ಹೊರ ರಾಜ್ಯದಲ್ಲಿ ರಾಜ್ಯದ ಕೂಲಿ ಕಾರ್ಮಿಕರಿಗೆ ಒಂದೊತ್ತಿನ ಊಟಕ್ಕೂ ಗತಿ ಇಲ್ಲ..

ತಾಳಿಕೋಟೆ(ವಿಜಯಪುರ):ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯದಲ್ಲಿರುವ ರಾಜ್ಯದ ಕೂಲಿ ಕಾರ್ಮಿಕರ ಪರಿಸ್ಥಿತಿ ಹೇಳತೀರದಾಗಿದೆ.
ಸದ್ಯ ಗೋವಾ ನಂತರ ಮಹಾರಾಷ್ಟçದಲ್ಲೂ ರಾಜ್ಯದ ಮಂದಿ ಊಟವಿಲ್ಲದೇ ತತ್ತರಿಸಿ ಹೋಗಿದ್ದಾರೆ.
ಅಂದ ಹಾಗೇ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಕ್ಷೇತ್ರದ ಬ. ಸಾಲವಾಡಗಿ ಗ್ರಾಮದ ಕೂಲಿ ಕಾರ್ಮಿಕರು ಮಹಾರಾಷ್ಟ್ರದ ಇಚಲಕರಂಜಿ ಸಿಲುಕಿಕೊಂಡಿದ್ದಾರೆ.ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ರಾಜ್ಯಕ್ಕೂ ಬರಲಾಗದೇ ಅತ್ತ ಸರಿಯಾಗಿ ಊಟವೂ ಇಲ್ಲದೇ ನರಳಾಡುವ ಸ್ಥಿತಿ ಬಂದೊAದಗಿದೆ.
ಇನ್ನು ಇಲ್ಲಿರುವ ನಮ್ಮ ಪರಿಸ್ಥಿತಿ ಗಂಭೀರವಾಗಿದೆ.ಒAದು ಹೊತ್ತಿನ ಊಟವೂ ನಮ್ಮಗಿಲ್ಲಿ ಸಿಗುತ್ತಿಲ್ಲ.ಹೀಗಾಗಿ ಕೂಡಲೇ ನಮ್ಮನ್ನು ಬ. ಸಾಲವಾಡಗಿ ಗ್ರಾಮಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡುವಂತೆ ಈ ಕೂಲಿ ಕಾರ್ಮಿಕರೆಲ್ಲಾ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರಿಗೆ ವಿಡಿಯೋ ಮುಖಾಂತರ ಮನವಿ ಮಾಡಿದ್ದಾರೆ.

ಶಾಂತಗೌಡ ಪಾಟೀಲ್ ಎಕ್ಸ್ ಪ್ರೆಸ್ ಟಿವಿ ತಾಳಿಕೋಟೆ(ವಿಜಯಪುರ)

Please follow and like us:

Related posts

Leave a Comment