ಎಕ್ಸ್ ಪ್ರೆಸ್ ಟಿವಿ ವರದಿ ಫಲಶೃತಿ,ಅಲೆಮಾರಿಗಳಿಗೆ ಕೊನೆಗೂ ಸಿಕ್ತು ಹೊಟ್ಟೆ ತುಂಬಾ ಊಟ..

ಸಿಂಧನೂರು: ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಇರುವ ಹಿನ್ನೆಲೆಯಲ್ಲಿ ಬಡವರು,ನಿರ್ಗತಿಕರು,ಕೂಲಿ ಕಾರ್ಮಿಕರು,ಅಲೆಮಾರಿಗಳು ಹಸಿವಿನಿಂದ ಬಳಲುತ್ತಿರುವ ಬಗ್ಗೆ ನಮ್ಮ ಎಕ್ಸ್ಪ್ರೆಸ್ ಟಿವಿ ನಿರಂತರವಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಬಂದಿದೆ.
ಸದ್ಯ ಈ ಸುದ್ದಿಗಳ ಪ್ರಸಾರಕ್ಕೆ ಎಲ್ಲೆಡೆಯಿಂದ ಜನ ಮೆಚ್ಚುಗೆ ವ್ಯಕ್ತವಾಗಿದೆ.ಇದರ ಜೊತೆ ರೈತರ ಬೆಳೆ ಹಾನಿ ಕುರಿತು ಸಾಕಷ್ಟು ವರದಿಗಳನ್ನು ಕೂಡ ನಮ್ಮ ಎಕ್ಸ್ಪ್ರೆಸ್ ಟಿವಿ ಬಿತ್ತರಿಸುತ್ತಲೇ ಇದೆ. ಹೀಗಾಗಿ ಇವುಗಳು ಕೂಡ ಸರ್ಕಾರದ ಹಾಗೂ ಆಯಾಯಾ ಸ್ಥಳೀಯ ಆಡಳಿತಗಳ ಗಮನ ಸೆಳೆದಿದ್ದು,ಇದೀಗ ಅಂತಹ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇನ್ನು ನಿನ್ನೆಯಷ್ಟೆ ರಾಯಚೂರು ಜಿಲ್ಲೆಯ ಸಿಂಧನೂರಿನ ಅಲೆಮಾರಿ ಬುಡಕಟ್ಟು ಜನರು ಒಂದು ಹೊತ್ತಿನ ಊಟ ಸಿಗದೆ ಹಾಸಿಗೆ ಹಿಡಿದಿದ್ದ ಬಗ್ಗೆ ನಮ್ಮ ಎಕ್ಸ್ಪ್ರೆಸ್ ಟಿವಿ `ಲಾಕ್‌ಡೌನ್ ಮುಗಿಯಲ್ಲ, ಅಲೆಮಾರಿಗಳು ಹಸಿವಿನಿಂದ ಸತ್ತರೂ ಅನುಮಾನವಿಲ್ಲ..!’ಎಂಬ ಹೆಡ್‌ಲೈನ್‌ನೊಂದಿಗೆ ಪ್ರಸಾರ ಮಾಡಿದ್ದ ಸುದ್ದಿಯಿಂದ ಇದೀಗ ರಾಯಚೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ಅAದ ಹಾಗೇ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ವಾರ್ಡ್ ನಂ ೨೮ ಹಿರೆಲಿಂಗೆಶ್ವರ್ ಕಾಲೋನಿಗೆ ಭೇಟಿ ನೀಡಿದ ಸಂಬAಧಪಟ್ಟ ಅಧಿಕಾರಿಗಳು ಅಲೆಮಾರಿ ಬುಡಕಟ್ಟು ಜನರಿಗೆ ಆಹಾರ ಪದಾರ್ಥ ವಿತರಿಸಿದ್ದಾರೆ.
ಒಟ್ಟಾರೆ ನಮ್ಮ ಎಕ್ಸ್ಪ್ರೆಸ್ ಟಿವಿ ಮಾಡಿದ್ದ ವರದಿಯಿಂದ ತುತ್ತು ಅನ್ನ ಸಿಗುವಂತಾಯಿತು ಎಂದು ಆ ಅಲೆಮಾರಿ ಜನರು ಸಂತಸ ವ್ಯಕ್ತಪಡಿಸಿದ್ದು,ಬಡಜನರ,ದೀನ ದಲಿತರ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕಲ್ಪಿಸಲು ಎಕ್ಸ್ಪ್ರೆಸ್ ಟಿವಿ ಎಂದಿಗೂ ಬದ್ದವಾಗಿರುತ್ತದೆ.

ಸೈಯದ್ ಬಂದೇ ನವಾಜ್ ಎಕ್ಸ್ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment