ಶೌಚಕ್ಕೂ ಜನ್ರನ್ನ ಬಿಡದ ಗದಗ ಪೊಲೀಸ್ರು..

ಗದಗ : ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಅನ್ನ, ನೀರು ಇಲ್ಲದೇ ನಿಷೇಧಿತ ಪ್ರದೇಶದ ಮಕ್ಕಳು, ವೃದ್ಧರು, ಮಹಿಳೆಯರ ಗೋಳಾಟ ಹೇಳ ತೀರದಾಗಿದೆ.
ಸದ್ಯ ಗದಗ ನಗರದ ರಂಗನವಾಡಿಗಲ್ಲಿ ಕಂಟೈನ್ಮೆAಟ್ ಪ್ರದೇಶ ಅಂತ ಘೋಷಣೆ ಮಾಡಲಾಗಿದ್ದು, ಶೌಚಕ್ಕೂ ಕೂಡ ಜನರನ್ನು ಪೊಲೀಸರು ಹೊರ ಬಿಡುತ್ತಿಲ್ಲ.. ಪರಿಣಾಮ ಐದು ದಿನಗಳಿಂದ ಏನೂ ಇಲ್ಲದೇ ಪರದಾಡುತ್ತಿರೋ ಜನ್ರು ಅದರಲ್ಲೂ ಮಹಿಳೆಯರು ಇಂದು ರೊಚ್ಚಿಗೆದಿದ್ದಾರೆ.
ಅಲ್ಲದೆ, ಏರಿಯಾದಲ್ಲಿ ಸುಲಭ ಶೌಚಾಲಯ ಇಲ್ಲದಕ್ಕೆ ಚೆಂಬೂ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಜನರು ನಿಷೇಧಿತ ಪ್ರದೇಶದಿಂದ ಹೊರ ಬಿಡುವಂತೆ ಆಗ್ರಹಿಸಿದರಲ್ಲದೆ,ಜಿಲ್ಲಾಡಳಿತ ವಿರುದ್ಧ ನಿಷೇಧಿತ ಪ್ರದೇಶದ ಈ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್, ಡಿಸಿ ಎಂ.ಜಿ ಹಿರೇಮಠ ಉಚಿತ ದಿನಸಿ, ಹಾಲು, ತರಕಾರಿ ನೀಡುವ ಭರವಸೆ ನೀಡಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Please follow and like us:

Related posts

Leave a Comment