ಕೊರೊನಾ ಹಬ್ಬಿಸಿದ ನಂಜಗೂಡಿನ ಈ ಕಾರ್ಖಾನೆ..!

ನಂಜನಗೂಡು: ನಂಜನಗೂಡು ಸೇರಿದಂತೆ ಮೈಸೂರು ಜಿಲ್ಲೆಗೆ ಮಹಾಮಾರಿ ಕೊರೊನಾ ಹಬ್ಬಿಸಿದ ಕೀರ್ತಿ ಜುಬಿಲೆಂಟ್ ಕಾರ್ಖಾನೆಗೆ ಸಲ್ಲುತ್ತದೆ ಎಂದು ಕಾರ್ಖಾನೆಯ ವಿರುದ್ಧ ಶಾಸಕ ಹರ್ಷವರ್ಧನ್ ಕಿಡಿಕಾರಿದ್ದಾರೆ.
ನಂಜನಗೂಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಯವರ ಬೇಜವಾಬ್ದಾರಿತನದಿಂದ ಈ ಘಟನೆ ಸಂಭವಿಸಿದೆ.ಇದರ ವಿರುದ್ಧ ತನಿಖೆಯಾಗಿ ಸಂಬAಧಪಟ್ಟವರ ತಲೆದಂಡ ಆಗಲೇಬೇಕು ಅಲ್ಲಿಯವರೆವಿಗೂ ಕಾರ್ಖಾನೆ ತೆರೆಯಲು ಬಿಡುವುದಿಲ್ಲ ಎಂದು ಗುಡುಗಿದರು.
ಇನ್ನು ನಂಜನಗೂಡು ಪಟ್ಟಣ ಒಂದರಲ್ಲೇ ಸುಮಾರು ೯೦೦ ಜನ ಹೋಂ ಕ್ವಾರಂಟೈನ್‌ನ್ನಲ್ಲ್ಲಿದ್ದಾರೆ.ಕನಿಷ್ಠ ಒಂದು ಮನೆಯಲ್ಲಿ ನಾಲ್ಕರಿಂದ ಐದು ಜನಕ್ಕೆ ತಗುಲಿದ್ದರೆ ಗತಿಯೇನು ಎಂದು ಪ್ರಶ್ನಿಸಿದರು
ಇದಲ್ಲದೆ,ಸೋಂಕಿತ ಮೊದಲ ವ್ಯಕ್ತಿ ಕಾಂತರಾಜು ಎಂಬುವವರು ಇದರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ.ಜೊತೆಗೆ ಕಾರ್ಖಾನೆ ಆಡಳಿತ ಮಂಡಳಿ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿಸಿರುವ ಹಿನ್ನೆಲೆಯಲ್ಲಿ ಈಗ ಕಾರ್ಖಾನೆ ಮತ್ತು ನಂಜನಗೂಡು ಎಂದರೆ ಭಯ ಬೀಳುವಂತಾಗಿದೆ.ಇದು ಯಾರಿಂದ ಮತ್ತು ಎಲ್ಲಿಂದ ಹರಡಿತು ಎಂದು ಗೊತ್ತಾಗಬೇಕು.ಅದಕ್ಕಾಗಿ ತನಿಖೆ ಆಗಲೇಬೇಕು ಅಲ್ಲಿಯವರೆವಿಗೂ ಕಾರ್ಖಾನೆ ತೆರೆಯಲು ನಾನು ಬಿಡುವುದಿಲ್ಲ ಎಂದು ಗುಡುಗಿದರು.

Please follow and like us:

Related posts

Leave a Comment