ಅರಕಲಗೂಡಿನಲ್ಲಿ ಲಾಕ್‌ಡೌನ್‌ಗೆ ಬೆಲೆಯೇ ಇಲ್ಲ..

ಅರಕಲಗೂಡು:ಅರಕಲಗೂಡು ತಾಲೂಕಿನ ಎಲ್ಲ ಗಡಿಭಾಗಗಳನ್ನು ಬಿಗಿಗೊಳಿಸಿರುವ ತಾಲೂಕು ಆಡಳಿತ ಕೊರೊನಾ ಸೋಂಕಿತರು ತಾಲೂಕು ಪ್ರವೇಶಿಸದಂತೆ ಹಗಲಿರುಳು ಎಚ್ಚರವಹಿಸಿ ಕೆಲಸ ಮಾಡುತ್ತಿದೆ.
ಆದರೆ ತಾಲೂಕಿನಲ್ಲಿ ಒಳಗಿರೋ ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದೇ ತಾಲೂಕು ಆಡಳಿತಕ್ಕೆ ದೊಡ್ಡ ತಲೆನೋವಾಗಿದ್ದಾರೆ.
ಸದ್ಯ ಲಾಕ್ ಡೌನ್ ಅನುಷ್ಠಾನಗೊಳಿಸುತ್ತಲೇ ಜನರಿಗೆ ಆಹಾರ ಪದಾರ್ಥಗಳಿಗೆ ತೊಂದರೆ ಆಗದಂತೆ ನಿರ್ವಹಣೆ ಮಾಡುತ್ತಿರುವ ತಾಲೂಕು ಆಡಳಿತಕ್ಕೆ ಕೆಲ ಜನರ ಅಸಹಕಾರ ಕಿರಿಕಿರಿ ಉಂಟುಮಾಡಿದೆ.
ಅಲ್ದೆ..ಲಾಕ್‌ಡೌನ್ ನಡುವೆಯೇ ಆಹಾರ ಪದಾರ್ಥಗಳಿಗಾಗಿ ಕೊಟ್ಟ ಸಮಯದಲ್ಲೇ ಈ ಅವಾಂತರಗಳು ಹೆಚ್ಚಾಗಿ ನಡೆಯುತ್ತಿದೆ.
ಇನ್ನು ಕೆಲ ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನ ಕ್ರಮ ಕೈಗೊಂಡರೆ,ಇಲ್ಲಿನ ಹೆಚ್.ಡಿ.ಸಿ.ಸಿ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಸೇವಾ ಕೇಂದ್ರ ಗ್ರಾಹಕರು ಮಾತ್ರ ಒಬ್ಬರ ಮೇಲೊಬ್ಬರು ಬಿದ್ದು ಸಾಲುಗಟ್ಟಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.
ಇದಲ್ಲದೆ,ಮುಖ್ಯ ರಸ್ತೆಗಳಲ್ಲಿ ಪೊಲೀಸರು ದ್ವಿಚಕ್ರ ವಾಹನಗಳಲ್ಲಿ ಅನಗತ್ಯವಾಗಿ ಸುತ್ತುವವರ ವಿರುದ್ದ ಕ್ರಮ ಜರುಗಿಸಲು ಮುಂದಾಗುತ್ತಿದ್ದAತೆ ಕೆಲ ಯುವಕರು ಅಡ್ಡದಾರಿ ಹಿಡಿದು ಒಳ ರಸ್ತೆಗಳಲ್ಲಿ ತಮ್ಮ ವಾಹನ ಸಂಚಾರಗಳನ್ನು ಆರಂಭಿಸಿದ್ದಾರೆ.
ಈ ನಡುವೆ ಕೆಲ ಬಿಡಾಡಿ ಮನೆಗಳು ಇಸ್ಪೀಟ್ ಕೇಂದ್ರಗಳಾಗಿದ್ದು,ಅವುಗಳ ಮೇಲೆ ಪೋಲಿಸರು ದಾಳಿ ನಡೆಸುತ್ತಿದ್ದರೂ ಇಸ್ಪೀಟ್ ಆಡುವವರು ಮಾತ್ರ ಬುದ್ದಿ ಕಲಿಯುತ್ತಿಲ್ಲ.
ಇದಲ್ಲದೆ,ಪಟ್ಟಣ ಪಂಚಾಯಿತಿ,ಪೊಲೀಸ್ ಅಧಿಕಾರಿಗಳು ಹೀಗೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊAದಿಗೆ ಹಗಲಿರುಳೂ ಶ್ರಮಿಸುತ್ತಿದ್ದರೆ ಮತ್ತೆ ಕೆಲವು ಸಾಮಾಜಿಕ ಕಾರ್ಯಕರ್ತರು ಲಾಕ್ ಡೌನ್ ತೊಂದರೆಗೆ ಸಿಲುಕಿ ಆಹಾರ ವಂಚಿತರು,ಭಿಕ್ಷಕರುಗಳನ್ನು ಹುಡುಕಿ ಆಹಾರ ಒದಗಿಸುವ ಕೆಲಸ ನಿರ್ವಹಿಸುತ್ತಿದ್ದಾರೆ.
ಆದರೆ ಸಾಮಾಜಿಕ ಜವಾಬ್ದಾರಿ ಮರೆತ ಅದೆಷ್ಟೋ ಯುವಕರು ಮಾತ್ರ ಉಡಾಫೆಯಾಗಿ ವರ್ತಿಸುತ್ತಿದ್ದು,ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ.

ಎ.ಎಸ್ ಸಂತೋಷ್ ಎಕ್ಸ್ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment