ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲು ಸಿಎಂಗೆ ಮನವಿ

ಸಿಂಧನೂರು(ರಾಯಚೂರು):ಅಕಾಲಿಕ ಮಳೆಯಿಂದ ನಾಶವಾದ ಭತ್ತ ಬೆಳೆಯನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ವೀಕ್ಷಣೆ ಮಾಡಿದರಲ್ಲದೆ, ಸೂಕ್ತ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ತಾಲೂಕಿನ ಬಸಾಪೂರ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ರೈತರು ಭತ್ತವನ್ನು ನಾಟಿ ಮಾಡಿದರು.ಆದರೆ ಇತ್ತೀಚಿಗೆ ಬಂದ ಅಕಾಲಿಕ ಮಳೆಯಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಸಂಪೂರ್ಣವಾಗಿ ನಾಶವಾಗಿದೆ.
ಇನ್ನು ಕಳೆದ ಬಾರಿ ಕೆಲವು ಒಂದು ಬೆಳೆಯನ್ನು ಬೆಳೆಯದ ರೈತರು ಈ ಬಾರಿಯಾದರೂ ಎರಡೂ ಬೆಳೆಗಳನ್ನು ಬೆಳೆಯಬೇಕೆಂದುಕೊAಡು
ಭತ್ತವನ್ನು ನಾಟಿ ಮಾಡಿದರು.ಆದರೆ ಅಕಾಲಿಕ ಮಳೆಯಿಂದ ಈ ಭತ್ತವೆಲ್ಲಾ ಸಂಪೂರ್ಣ ನಾಶವಾಗಿದೆ.
ಇದೇ ವೇಳೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಬಸಾಪೂರ ಗ್ರಾಮಕ್ಕೆ ತೆರಳಿ ನಾಶವಾದ ಭತ್ತವನ್ನು ವೀಕ್ಷಣೆ ಮಾಡಿದರಲ್ಲದೆ,ಸ್ಥಳದಲ್ಲೇ ಜಿಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಸರಿಯಾಗಿ ಸರ್ವೇ ಮಾಡಬೇಕು. ಜೊತೆಗೆ ಹಿಂದೆ ಮಾಜಿ ಸಿಎಂ ಸಿದ್ಧರಾಮಯ್ಯ ಕೊಟ್ಟ ರೀತಿಯಲ್ಲಿ ಈ ಬಾರಿ ಪರಿಹಾರ ಕೊಡಲು ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದರು…

ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment