ಕೊರೊನಾ ಟೈಂನಲ್ಲಿ ಆಶಾ ಕಾರ್ಯಕರ್ತೆರಿಂದ ಸೈನಿಕರಂತೆ ಕೆಲಸ..

ನೆಲಮಂಗಲ(ಬೆA.ಗ್ರಾಮಾAತರ):ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಪ್ರಮುಖ್ ಭರತ್ ಸೌಂದರ್ಯ ಅಭಿಪ್ರಾಯಪಟ್ಟರು.
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸೌಂದರ್ಯ ಶಿಕ್ಷಣ ಸಂಸ್ಥೆ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಆರೋಗ್ಯ ಕೇಂದ್ರ ವಲಯದ ಆಶಾ ಕಾರ್ಯರ್ತೆಯರಿಗೆ ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಪೌಷ್ಟಿಕ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ಕಳೆದ ಒಂದು ತಿಂಗಳಿAದ ಸಾರ್ವಜನಿಕರಿಗೆ ಕೊರೊನಾ ಅರಿವು,ಮಾಹಿತಿ ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಪ್ರಾಮಾಣಿಕವಾದ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಆರೋಗ್ಯ ಇಲಾಖೆಗೆ ಅಗತ್ಯವಿರುವ ಪ್ರತಿಯೊಂದು ಮಾಹಿತಿಯನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಇವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ಮಾತನಾಡಿ,ವೈದ್ಯಕೀಯ ಸಿಬ್ಬಂದಿಗಳ ಬೆನ್ನೆಲುಬಿನಂತೆ ಆಶಾಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ, ಕೊರೊನಾ ತಡೆಗಟ್ಟಲು ಅಗತ್ಯವಾದ ಮಾಹಿತಿಯನ್ನು ಪ್ರತಿ ಮನೆಮನೆಗೂ ತೆರಳಿ ವಯಸ್ಕರ ಮಾಹಿತಿ ಜ್ವರ ಕೆಮ್ಮು ಇದ್ದರೇ ತಕ್ಷಣ ನಮ್ಮನ್ನು ಸಂಪರ್ಕಿಸಿ ಕೊರೊನಾ ಹರಡದಂತೆ ಗ್ರಾಮಗಳಲ್ಲಿ ಸೈನಿಕರಂತೆ ಕಾರ್ಯ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ಡಾ.ಸಹನಾ, ಸಂತೋಷ್, ಮಂಜುನಾಥ್, ಸುಧಾಕರ್, ಶಿವುಕುಮಾರ್, ಆಟ್ಯೋನಿ, ನಾಗರತ್ನ, ವಿಜಯಲಕ್ಷ್ಮಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ಕೆ.ಕಿರಣ್ ಎಕ್ಸ್ ಪ್ರೆಸ್ ಟಿವಿ ನೆಲಮಂಗಲ(ಬೆA.ಗ್ರಾಮಾAತರ)

Please follow and like us:

Related posts

Leave a Comment