ಕಡು ಬಡವರಿಗೆ ಅರಕಲಗೂಡಿನಲ್ಲಿ ದಿನಸಿ ವಿತರಣೆ

ಅರಕಲಗೂಡು:ತಾಲೂಕಿನ ರಾಮನಾಥ ಪುರ ಹಾಗೂ ಅರಕಲಗೂಡು ಪಟ್ಟಣದಲ್ಲಿ ಕಡು ಬಡವರಿಗೆ ದಿನ ಬಳಕೆಯ ದಿನಸಿಯನ್ನು ವಿತರಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.
ಇಲ್ಲಿನ ತಾರಾ ಆಸ್ಪತ್ರೆಯ ಮುಂಭಾಗ ಅರಕಲಗೂಡು ಪಟ್ಟಣದ ಎಲ್ಲಾ ವಾರ್ಡಗಳ ಐದು ಮಂದಿ ಕಡು ಬಡವರಿಗೆ ತಮ್ಮ ಬೆಂಬಲಿಗರ ಮೂಲಕ ದಿನ ಬಳಕೆಯ ಬೇಳೆಕಾಳು ಸಕ್ಕರೆ,ಉಪ್ಪು,ಅಡುಗೆ ಎಣ್ಣೆ, ೫ ಕೆಜಿ.ಅಕ್ಕಿ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ತುಂಬಾ ಅಪಾಯಕಾರಿಯಾಗಿದೆ.ಯಾರು ನಿರ್ಲಕ್ಷö್ಯ ಮಾಡಬೇಡಿ.ಬೇರೆಯವರ ಪ್ರಾಣ ನಿಮ್ಮ ಕೈಯಲ್ಲಿದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದರು.
ಇದಲ್ಲದೆ, ಕೈಯನ್ನು ಚೆನ್ನಾಗಿ ಸೋಪ್‌ನಿಂದ ಸ್ವಚ್ಛಗೊಳಿರಿ,ಸ್ಯಾನಿಟೈಸರ್ ಉಪಯೋಗಿಸಿತರಕಾರಿಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ, ಮಾಧ್ಯಮಗಳಲ್ಲಿ ಈಗಾಗಲೇ ನೀವು ನೋಡಿದ್ದಿರಿ, ೬೦ ವರ್ಷ ದವರು ಮತ್ತು ಮಕ್ಕಳುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇನ್ನು ಹಾಸನ ಜಿಲ್ಲೆಯಲ್ಲಿ ಇದುವರೆಗೆ ವೈರಸ್ ಪತ್ತೆಯಾಗಿಲ್ಲ.ಇದಕ್ಕೆ ಕಾರಣ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ ಹಗಲು ರಾತ್ರಿ ಎನ್ನದೆ ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸುತ್ತಿದ್ದಾರೆ.ನಮ್ಮಗಳ ಪಾಲಿಗೆ ಅವರೇ ದೇವರು. ಯಾರು ಮನೆಯಿಂದ ಹೊರಗೆ ಹೊಗಬೇಡಿ.ಸಾಮಾಜಿಕ ಅಂತರ ಇರಲಿ,ಲಾಕ್ ಡೌನ್ ಪಾಲಿಸಿ ಇತರರ ಜೀವ ಉಳಿಸಿ ಎಂದು ಮನವಿ ಮಾಡಿದರು.
ಇದೇ ವೇಳೆ ಬೆಂಬಲಿಗರಾದ ರಮೇಶ್,ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ್,ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ. ರವಿಕುಮಾರ್, ನಂದ ಕುಮಾರ್,ಭಂಗಿ ತಿಮ್ಮನ ಕೊಪ್ಪಲು ರಾಜು ಮುಂತಾದವರು ಹಾಜರಿದ್ದರು.

ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment