ಬಳ್ಳಾರಿಯಲ್ಲಿ ಪ್ರಧಾನಿ `ಜನ್‌ಧನ್’ಗೆ ಮಹಿಳಾ ಮಣಿಗಳ `ಜಡೆ ಜಗಳ..’

ಬಳ್ಳಾರಿ: ಸರ್ಕಾರ ಎಷ್ಟೇ ಹೇಳಿದ್ರು ಸಹ ಸೋಷಿಯಲ್ ಡಿಸ್ಟನ್ಸ್ ಅನ್ನೋ ಪದದ ಅರ್ಥ ನಮ್ಮ ಜನ ಮರ್ತೋಗಿದ್ದಾರೆ ಅಂತ ಅನ್ಸುತ್ತೆ. ಯಾಕಂದ್ರೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬಂಡ್ರಿಯಲ್ಲಿ ಜನಧನ ಹಾಗೂ ಕಿಸಾನ್ ಸಮ್ಮಾನ್ ಹಣ ಪಡೆದುಕೊಳ್ಳೋಕೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಂದೆ, ಜನರು ಗುಂಪು ಗುಂಪಾಗಿ ಸೇರಿದ ಪರಿಣಾಮ ನೂಕು ನುಗ್ಗಲು ಉಂಟಾಗಿದೆ.
ಇನ್ನು ಸರ್ಕಾರ ಆಗ್ಲಿ, ಅಧಿಕಾರಿಗಳಾಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಎಷ್ಟೇ ಹೇಳಿದ್ರು ಸಹ ಅವ್ರ ಮಾತಿಗೆ ನಮ್ಮ ಜನ ಕಿಂಚಿತ್ತು ಬೆಲೆಕೊಡ್ತಿಲ್ಲ ಅನ್ನೋದು ಇದರಿಂದ ಸ್ಪಷ್ಟವಾಗಿದೆ.
ಇದೇ ವೇಳೆ ಸರತಿ ಸಾಲಿನಲ್ಲಿ ನಿಲ್ಲುವ ಸಂಬAಧ ಮಹಿಳೆಯರಿಬ್ಬರು ಜಡೆ ಜಗಳ ನಡೆಸಿದ ಘಟನೆಯೂ ನಡೆಯಿತು.
ಅಲ್ಲದೆ,ಈ ಇಬ್ಬರು ಮಹಿಳೆಯರು ಕೊರೊನಾದ ಬಗ್ಗೆ ಭಯವಿಲ್ಲದೇ ದುಡ್ಡಿಗಾಗಿ ಲಾಕ್‌ಡೌನ್‌ನನ್ನು ಲೆಕ್ಕಿಸದೇ ಬೀದಿಯಲ್ಲಿ ಜಡೆ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.

ನAದೀಶ್ ಎಕ್ಸ್ ಪ್ರೆಸ್ ಟಿವಿ ಸಂಡೂರು(ಬಳ್ಳಾರಿ)

Please follow and like us:

Related posts

Leave a Comment