ಗದಗದ ನಾನ್‌ವೆಜ್ ಮಾರ್ಕೆಟ್‌ನಲ್ಲಿ ಜನವೋ ಜನ..!

ಗದಗ : ನಗರದಲ್ಲಿ ನಾನ್‌ವೆಜ್ ಪ್ರೀಯರು ಮಾರ್ಕೆಟ್ ಓಪನ್ ಆಗುತ್ತಿದ್ದಂತೆ ನಾ ಮುಂದೆ, ತಾ ಮುಂದೆ ಅಂತ ಜಮಾವಣೆಗೊಂಡು ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಲು ಮುಂದಾದರು.
ಇಂದು ಭಾನುವಾರದ ಬಾಡೂಟಕ್ಕಾಗಿ ೩ ಗಂಟೆ ಮಾತ್ರ ಮಾಂಸ ಮಾರಾಟ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿತ್ತು.
ಜಿಲ್ಲಾಡಳಿತ ಈ ಆದೇಶದನ್ವಯ ನಗರದ ಜವಳಗಲ್ಲಿ ನಾನ್‌ವೆಜ್ ಮಾರ್ಕೆಟ್‌ನಲ್ಲಿ ಜನಸ್ತೋಮ ನಿರ್ಮಾಣವಾಗಿತ್ತು.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಮಾಂಸ ಪ್ರೀಯರನ್ನ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮೂರು ಸರದಿ ಸಾಲಿನಲ್ಲಿ ನಿಲ್ಲಿಸಿ ಮಾಂಸ ಖರೀದಿಗೆ ಅವಕಾಶ ಕಲ್ಪಿಸಿದರು.
ಇನ್ನು ಪೊಲೀಸರ ಸರ್ಪಗಾವಲಿನಲ್ಲಿ ಜನ ಸರದಿ ಸಾಲಿನಲ್ಲಿ ಮಟನ್, ಚಿಕನ್, ಫಿಶ್ ಖರೀದಿ ಮಾಡಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Please follow and like us:

Related posts

Leave a Comment