನ ಜೋರಾಗಿ ನಡೆಯುತ್ತಿತ್ತು. ಈ ವೇಳೆ ಅಲ್ಲಿನ ಕನ್ನಡಾಭಿಮಾನಿಗಳು ಯಶ್ ಜೊತೆ ವಿಡಿಯೋ ಕಾಲಿಂಗ್ ಮೂಲಕ ಮಾತನಾಡಿದ್ದಾರೆ. https://twitter.com/YashFC/status/1089510792997695491ಇನ್ನೂ ಇದೇ ವೇಳೆ ಜಪಾನ್ ನಾಗರಿಕರೂ ಕೂಡ ಯಶ್ಗೆ ವಿಶ್ ಮಾಡಿದ್ದು ವಿಶೇಷವಾಗಿತ್ತು. ಇನ್ನೂ ಯಶ್ ಅವರ ನನ್ನ ರಕ್ತಾನೂ ಕೆಂಪಗೇ ಇದೆಯಲ್ಲೋ ಅನ್ನೋ ಡೈಲಾಗ್ ಹೊಡಿಬೇಕು ಅಂತಾ ಅಲ್ಲಿದ್ದವರು ಕೋರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಯಶ್ ಡೈಲಾಗ್ ಹೊಡೆದು ಫ್ಯಾನ್ಸ್ಗೆ ಥ್ಯಾಂಕ್ಸ್ ಹೇಳಿದರು. ಈ ದೃಶ್ಯಗಳನ್ನು ಅಭಿಮಾನಿಯೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದಿದ್ದಾರೆ. ಮೂರು ನಿಮಿಷ ಈ ವಿಡಿಯೋವನ್ನು ಯಶ್ ಪ್ಯಾನ್ ಕ್ಲಬ್ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ಜಪಾನ್ನಲ್ಲೂ ರಾಕಿಭಾಯ್ ಹವಾ..!

Please follow and like us: