ಹುಣುಸೂರು: ತಾಲೂಕಿನ ಸವಿತಾ ಸಮಾಜದ ಕಾರ್ಮಿಕರು, ಟೈಲರ್ ವೃತ್ತಿಯಲ್ಲಿರುವರಿಗೆ ಶೀಘ್ರವಾಗಿ ಸವಲತ್ತುಗಳನ್ನು ನೀಡಬೇಕು ಅಂತ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸ್ಥಳೀಯ ಶಾಸಕ ತಿಳಿಸಿದ್ದಾರೆ.
ಅಂದ ಹಾಗೇ ಇಲ್ಲಿನ ಪತ್ರಕರ್ತರ ಸಂಘದಲ್ಲಿ ಪತ್ರಕರ್ತರಿಗೆ, ಪತ್ರಿಕೆ ವಿತರಿಕರಿಗೆ ಸ್ಯಾನಿಟೈಜರ್ ಹಾಗೂ ಸಂಘಕ್ಕೆ ಬಿಸಿ ವಾಟರ್ ಕೆಟಲ್ ಉಚಿತವಾಗಿ ವಿತರಿಸಿ ಮಾತನಾಡಿದ ಅವರು, ನಗರ ಮತ್ತು ತಾಲೂಕಿನಲ್ಲಿ ಯಾವುದೇ ಧರ್ಮದ ಜನರೇ ಇರಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಬಂದಾಗ ಕೊರೊನಾ ಬಗ್ಗೆ ಮಾಹಿತಿ ನೀಡಬೇಕು ಎಂದು ಮನಿವಿ ಮಾಡಿದರು.
ಯಾವುದೇ ಧರ್ಮದವರಿರಲಿ ಕೊರೊನಾ ಬಗ್ಗೆ ಮಾಹಿತಿ ನೀಡಿ

Please follow and like us: