ಇತ್ತ ಭಿಕ್ಷೆಯೂ ಇಲ್ಲ, ಒಪ್ಪೊತ್ತಿನ ಊಟವೂ ಸಿಗುತ್ತಿಲ್ಲ, ಮಂಗಳಮುಖಿಯರ ಅಳಲು..

ಸಿಂಧನೂರು: ಇಡೀ ದೇಶ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಮಂಗಳಮುಖಿಯರ ಪಾಡು ಹೇಳತೀರಾದಾಗಿದೆ.
ಸದ್ಯ ಹೊಟ್ಟೆಪಾಡಿಗಾಗಿ ನಾವೆಲ್ಲಾ ಭಿಕ್ಷಾಟನೆಯ ಮೊರೆಹೋಗಿದ್ದೇವೆ.ಆದರೆ ಇಡೀ ಭಾರತ ಬಂದ್ ಆದ ಕಾರಣ ಇತ್ತ ಭಿಕ್ಷೆಯೂ ಇಲ್ಲ, ಒಪ್ಪೊತ್ತಿನ ಊಟಕ್ಕೂ ಅತಂತ್ರ ಸ್ಥಿತಿಯಾಗಿದೆ ಎಂದು ಉತ್ತರ ಕರ್ನಾಟಕ ಜೋಗಪ್ಪ ಸಂಘದ ಅಧ್ಯಕ್ಷೆ ಮಧುಶ್ರೀ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು ಕೊರೊನಾ ಸೋಂಕಿನ ಬಗ್ಗೆ ಇಲ್ಲಿಯವರೆಗೆ ನಮಗೆ ಯಾರೂ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ.ಎಲ್ಲರನ್ನೂ ಸರಿಸಮಾನ ನೋಡಬೇಕು ಅಂತಾ ಸಂವಿಧಾನ ಹೇಳುತ್ತೆ ಆದ್ರೆ ನಮ್ಮನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅಂತಾ ಮಧುಶ್ರೀ ಆರೋಪ ಮಾಡಿದ್ದಾರೆ.
ಈ ಕೂಡಲೆ ಸಿಂಧನೂರು ತಾಲೂಕು ಆಡಳಿತ ತಮ್ಮ ನೆರವಿಗೆ ಧಾವಿಸುವಂತೆ ಮಧುಶ್ರೀ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು (ರಾಯಚೂರು)

Please follow and like us:

Related posts

Leave a Comment