ಹಾರೆ ಹಿಡಿದು ಬೆವರು ಸುರಿಸಿ ದುಡಿದ ಸಿಎಂ ರಾಜಕೀಯ ಕಾರ್ಯದರ್ಶಿ

ದಾವಣಗೆರೆ: ಹಿಂದೆಲ್ಲಾ ತೆಪ್ಪ ಚಲಾಯಿಸಿ,ಸರ್ಕಾರಿ ಬಸ್ ಓಡಿಸಿ ಸುದ್ದಿಯಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇವತ್ತು ಸ್ವತಃ ಹಾರೆ ಹಿಡಿದು ಕೂಲಿ ಕಾರ್ಮಿಕರ ಜೊತೆ ಬೆವರು ಸುರಿಸಿ ದುಡಿದಿದ್ದಾರೆ..!
ಹೌದು, ಲಾಕ್‌ಡೌನ್ ಮೇ ೩ರವರೆಗೆ ವಿಸ್ತರಣೆ ಮಾಡಲಾಗಿದ್ದು, ಕೂಲಿ – ಕಾರ್ಮಿಕರು ಕೆಲಸ ಇಲ್ಲದೇ ಕಂಗಾಲಾಗಿದ್ದರು.ಹೀಗಾಗಿ ಇವರ ನೆರವಿಗೆ ಬಂದಿರೋ ಎಂ.ಪಿ.ರೇಣುಕಾಚಾರ್ಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ.
ಅಲ್ಲದೆ, ಸ್ವತಃ ಹಾರೆ ಹಿಡಿದು ಕಾರ್ಮಿಕರ ಜೊತೆ ಸ್ವಲ್ಪ ಸಮಯ ಕೆಲಸ ಮಾಡಿದರು. ಅಲ್ಲಿನ ಕೆರೆ ಕಾಮಗಾರಿ ಸಹ ವೀಕ್ಷಿಸಿದರು.
ಇನ್ನು ಕಾರ್ಮಿಕರು ಕೆಲಸದ ವೇಳೆ ಅಂತರ ಕಾಯ್ದುಕೊಳ್ಳಬೇಕು,ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಪಯೋಗಿಸಿ ಎಂದು ಎಂ.ಪಿ.ರೇಣುಕಾಚಾರ್ಯ ಕಾರ್ಮಿಕರಿಗೆ ಸಲಹೆ ನೀಡಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ದಾವಣಗೆರೆ

Please follow and like us:

Related posts

Leave a Comment